More

    4 ತಿಂಗಳಲ್ಲಿ ಪಂಚಮಸಾಲಿ ಸಭಾಭವನ ಪೂರ್ಣ

    ಶಿಗ್ಗಾಂವಿ(ಗ್ರಾ): ದೇಶದ ಆಧಾರಸ್ತಂಭಗಳಾದ ಸೈನಿಕ, ರೈತರನ್ನು ಸನ್ಮಾನಿಸಿ ಗೌರವಿಸುವ ಮನೋಭಾವ ಪ್ರತಿಯೊಬ್ಬ ಭಾರತೀಯರಲ್ಲಿ ಮೂಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

    ಪಟ್ಟಣದಲ್ಲಿ ಸೋಮವಾರ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಬಿಜೆಪಿ ಪಕ್ಷದಿಂದ 75 ಜನ ಹಾಲಿ, ಮಾಜಿ ಸೈನಿಕರಿಗೆ ಸನ್ಮಾನ ಹಾಗೂ ಪಂಚಮಸಾಲಿ ಸಮಾಜದ ಸಭಾಭವನ ಮತ್ತು ಕಲ್ಯಾಣ ಮಂಟಪ ಶಂಕುಸ್ಥಾಪನೆ ಸಮಾರಂಭದಲ್ಲಿ ಅವರು ಮಾತನಾಡಿದರು. ಪಂಚಮಸಾಲಿ ಸಮಾಜದ ಸಭಾಭವನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎರಡು ಎಕರೆ ಜಮೀನು ನೀಡಿ, ಸುಮಾರು 6.5 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ. ಮೂರು ಅಂತಸ್ತಿನಲ್ಲಿ ಕಟ್ಟಡ ನಿರ್ವಣವಾಗಲಿದ್ದು, ನಾಲ್ಕು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.

    ಸಂಸದ ಶಿವಕುಮಾರ ಉದಾಸಿ ಮಾತನಾಡಿ, ಸೈನಿಕರ ಪರಿಶ್ರಮದಿಂದ ನಾಡಿನ ಜನತೆ ಸುರಕ್ಷಿತವಾಗಿ ಬದುಕುತ್ತಿದ್ದಾರೆ. ಆಹಾರ ಧಾನ್ಯಗಳನ್ನು ಇತರ ದೇಶಗಳಿಂದ ರಪ್ತು ಮಾಡಿಕೊಳ್ಳುತ್ತಿದ್ದೇವು. ಇಂದು ನಮ್ಮ ದೇಶ ಇತರ ದೇಶಗಳಿಗೆ ರಪ್ತು ಮಾಡುತ್ತಿದೆ. ಅದಕ್ಕೆ ನಮ್ಮ ರೈತರ ಶ್ರಮ ಆಹಾರ ಉತ್ಪಾದನೆಯಲ್ಲಿ ಹೆಚ್ಚಾಗಿದೆ ಎಂದರು.

    ಮಾಜಿ ಸಂಸದ ಮಂಜುನಾಥ ಕುನ್ನೂರ, ಬಿಜೆಪಿ ತಾಲೂಕಾಧ್ಯಕ್ಷ ಶಿವಾನಂದ ಮ್ಯಾಗೇರಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ಗಂಗಣ್ಣ ಸಾತಣ್ಣವರ ಮಾತನಾಡಿದರು. ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ವೀರೇಶ ಆಜೂರ, ಪುರಸಭೆ ಅಧ್ಯಕ್ಷೆ ರೂಪಾ ಬನ್ನಿಕೊಪ್ಪ, ಉಪಾಧ್ಯಕ್ಷೆ ಶೇಖವ್ವ ಶಿಗ್ಗಾವಿ, ಮುಖ್ಯಮಂತ್ರಿ ಆಪ್ತ ಸಹಾಯಕ ಚನ್ನು ಪಾಟೀಲ, ಮಂಜುನಾಥ ಉಡುಪಿ, ವಿಶ್ವನಾಥ ಹರವಿ, ಶಂಬಣ್ಣ ಕಡಕೋಳ, ಡಾ. ಮಲ್ಲೇಶಪ್ಪ ಹರಿಜನ, ಮಂಜು ಬ್ಯಾಹಟ್ಟಿ, ನಿಂಗಪ್ಪ ಹರಿಜನ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts