More

    ಇನ್ನು ಮೂರೇ ತಿಂಗಳಲ್ಲಿ ಚುನಾವಣೆ: ಪಾಕ್ ನ್ಯಾಷನಲ್ ಅಸೆಂಬ್ಲಿ ವಿಸರ್ಜನೆ

    ನವದೆಹಲಿ: ‘ಜನರೇ.. ಬೀದಿಗಿಳಿದು ಪ್ರತಿಭಟನೆ ನಡೆಸಿ..’ ಎಂದು ನಿನ್ನೆಯಷ್ಟೇ ಹೇಳಿದ್ದ ಪಾಕಿಸ್ತಾನದ ಪ್ರಧಾನಿ ಇಮ್ರಾನ್​ ಖಾನ್, ಜನರೇ ಚುನಾವಣೆಗೆ ಸಜ್ಜಾಗಿ ಎಂದು ಇಂದು ಕರೆ ನೀಡಿದ್ದಾರೆ. ಅಷ್ಟಕ್ಕೂ ಅವರು ಹೀಗೆನ್ನಲು ಕಾರಣ ಅವಿಶ್ವಾಸ ಗೊತ್ತುವಳಿ ರದ್ದಾಗಿದ್ದು ಹಾಗೂ ನ್ಯಾಷನಲ್ ಅಸೆಂಬ್ಲಿ ವಿಸರ್ಜನೆ ಆಗಿದ್ದು.

    ಇಮ್ರಾನ್ ಖಾನ್ ವಿರುದ್ಧ ಇದ್ದ ಅವಿಶ್ವಾಸ ಗೊತ್ತುವಳಿಯನ್ನು ಅಲ್ಲಿನ ಡೆಪ್ಯುಟಿ ಸ್ಪೀಕರ್ ಖಾಸಿಂ ಸುರಿ ತಿರಸ್ಕರಿಸಿದ್ದು, ಈ ಅವಿಶ್ವಾಸ ಗೊತ್ತುವಳಿ ಪಾಕಿಸ್ತಾನದ ಸಂವಿಧಾನ ಮತ್ತು ನಿಯಮಗಳಿಗೆ ವಿರುದ್ಧವಾದುದು ಎಂದು ವ್ಯಾಖ್ಯಾನಿಸಿದ್ದಾರೆ. ಮತ್ತೊಂದೆಡೆ ಪಾಕ್ ಅಧ್ಯಕ್ಷ ಆರಿಫ್ ಅಲ್ವಿ ನ್ಯಾಷನಲ್ ಅಸೆಂಬ್ಲಿಯನ್ನು ವಿಸರ್ಜನೆ ಮಾಡಿದ್ದು, ಮೂರು ತಿಂಗಳೊಳಗಾಗಿ ಚುನಾವಣೆ ನಡೆಸಬೇಕು ಎಂದಿದ್ದಾರೆ.

    ಈ ಎಲ್ಲದರ ಹಿನ್ನೆಲೆಯಲ್ಲಿ ಚುನಾವಣೆ ನಡೆಯುವವರೆಗೂ ಇಮ್ರಾನ್​ ಖಾನ್​ ಪ್ರಧಾನಿ ಆಗಿಯೇ ಮುಂದುವರಿಯಲಿದ್ದಾರೆ. ಇನ್ನೊಂದೆಡೆ ಸರ್ಕಾರದ ವಿರುದ್ಧ ನಡೆಸಿದ್ದ ಷಡ್ಯಂತ್ರ ನಾಶವಾಗಿದೆ, ಜನರು ಚುನಾವಣೆಗೆ ಸಜ್ಜಾಗಿ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

    ಮಸೀದಿಗಳಲ್ಲಿನ ಲೌಡ್ ಸ್ಪೀಕರ್ ತೆಗೆಸಿರಿ, ಇಲ್ಲದಿದ್ದರೆ..; ಸರ್ಕಾರಕ್ಕೆ ಸವಾಲೆಸೆದ ರಾಜ್​ ಠಾಕ್ರೆ

    ಒಂದೊಪ್ಪತ್ತಲ್ಲೇ ಭಾರಿ ವಿರೋಧಕ್ಕೆ ಮಣಿದ ಶ್ರೀಲಂಕಾ ಸರ್ಕಾರ; ಆಗಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts