More

    ಸೋಂಕು ನಿಯಂತ್ರಣಕ್ಕೆ ಬೇಕು ಜನರ ಸಹಕಾರ

    ಐಮಂಗಲ: ಕರೊನಾ ನಿಯಂತ್ರಿಸಲು ಸಾರ್ವಜನಿಕರ ಸಹಕಾರ ಅಗತ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪಾಲಾಕ್ಷ ಹೇಳಿದರು.

    ಪೊಲೀಸ್ ತರಬೇತಿ ಶಾಲೆ ಆವರಣದಲ್ಲಿ ಶನಿವಾರ ಪ್ರಶಿಕ್ಷಣಾರ್ಥಿಗಳಿಗೆ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಲಾಕ್‌ಡೌನ್ ತೆರವಿನ ನಂತರ ಕರೊನಾ ಸೋಂಕು ಹೆಚ್ಚುತ್ತಿದ್ದು ಆತಂಕ ಮೂಡಿಸಿದೆ. 40 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

    ಜಿಲ್ಲೆಯಲ್ಲಿ 3896 ಜನರ ಸ್ಯಾಂಪಲ್ ಸಂಗ್ರಹಿಸಿ ಲ್ಯಾಬ್‌ಗೆ ಕಳುಹಿಸಲಾಗಿದೆ. ನೆಗಡಿ, ಕೆಮ್ಮು, ಉಸಿರಾಟದ ತೊಂದರೆ, ಜ್ವರಕ್ಕೆ ಒಳಗಾದವರ ಮಾಹಿತಿ ಸಂಗ್ರಹಿಸಲು ಆಶಾ ಕಾರ್ಯಕರ್ತೆಯರು ಮನೆ,ಮನೆಗೆ ನಾಲ್ಕು ಬಾರಿ ಭೇಟಿ ನೀಡುತ್ತಿದ್ದಾರೆ ಎಂದರು.

    ಎಚ್1ಎನ್1, ಕ್ಷಯದಂತೆ ಕರೊನಾ ಕೂಡ ಮಾರಕ ಕಾಯಿಲೆಯಾಗಿದೆ. ಸಕಾಲದಲ್ಲಿ ಚಿಕಿತ್ಸೆ ಕೊಡುವುದರಿಂದ ಗುಣಪಡಿಸಬಹುದು. ಜನ ಪರಸ್ಪರ ಅಂತರ ಕಾಯ್ದುಕೊಂಡು ಸೋಂಕಿನ ಹತೋಟಿಗೆ ಮುಂದಾಗಬೇಕು ಎಂದರು.

    ತರಬೇತಿ ಶಾಲೆ ಪ್ರಾಂಶುಪಾಲ ಪಿ.ಪಾಪಣ್ಣ, ಆರೋಗ್ಯ ಇಲಾಖೆಯ ಡಾ.ರವಿಕುಮಾರ್, ಡಾ.ಚಂದ್ರಕಾಂತ್‌ಗೌಡರ್, ಡಾ.ಜಾನಕಿ, ಮೂಗಪ್ಪ, ಸಿಬ್ಬಂದಿ ಅಮಿತ್, ಆರ್.ಪಿ.ಐ. ಬಿ.ರಶುರಾಮ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts