More

    ಇಮ್ರಾನ್ ಖಾನ್ ಬಂಧನಕ್ಕೆ ಮುಂದಾದ ಪಾಕ್ ಪೊಲೀಸ್; ಬೆಂಬಲಿಗರಿಂದ ಕಲ್ಲುತೂರಾಟ, ಗಲಭೆ…

    ಲಾಹೋರ್: ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್​ನನ್ನು ಬಂಧಿಸಲು ಇಸ್ಲಾಮಾಬಾದ್ ಪೊಲೀಸರು ಮಂಗಳವಾರ ಲಾಹೋರ್‌ನ ಜಮಾನ್ ಪಾರ್ಕ್‌ನಲ್ಲಿರುವ ಅವರ ನಿವಾಸದ ಹೊರಗೆ ಶಸ್ತ್ರಸಜ್ಜಿತ ವಾಹನಗಳಲ್ಲಿ ಬಂದಿದ್ದು ಅವವರ ಹಾಗೂ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಬೆಂಬಲಿಗರ ನಡುವೆ ಘರ್ಷಣೆ ಉಂಟಾಗಿದೆ.

    ಇದನ್ನೂ ಓದಿ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್​ ವಿರುದ್ಧ ಬೌನ್ಸರ್!

    ಪಾಕಿಸ್ತಾನದ ಮಾಜಿ ಪ್ರಧಾನಿ ನಿವಾಸದ ಹೊರಗೆ ಪೊಲೀಸರು ಆಗಮಿಸಿದ ನಂತರ, ಪಿಟಿಐ ಅಧಿಕೃತ ಟ್ವಿಟ್ಟರ್ ಖಾತೆಯು ಜಮಾನ್ ಪಾರ್ಕ್‌ನ ಹೊರಗೆ ಜಮಾಯಿಸುವಂತೆ ತನ್ನ ಕಾರ್ಯಕರ್ತರು ಮತ್ತು ಬೆಂಬಲಿಗರನ್ನು ಒತ್ತಾಯಿಸಿದೆ. ಇಮ್ರಾನ್ ಖಾನ್ ಅವರ ಜಮಾನ್ ಪಾರ್ಕ್ ನಿವಾಸದ ಹೊರಗೆ ಪಿಟಿಐ ಬೆಂಬಲಿಗರನ್ನು ಚದುರಿಸಲು ಇಸ್ಲಾಮಾಬಾದ್ ಪೊಲೀಸರು ಜಲಫಿರಂಗಿ, ಲಾಠಿ ಚಾರ್ಜ್ ಮತ್ತು ಅಶ್ರುವಾಯು ಪ್ರಯೋಗಿಸಿದರು.

    ಪಾಕಿಸ್ತಾನದ ಸುದ್ದಿಸಂಸ್ಥೆ ಡಾನ್ ಪ್ರಕಾರ, ಪೊಲೀಸರು ಶಸ್ತ್ರಸಜ್ಜಿತ ವಾಹನದ ಹಿಂದೆ ಮಾಜಿ ಪ್ರಧಾನಿ ನಿವಾಸವನ್ನು ಸಮೀಪಿಸುತ್ತಿದ್ದಂತೆ ಕೆಲವು ಬೆಂಬಲಿಗರು ಪೊಲೀಸ್ ಅಧಿಕಾರಿಗಳ ಮೇಲೆ ಕಲ್ಲು ಎಸೆದರು. ಪೊಲೀಸರು ಇಮ್ರಾನ್ ಖಾನ್ ನಿವಾಸದ ಮುಖ್ಯ ಗೇಟ್ ಅನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ.

    ಇದನ್ನೂ ಓದಿ: ಇಮ್ರಾನ್ ಖಾನ್ ಆಡಿಯೋ ಲೀಕ್​: ನಿಮ್ಮಿಂದಾಗಿ ನನ್ನ ಖಾಸಗಿ ಅಂಗಗಳು ನೋಯುತ್ತಿವೆ.. ಇಂದು ಬರೋಕೆ ಆಗಲ್ಲ…

    ಜಮಾನ್ ಪಾರ್ಕ್‌ನ ಹೊರಗೆ ಪೋಲೀಸರು ಬಲಪ್ರಯೋಗ ಮಾಡಿದ ನಂತರ, ಪಿಟಿಐ ಪಕ್ಷದ ಶಾ ಮಹಮೂದ್ ಖುರೇಷಿ ಸುದ್ದಿಗಾರರೊಂದಿಗೆ ಮಾತನಾಡಿ ‘ಇಸ್ಲಾಮಾಬಾದ್ ಡಿಐಜಿ ಜತೆ ಕಾರ್ಯಾಚರಣೆ ಬಗ್ಗೆ ಮಾತನಾಡಲು ಬಂದಿದ್ದೇನೆ’ ಎಂದಿದ್ದು ಈ ಸಂದರ್ಭ ಪರಿಸ್ಥಿತಿಯನ್ನು ಉಲ್ಬಣಗೊಳಿಸದಂತೆ ಪೊಲೀಸರನ್ನು ಒತ್ತಾಯಿಸಿದರು. ಖುರೇಷಿ ಪ್ರಕಾರ, ಪೊಲೀಸರು ಬಂಧನ ವಾರಂಟ್ ಹೊಂದಿದ್ದರು. ಖುರೇಷಿ ಸಭೆ ಕರೆದಿದ್ದು ಮತ್ತು ಪೊಲೀಸರು ತಮ್ಮ ಆದೇಶಗಳನ್ನು ನೇರವಾಗಿ ತನಗೆ ತಿಳಿಸುವಂತೆ ಒತ್ತಾಯಿಸಿದರು. ಪಿಟಿಐ ಕಾರ್ಯಕರ್ತರ ವಿರುದ್ಧ ಪೊಲೀಸರ ಕ್ರಮಗಳು ಆಧಾರರಹಿತವಾಗಿವೆ ಎಂದು ಅವರು ವಾದಿಸಿದರು. ಮತ್ತು ಪೊಲೀಸರು ತಕ್ಷಣ ತಮ್ಮ ಚಟುವಟಿಕೆಗಳನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು. (ಏಜೆನ್ಸೀಸ್ದೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts