More

    ಸಹಕಾರಿ ಸಂಘಗಳಿಂದ ಗ್ರಾಮೀಣರ ಜೀವನ ಮಟ್ಟ ಸುಧಾರಣೆ

    ಬ್ಯಾಡಗಿ: ಗ್ರಾಮೀಣ ಪ್ರದೇಶದಲ್ಲಿ ಸಹಕಾರಿ ಸಂಘಗಳು ಜನರಿಗೆ ಆರ್ಥಿಕ ಸಹಾಯ ಒದಗಿಸುವ ಮೂಲಕ ಜೀವನಮಟ್ಟ ಸುಧಾರಣೆಯಲ್ಲಿ ಪ್ರಮುಖ ಪಾತ್ರವಹಿಸಿವೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.

    ತಾಲೂಕಿನ ಮೋಟೆಬೆನ್ನೂರು ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ವೀರರಾಣಿ ಕಿತ್ತೂರು ಚನ್ನಮ್ಮ ಕ್ಷೇಮಾಭಿವೃದ್ಧಿ ಸಹಕಾರಿ ಸಂಘ ನಿಯಮಿತದ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

    ತಾಲೂಕು ಕೇಂದ್ರ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಬ್ಯಾಂಕ್​ಗಳ ಆರಂಭವಾಗುವ ಮುನ್ನವೇ, ಸ್ಥಳೀಯ ಮಟ್ಟದಲ್ಲಿ ಸಂಘ- ಸಂಸ್ಥೆ ಹಾಗೂ ಸಹಕಾರಿ ಸಂಘಗಳು ಆರ್ಥಿಕ ಮುನ್ನೆಡೆ ಸಾಧಿಸಿವೆ. ಆದರೆ, ದೊಡ್ಡ ಪ್ರಮಾಣದಲ್ಲಿ ಜನರಿಗೆ ಸಹಕಾರ ನೀಡಲು ಸಾಧ್ಯವಾಗದಿದ್ದರೂ, ಸ್ಥಳೀಯರ ಅಗತ್ಯತೆಗನುಗುಣವಾಗಿ ಸಹಾಯ ಮಾಡಿವೆ ಎಂದರು.

    ಸಾಲ ಪಡೆಯುವ ಮುನ್ನ ಪ್ರತಿಯೊಬ್ಬರೂ ತಮ್ಮ ಆದಾಯದತ್ತ ಗಮನವಿರಬೇಕು. ಇಲ್ಲವಾದಲ್ಲಿ ಮರಳಿ ಹಣ ಪಾವತಿಸಲಾಗದೆ, ತೊಂದರೆ ಅನುಭವಿಸಬೇಕಾಗುತ್ತದೆ. ತಮ್ಮ ಆರ್ಥಿಕ ಸಾಮರ್ಥ್ಯ ನೋಡಿಕೊಂಡು ವ್ಯವಹರಿಸುವುದು ಉತ್ತಮ ಎಂದರು.

    ಷೇರುದಾರರಿಗೆ ಹಾಗೂ ಗ್ರಾಹಕರಿಗೆ ಸಮರ್ಪಕ ನ್ಯಾಯ ಒದಗಿಸುವ ಮೂಲಕ ಸಂಸ್ಥೆಯ ಅಭಿವೃದ್ಧಿಗೂ ಗಮನ ಹರಿಸಬೇಕಿದೆ. ಈ ನಿಟ್ಟಿನಲ್ಲಿ ಆಡಳಿತ ಮಂಡಳಿ ನಿರ್ದೇಶಕರು ವಿಶೇಷ ಗಮನಹರಿಸಬೇಕು ಎಂದರು.

    ಬ್ಯಾಂಕ್ ನಿರ್ದೇಶಕ ನಿಂಗಪ್ಪ ಅಂಗಡಿ ಮಾತನಾಡಿ, ಮೋಟೆಬೆನ್ನೂರು ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ಕ್ಷೇಮಾಭಿವೃದ್ಧಿ ಸಹಕಾರಿ ಸಂಘ ನಿಯಮಿತ 450 ಷೇರುದಾರರನ್ನು ಹೊಂದಿದ್ದು, 2007ರಲ್ಲಿ 25 ಜನರಿಂದ ಬೆಳೆದ ಸಂಘ, ಈಗ ಬ್ಯಾಂಕ್ ರೂಪದಲ್ಲಿ ವಹಿವಾಟು ನಡೆಸುತ್ತಿದೆ. ದ್ವಿಚಕ್ರ ವಾಹನ ಸೇರಿದಂತೆ ವಿವಿಧ ಕೃಷಿ ಹಾಗೂ ಕೃಷಿಯೇತರ ಉದ್ಯೋಗಗಳಿಗೆ ಸಾಲ ವಿತರಿಸುತ್ತಿದೆ. ಲಾಭಾಂಶದಲ್ಲಿ ಗ್ರಾಮದಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಹಾಗೂ ಗ್ರಾಮದ ಬಡಕುಟುಂಬಗಳಲ್ಲಿ ಮೃತಪಟ್ಟವರ ಶವ ಸಂಸ್ಕಾರಕ್ಕೆ 2 ಸಾವಿರ ರೂ. ವಿತರಿಸುವ ಮಹತ್ವದ ಯೋಜನೆಯನ್ನು ಕಳೆದ 15 ವರ್ಷಗಳಿಂದ ಮುಂದುವರಿಸಿದ್ದೇವೆ ಎಂದರು.

    ಸಂಘದ ನಿರ್ದೇಶಕ ಶಿವಬಸಪ್ಪ ಕುಳೇನೂರು, ಸುರೇಶ ಯತ್ನಳ್ಳಿ, ಮಲ್ಲಿಕಾರ್ಜುನ ಬಳ್ಳಾರಿ, ನಾಗರಾಜ ಬಳ್ಳಾರಿ, ಚಂದ್ರನಗೌಡ ಕಲ್ಲಾಪುರ, ಕುರುವತ್ತೆಪ್ಪ ಹಾದರಗೇರಿ, ಡಾ. ಬಸನಗೌಡ ಹೊತಗಿಗೌಡ್ರ, ಪ್ರವೀಣ ಕುಂಠೆ, ಗಾಯತ್ರಿ ಬಳ್ಳಾರಿ, ಅನ್ನಪೂರ್ಣ ಹಾವನೂರು, ಕುಮಾರ ಮುದ್ದಿ, ಲಿಂಗರಜ ಅಯ್ಯಣ್ಣನವರ, ಮುರಿಗೆಪ್ಪಗೌಡ ಪಾಟೀಲ, ಪ್ರಭಾಕರ ಬ್ಯಾಡಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts