More

    ಶೀಘ್ರದಲ್ಲೇ ಐಎಂಎ ಕೇಸ್ ಚಾರ್ಜ್‌ಶೀಟ್

    ಬೆಂಗಳೂರು: ಐ ಮಾನಿಟರಿ ಅಡ್ವೈಸರಿ (ಐಎಂಎ) ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳು ಶೀಘ್ರದಲ್ಲೇ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಐಎಂಎ ಪ್ರಕರಣದ ತನಿಖೆ ಅಂತಿಮ ಹಂತದಲ್ಲಿದ್ದು, ಸದ್ಯದಲ್ಲೇ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಲು ಸಿಬಿಐ ಅಧಿಕಾರಿಗಳು ಮುಂದಾಗಿದ್ದಾರೆ.

    ಈಗಾಗಲೇ ಸಂಗ್ರಹಿಸಿರುವ ಡಿಜಿಟಲ್ ಸಾಕ್ಷ್ಯ, ದಾಖಲೆಗಳ ಮಾಹಿತಿ, ಮಾಜಿ ಸಚಿವ ಆರ್.ರೋಷನ್ ಬೇಗ್ ಸೇರಿ ಇನ್ನೀತರರು ಐಎಂಎ ಜತೆ ನಡೆಸಿದ ವ್ಯವಹಾರದ ಬಗ್ಗೆ ಎಳೆ ಎಳೆಯಾಗಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲು ಸಿಬಿಐ ಮುಂದಾಗಿದೆ. ಪ್ರಕರಣದಲ್ಲಿ ಶಾಮೀಲಾಗಿ ಸಿಬಿಐ ಬೆಲೆಗೆ ಬಿದ್ದಿರುವ ಆರೋಪಿಗಳು ಮುಂದೆ ನ್ಯಾಯಾಲಯದಲ್ಲೇ ಹೋರಾಟ ನಡೆಸಬೇಕಿದೆ. ಐಎಂಎ ಮಾಲೀಕ ಮೊಹಮದ್ ಮನ್ಸೂರ್ ಹೊರತುಪಡಿಸಿ ಸಿಬಿಐನಿಂದ ಬಂಧನಕ್ಕೊಳಗಾಗಿದ್ದ ಉಳಿದ ಆರೋಪಿಗಳು ಜಾಮೀನಿನ ಮೇಲೆ ಹೊರಗಿದ್ದಾರೆ.

    ರೋಷನ್ ಬೇಗ್ ಸೇರಿ ಹಲವು ಪ್ರಭಾವಿಗಳಿಗೆ ದೊಡ್ಡ ಮೊತ್ತದ ಹಣ ಕೊಟ್ಟಿರುವುದಾಗಿ ಸಿಬಿಐ ವಿಚಾರಣೆ ವೇಳೆ ಎಲ್ಲ ಸಂಗತಿಯನ್ನೂ ಮನ್ಸೂರ್ ವಿವರಿಸಿದ್ದ. ಮನ್ಸೂರ್ ಹೇಳಿಕೆ ಆಧಾರದ ಮೇಲೆ ತನಿಖೆ ನಡೆಸಿದಾಗ ಕೆಲವೊಂದು ಅಂಶಗಳಿಗೆ ಸಾಕ್ಷ್ಯಗಳು ಸಿಕ್ಕಿದೆ. ಈತ ಹೇಳಿದ ಎಲ್ಲ ಅಂಶಗಳಿಗೂ ಸೂಕ್ತ ಸಾಕ್ಷ್ಯ ಸಿಕ್ಕಿಲ್ಲ. ಮನ್ಸೂರ್ ಜತೆ ಕೋಟ್ಯಂತರ ರೂ. ಹಣಕಾಸು ವ್ಯವಹಾರ ನಡೆಸಿರುವವರ ವಿರುದ್ಧ ಇನ್ನಷ್ಟು ಸಾಕ್ಷ್ಯಗಳು ಸಿಗುತ್ತವೆಯೇ ಎಂದು ಸಿಬಿಐ ಶೋಧ ನಡೆಸುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts