More

    ಇಮ್ಮಡಿ ಹರಿಹರನ ಕಾಲದ ಶಾಸನ ಪತ್ತೆ

    ಕುಂದಾಪುರ: ‘ಶ್ರೀ ಗಣಾಧಿಪತಯೇ ನಮಹ’ ಶ್ಲೋಕದೊಂದಿಗೆ ಆರಂಭವಾಗುವ ಆರು ಅಡಿ ಉದ್ದ 2.5 ಅಡಿ ಅಗಲದ ಕಣಶಿಲೆ (ಗ್ರಾನೈಟ್)ಯಲ್ಲಿ 65 ಸಾಲುಗಳ ಕನ್ನಡ – ಸಂಸ್ಕೃತ ಭಾಷೆಯಲ್ಲಿರುವ ವಿಜಯನಗರ ಇಮ್ಮಡಿ ಹರಹರನ ಕಾಲದ ಶಿಲಾ ಶಾಸನ ಕುಂದಾಪುರ ತಾಲೂಕು ಜಪ್ತಿ ಗ್ರಾಮ ಕೈಲ್ಕೆರೆಯಲ್ಲಿ ಪತ್ತೆಯಾಗಿದೆ.
    ಇಮ್ಮಡಿ ಹರಿಹರ ಆಳ್ವಿಕೆ ಕಾಲದಲ್ಲಿ ವಿಯಾಭ್ಯದಯ ಶಕವರ್ಷ 1316, ಬಾವ ಸಂವತ್ಸರ ಕಾರ್ತಿಕ ಶುದ್ಧ 10, ಸೋಮವಾರದಂದು ಭಾರದ್ವಜ ಗೋತ್ರದವರಾದ ನಾರಾಯಣ ವಾಜೆಪೇಯಿ ಮತ್ತು ನರಹರಿ ಸೋಮಯಾಜಿ ಹಾಗೂ ವಾಸಿಷ್ಠ ಗೋತ್ರದ ಪಂಡರಿ ದೀಕ್ಷಿತರು ಪಂಪಾ ಕ್ಷೇತ್ರದ ಶ್ರೀ ವಿರೂಪಾಕ್ಷ ದೇವರ ಸನ್ನಧಿಯಲ್ಲಿ ಶಿವರಾತ್ರಿ ಪುಣ್ಯಕಾಲದಲ್ಲಿ ಸರ್ವಭಾದ ಪರಿಹಾರವಾಗಿ ರಾಯರ ಹೆಸರಲ್ಲಿ ಹಿರಣ್ಯೋದಕ ದಾನ ಮಾಡಿದ ವಿವರ ಶಾಸನದಲ್ಲಿದೆ.

    ಶಾಸನ ಭೂಮಿ ಸಂಬಂಧಿಸಿದ ಧರ್ಮಶಾಸನವಾಗಿದ್ದು, ಕಂಚಿಕಾ, ವೊಲಗತ್ತೂರ ದೇವಸ್ವ, ಬ್ರಹ್ಮರ ಬನದ ಉಲ್ಲೇಖಗಳಿವೆ. ಶಾಸನದಲ್ಲಿ ಗದ್ದೆ ಹಾಗೂ ವ್ಯಕ್ತಿಗಳ ಉಲ್ಲೇಖವಿದ್ದು, ಶಾಸನದ ಕೊನೆಯಲ್ಲಿ ಶಾಪಾಶಯ ವಾಖ್ಯವಿದ್ದು, ಶಾಸನ ರಕ್ಷಿಸಿದವರಿಗೆ ಸಿಗುವ ನಮ್ಮಣೆ ವಿವರಿಸಲಾಗಿದೆ. ವಲ್ಕುತ್ತೂರು ಶ್ರೀ ಮಹಾಲಿಂಗೇಶ್ವರ (ಸೋಮಯ್ಯ ದೇವರು) ಮಹಾನವಮಿ ಪರ್ವಕ್ಕೆ ಮೂರು ಹಾಡ ಎಣ್ಣೆ ಪ್ರತಿವರ್ಷ ನೀಡಬೇಕೆಂಬ ವಿವರವಿದೆ. ಶಾಸನದಲ್ಲಿ ಸೂಚಿಸಿದಂತೆ ಎಲ್ಲವನ್ನೂ ಸುಸೂತ್ರವಾಗಿ ಸೋಮಯ್ಯ ದೇವರ ಆರಾಧಕರು ಹಾಗೂ ಕೇರಿಯವರು ಪಾಲಿಸಿಕೊಂಡುಬರಬೇಕು ಎನ್ನುವ ವಿವರವಿದೆ.
    ಶಾಸನದಲ್ಲಿ ಶ್ರೀ ವೀರಹರಿಹರ ಮಹಾರಾಯರ ಶ್ರೀ ಹಸ್ತವಾಗಿ ಮಲ್ಲಪಗಳು ಒಪ್ಪಿಗೆ ಹಾಕಿದ್ದು, ಶಾಸನ ರಾಜೇಶ್ವರ ಉಪಾಧ್ಯಾಯ ಕಂಚಾರ್ತಿ ಪತ್ತೆಮಾಡಿದ್ದು, ಶಾಸನ ಅರ್ಥೈಸುವಲ್ಲಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಸಹಕಾರ ನೀಡಿದ್ದು, ಕೈಲ್ಕೆರೆ ವಿನಯ್ ಕೊಠಾರಿ ಸಹಕಾರ ನೀಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts