More

    ‘ಲಾಕ್​ಡೌನ್​ ತೆರವುಗೊಳಿಸುತ್ತೇವೆ, ಕರೊನಾದೊಂದಿಗೇ ಬದುಕೋಣ…’ಎಂದ ಪಾಕ್​ ಪ್ರಧಾನಿ

    ಇಸ್ಲಮಾಬಾದ್​: ನೆರೆರಾಷ್ಟ್ರ ಪಾಕಿಸ್ತಾನದಲ್ಲಿ ಕೊವಿಡ್-19 ಪ್ರಸರಣ ಹೆಚ್ಚಾಗಿಯೇ ಇದೆ. 72, 460 ಮಂದಿಗೆ ಸೋಂಕು ತಗುಲಿದ್ದು, 1,543 ಮಂದಿ ಮೃತಪಟ್ಟಿದ್ದಾರೆ.

    ಪಾಕಿಸ್ತಾನದಲ್ಲಿ ಮೊದಲಿನಿಂದಲೂ ಕರೊನಾ ನಿಯಂತ್ರಣ ಕ್ರಮವನ್ನು ಸರಿಯಾಗಿ ಪಾಲಿಸಲಿಲ್ಲ ಎಂಬ ಆರೋಪ ಕೇಳಿಬಂದಿದೆ. ಅಲ್ಲಿನ ವೈದ್ಯರೇ ಅದನ್ನು ಈ ಹಿಂದೆ ಪ್ರತಿಭಟನೆ ಮೂಲಕ ತಿಳಿಸಿದ್ದಾರೆ.
    ಅಲ್ಲಿ, ಲಾಕ್​​ಡೌನ್​ ಇದ್ದರೂ ಸಹ ಅದನ್ಯಾರೂ ಸರಿಯಾಗಿ ಪಾಲನೆ ಮಾಡಿಲ್ಲ. ಮಸೀದಿಗೆಳಿಗೆ ಗುಂಪಾಗಿ ಹೋಗುವುದು, ಸಾಮೂಹಿಕ ಪ್ರಾರ್ಥನೆ ಮಾಡುವುದೆಲ್ಲ ಮುಂದುವರಿದೇ ಇತ್ತು ಎಂದು ಅಲ್ಲಿನ ಪತ್ರಿಕೆಗಳೇ ವರದಿ ಮಾಡಿವೆ.

    ಇದೀಗ ಪ್ರಧಾನಿ ಇಮ್ರಾನ್​ ಖಾನ್ ಅವರು ಪಾಕಿಸ್ತಾನದಲ್ಲಿ ಲಾಕ್​ಡೌನ್​ ನಿರ್ಬಂಧವನ್ನು ಸಂಪೂರ್ಣವಾಗಿ ತೆರವುಗೊಳಿಸುವುದಾಗಿ ತಿಳಿಸಿದ್ದಾರೆ. ದೇಶದಲ್ಲಿ ಆರ್ಥಿಕತೆ ಸಂಪೂರ್ಣವಾಗಿ ಕುಸಿದಿದೆ. ಹಾಗಾಗಿ ಲಾಕ್​ಡೌನ್​ ತೆರವುಗೊಳಿಸಲು ನಿರ್ಧಾರ ಮಾಡಲಾಗಿದೆ. ನೀವು ವೈರಸ್​ನೊಂದಿಗೆ ಬದುಕುವುದನ್ನು ರೂಢಿಸಿಕೊಳ್ಳಿ ಎಂದು ಇಮ್ರಾನ್ ಖಾನ್​ ದೇಶದ ಜನರಿಗೆ ಹೇಳಿದ್ದಾರೆ.

    ಇದನ್ನೂ ಓದಿ: ಚೆನ್ನೈನಲ್ಲಿನ್ನು ಕ್ಷೌರ ಮಾಡಿಸಲು ಆಧಾರ್ ಕಡ್ಡಾಯ..!

    ಪಾಕಿಸ್ತಾನ ಸರ್ಕಾರ ಈಗಾಗಲೇ ಅರ್ಧ ನಿರ್ಬಂಧವನ್ನು ಸಡಿಲಗೊಳಿಸಿದೆ. ಆರ್ಥಿಕತೆ ಕುಸಿತವನ್ನು ತಡೆಯುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಚಟುವಟಿಕೆಯನ್ನು ಶುರು ಮಾಡಿದೆ. ಆದರೆ ಸಿನಿಮಾ, ಥಿಯೇಟರ್​, ಶಾಲೆಗಳು ಇನ್ನೂ ತೆರೆದಿಲ್ಲ.

    ಪಾಕಿಸ್ತಾನದಲ್ಲಿ ಇರುವ 72, 460 ಕರೊನಾ ಸೋಂಕಿತರಲ್ಲಿ ಸುಮಾರು 6,70,800 ಪ್ರಕರಣಗಳು ಲಾಹೋರ್​​ನಿಂದಲೇ ವರದಿಯಾಗಿವೆ. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಇಮ್ರಾನ್​ ಖಾನ್​ ಅವರು ಲಾಕ್​ಡೌನ್​ ನಿರ್ಬಂಧ ಸಂಪೂರ್ಣ ಸಡಿಲಿಕೆಯ ಘೋಷಣೆ ಮಾಡಿದ್ದಾರೆ.

    ಇದನ್ನೂ ಓದಿ: ಶಾಲೆಗಳ ಪುನರಾರಂಭ ಕುರಿತು ಪೋಷಕರಿಂದಲೇ ಅಭಿಪ್ರಾಯ ಸಂಗ್ರಹ: ಸಚಿವ ಸುರೇಶ್​ ಕುಮಾರ್​

    ಪಾಕಿಸ್ತಾನದಲ್ಲಿ ರಫ್ತು ಕುಸಿತವಾಗಿದೆ. ಶೇ. ಆದಾಯ ಕೊರತೆ, ಹಣದ ರವಾನೆಗಳಿಂದ ಮುಂದಿನ ತಿಂಗಳುಗಳಲ್ಲಿ ಮತ್ತಷ್ಟು ಆರ್ಥಿಕತೆ ಹದಗೆಡುವ ಸಾಧ್ಯತೆ ಇದೆ. ದೇಶದಲ್ಲಿ ಬಡತನ ರೇಖೆಗಿಂತಲೂ ಕೆಳಗೆ ಇರುವವರು 5 ಕೋಟಿ ಜನರಿದ್ದಾರೆ. 2.5ಕೋಟಿ ಜನ ದಿನಗೂಲಿ ನೌಕರರು ಇದ್ದಾರೆ. ಲಾಕ್​ಡೌನ್​ ಮುಂದುವರಿದರೆ ಅವರಿಗೆಲ್ಲ ತೀವ್ರ ತೊಂದರೆಯಾಗುತ್ತದೆ. ಅವರ ಕೈಯಲ್ಲಿ ಹಣವಿಲ್ಲದೆ ಇದ್ದರೆ ಬದುಕುವುದು ಹೇಗೆ? ಎಷ್ಟು ದಿನವೆಂದು ಅವರಿಗೆ ನಾವು ಹಣ ಕೊಡಲು ಸಾಧ್ಯ ಎಂದು ಇಮ್ರಾನ್ ಖಾನ್​ ಪ್ರಶ್ನಿಸಿದ್ದಾರೆ.

    ಲಾಕ್​ಡೌನ್​ನಿಂದ ಕರೊನಾ ವೈರಸ್​ ನಿಯಂತ್ರಣ ಆಗುವುದಿಲ್ಲ. ಅದಕ್ಕೆ ಲಸಿಕೆ ಕಂಡು ಹಿಡಿದ ವಿನಃ ಅದು ನಿರ್ಮೂಲನೆಯಾಗುವುದಿಲ್ಲ ಎಂದು ಇಮ್ರಾನ್​ ಖಾನ್ ಹೇಳಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts