More

    ಓದಿನಿಂದ ಸಂವಹನ ಕೌಶಲ ಸುಧಾರಣೆ

    ವಿಜಯವಾಣಿ ಸುದ್ದಿಜಾಲ ಧಾರವಾಡ
    ಓದು ಅನ್ನಮಯ ಕೋಶದಿಂದ ಆನಂದಮಯ ಕೋಶ ಹೊಂದುತ್ತದೆ. ನಿಜವಾದ ಓದು ಮನಸ್ಸಿನ ಮೇಲೆ ಆಳವಾದ ಪ್ರಭಾವ ಬೀರುತ್ತದೆ. ನಿಜ ನೆಲೆಯ ಓದು ನಮ್ಮ ಜೀವನದ ಮುಖ್ಯ ಅಂಶವಾಗಿದೆ ಎಂದು ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದ ಕನ್ನಡ ವಿಭಾಗದ ಉಪನ್ಯಾಸಕಿ ಡಾ. ಶೋಭಾ ನಾಯಕ ಅಭಿಪ್ರಾಯಪಟ್ಟರು.
    ನಗರದ ಕರ್ನಾಟಕ ವಿದ್ಯಾವರ್ಧಕ ಸಂವು ಪ್ರೊ. ಎಸ್​.ಎಲ್​. ಸಂಗಮ ದತ್ತಿ ನಿಮಿತ್ತ ಇತ್ತೀಚೆಗೆ ಆಯೋಜಿಸಿದ್ದ ಉಪನ್ಯಾಸ ಮಾಲಿಕೆಯಲ್ಲಿ ನಿಜದ ನೆಲೆಯಲ್ಲಿ ಓದು ಕುರಿತು ಅವರು ಮಾತನಾಡಿದರು.
    ಜಾಗತೀಕರಣೋತ್ತರದ ಸಂದರ್ಭದಲ್ಲಿ ಯುವ ಪೀಳಿಗೆ ಓದನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದು ಒಂದು ಜಿಜ್ಞಾಸೆಯಾಗಿದೆ. ಪುಸ್ತಕ ಓದುವ ಅಭ್ಯಾಸವನ್ನೇ ಕಳೆದುಕೊಂಡ ಈ ಸಮಯದಲ್ಲಿ ಓದು ನಿಜದ ನೆಲೆಯಲ್ಲಿ ಆಗಬೇಕು. ಅದು ತನ್ನೊಳಗಿನ ಅರಿವಿನಿಂದ ಓದಬೇಕು. ಓದುವಿಕೆ ಅನುಭವಗಳನ್ನು ಕಲಿಸುತ್ತದೆ. ಹೊಸ ಜನರನ್ನು ಪರಿಚಯಿಸುತ್ತದೆ. ಕೇವಲ ಕಲಿಕೆಗೆ ಓದದೆ ಆಸ್ತಕಿಯಿಂದ ಜ್ಞಾನಾರ್ಜನೆಗಾಗಿ ಓದಬೇಕು ಎಂದರು.
    ಚಂದ್ರಕಾಂತ ಬೆಲ್ಲದ ಅಧ್ಯತೆ ವಹಿಸಿದ್ದರು. ರಾಣಿ ಚೆನ್ನಮ್ಮ ವಿವಿ ಕುಲಪತಿ ಪ್ರೊ. ತ್ಯಾಗರಾಜ, ಕರ್ನಾಟಕ ವಿಶ್ವ ವಿದ್ಯಾಲಯದ ಗ್ರಂಥಾಲಯ ವಿಜ್ಞಾನ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಎಸ್​.ಎಲ್​. ಸಂಗಮ, ಬಸವಪ್ರಭು ಹೊಸಕೇರಿ, ಶಂಕರ ಹಲಗತ್ತಿ, ಡಾ. ಶೈಲಜಾ ಅಮರಶೆಟ್ಟಿ, ಶಿವಾನಂದ ಭಾವಿಕಟ್ಟಿ, ಶ್ರೀನಿವಾಸ ವಾಡಪ್ಪಿ, ಜಯದೇವ ಹಿರೇಮಠ, ಎಸ್​.ಸಿ. ಪಾಟೀಲ, ಎಸ್​.ಬಿ. ಪಾಟೀಲ, ಸತ್ಯಾ ಸವಣೂರ, ಶಶಿಕಲಾ ಸಂಗಮ, ಇಂದು ಹಿರೇಮಠ, ಡಿ.ಬಿ. ಬಿರಾದಾರ, ಇತರರು ಇದ್ದರು.
    ಡಾ. ಮಹೇಶ ಹೊರಕೇರಿ ಸ್ವಾಗತಿಸಿದರು. ಶಂಕರ ಕುಂಬಿ ನಿರೂಪಿಸಿದರು. ಡಾ. ಧನವಂತ ಹಾಜವಗೋಳ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts