More

    ಒಂದೇ ಗ್ರಾಮದ 80 ಮಂದಿಯನ್ನು ಬೇಟೆಯಾಡಿ ತಿಂದಿದ್ದ ದೈತ್ಯ ಮೊಸಳೆ ಕೊನೆಗೂ ಸರೆ!

    ಕಂಪಾಲ: ಒಂದೇ ಗ್ರಾಮದ 80 ಮಂದಿಯನ್ನು ಬೇಟೆಯಾಡಿ ತಿಂದಿದ್ದ ಒಸಾಮಾ ಹೆಸರಿನ ದೈತ್ಯ ಮೊಸಳೆಯನ್ನು ಕೊನೆಗೂ ಸರೆಹಿಡಿಯಲಾಗಿದೆ.

    ಆಫ್ರಿಕಾದ ಅತಿದೊಡ್ಡ ಕರೆ ಎನಿಸಿಕೊಂಡಿರುವ ಉಗಾಂಡದ ವಿಕ್ಟೋರಿಯಾ ಕೆರೆಯೇ 75 ವರ್ಷದ ದೈತ್ಯ ಹಾಗೂ ಅಪಾಯಕಾರಿ ಮೊಸಳೆಯ ನೆಚ್ಚಿನ ವಾಸಸ್ಥಳವಾಗಿತ್ತು. ಮೊಸಳೆಗೆ ಒಸಮಾ ಎಂದು ಹೆಸರಿಡಲು ವಿಶೇಷ ಕಾರಣವಿದೆ. 9/11 ದಾಳಿ ಹಿಂದಿನ ಮಾಸ್ಟರ್​ ಮೈಂಡ್​ ಒಸಾಮಾ ಹೆಸರನ್ನು ಮೊಸಳೆಗೆ ಇಡಲಾಗಿದೆ. ಇದು ಒಂದೇ ಗ್ರಾಮದ 80 ಮಂದಿಯನ್ನು ಬೇಟೆಯಾಡಿ ತಿಂದಿದೆ.

    ಮೊಸಳೆ ಸುಮಾರು 16 ಅಡಿ ಉದ್ದವಿದ್ದು, ಉಗಾಂಡದ ಲುಗ್ಯಾಂಗಾ ಪ್ರದೇಶದ ಜನರಿಗೆ ಒಸಾಮಾ ನಿಜಕ್ಕೂ ಉಗ್ರನಂತಿದ್ದ. 1991 ರಿಂದ 2005ರವರೆಗೆ ತನ್ನ ಉಗ್ರ ರೂಪ ತೋರಿದ್ದ ಒಸಾಮಾ ಗ್ರಾಮದ 10ನೇ ಒಂದು ಭಾಗದ ಜನರನ್ನು ನುಂಗಿ ನೀರು ಕುಡಿದಿದ್ದಾನೆ.

    ಕೆರೆಯ ದಡದಲ್ಲಿ ಬಕೆಟ್​ನಿಂದ ನೀರು ತುಂಬಿಸಿಕೊಳ್ಳುತ್ತಿದ್ದ ಮಕ್ಕಳನ್ನು ಸಂಚು ಮಾಡಿ ಬೇಟೆಯಾಡುವುದು ಮತ್ತು ಮೀನುಗಾರಿಕಾ ದೋಣಿಯ ಕೆಳಗೆ ಈಜಿ ಬಂದು ಅದನ್ನು ಮಗುಚಿ ಹಾಕಿ ಒಸಾಮಾ ಬೇಟೆಯಾಡುತ್ತಿದ್ದ ಎಂದು ಸ್ಥಳೀಯರು ಹೇಳಿದ್ದಾರೆ. ಆರಂಭದಲ್ಲಿ ಒಸಾಮಾನನ್ನು ಗ್ರಾಮಸ್ಥರು ದೇವರೆಂದು ನಂಬಿದ್ದರು. ಆದರೆ, ಅದು ಸೈತಾನ್​ ಎಂದು ಇತರರು ಮನವರಿಕೆ ಮಾಡಿಕೊಟ್ಟಾಗ ಎಚ್ಚೆತ್ತುಕೊಂಡಿದ್ದರು.

    ಈ ಹಿಂದೆಯೂ ಒಸಾಮಾನನ್ನು ಸೆರೆಹಿಡಿಯಲು ಅರಣ್ಯ ಇಲಾಖೆಯೊಂದಿಗೆ ಗ್ರಾಮಸ್ಥರು ಸಾಕಷ್ಟು ಹರಸಾಹಸ ಪಟ್ಟಿದ್ದರು. ಆದರೆ, ಒಸಾಮಾ ತಪ್ಪಿಸಿಕೊಳ್ಳುತ್ತಿತ್ತು. ಇದೀಗ ಕೊನೆಗೂ ಮೊಸಳೆಯನ್ನು ಸೆರೆಹಿಡಿಯಲಾಗಿದ್ದು, ಗ್ರಾಮಸ್ಥರಲ್ಲಿ ಸಂತಸ ಉಂಟಾಗಿದೆ. (ಏಜೆನ್ಸೀಸ್​)

    ಪ್ರೀತಿಸಿ ಮದುವೆಯಾದ ಯುವತಿಯ ಆಧಾರ್​ ಕಾರ್ಡ್​ ಮಾಹಿತಿ ನೀಡಿ ಶಾಕ್​ ಆದ ಯುವಕ..!

    ಸೋಷಿಯಲಿಸಂ ಕೈಹಿಡಿದ ಮಮತಾ ಬ್ಯಾನರ್ಜಿ! ಬಂಗಾಳದಲ್ಲಲ್ಲ, ತಮಿಳುನಾಡಲ್ಲಿ!

    ವರ್ಷವಾದರೂ ಬರಲೇ ಇಲ್ಲ ಸಂಬಳ; ಡೆತ್​ ನೋಟ್​ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts