More

    ಅನಧಿಕೃತ ಬಡಾವಣೆಗಳು ನೆಲಸಮ : ಸರ್ಕಾರಿ ಭೂಮಿ ಸೇರಿ 14.38 ಎಕರೆ ಜಮೀನು ವಶಕ್ಕೆ

    ಬೆಂಗಳೂರು : ಸರ್ಕಾರಿ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಮತ್ತೆ ಆರಂಭಿಸಿರುವ ಬೆಂಗಳೂರು ಜಿಲ್ಲಾಡಳಿತ, ಕೆಂಗೇರಿ ಹೋಬಳಿಯ ಅಗರ ಹಾಗೂ ಬಿ.ಎಂ. ಕಾವಲ್ ಗ್ರಾಮಗಳ ವ್ಯಾಪ್ತಿಯಲ್ಲಿ 14.38 ಎಕರೆ ಜಾಗದಲ್ಲಿ ನಧಿಕೃತವಾಗಿ ನಿರ್ವಿುಸಿದ್ದ ಬಡಾವಣೆಗಳನ್ನು ತೆರವುಗೊಳಿಸಿದೆ.

    ಅಕ್ರಮ ಬಡಾವಣೆ ನಿರ್ವಣದ ಸರ್ವೆ ನಂಬರ್​ಗಳು
    ಅಗರ ಗ್ರಾಮ
    * 4/2ರಲ್ಲಿ 1 ಎಕರೆ: 20 ಗುಂಟೆ,
    * 5/5‘ಎ’ರಲ್ಲಿ 2 ಎಕರೆ: 20 ಗುಂಟೆ
    * 5/5‘ಬಿ’ 3: 10 ಗುಂಟೆ
    * 6: 3 ಎಕರೆ 30 ಗುಂಟೆ

    ಕೆಂಗೇರಿ ಹೋಬಳಿ ಬಿ.ಎಂ. ಕಾವಲ್ ಗ್ರಾಮ
    * 72/2: 3 ಎಕರೆ-16 ಗುಂಟೆ,
    * 73: 3 ಎಕರೆ 32 ಗುಂಟೆ

    ಸರ್ಕಾರಿ ದಾಖಲೆಗಳ ಪ್ರಕಾರ, ಬಡಾವಣೆ ನಿರ್ವಣವಾಗಿರುವ ಸಂಪೂರ್ಣ ಭೂಮಿ ಕೃಷಿ ಜಮೀನಾಗಿದೆ. ಕೆಂಚಪ್ಪಗೌಡ (ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ) ಎನ್ನುವವರು ಮೂಲ ಖಾತೆದಾರರಿಂದ ಮಾರಾಟ ಕರಾರು (ಜಿಪಿಎ) ಪತ್ರ ಮಾಡಿಸಿಕೊಂಡು ಸಕ್ರಮ ಪ್ರಾಧಿಕಾರಗಳಿಂದ ಅನುಮತಿ ಪಡೆಯದೆ, ಅಕ್ರಮ ವಸತಿ ಬಡಾವಣೆ ವಿಂಗಡಿಸಿ ಅಮಾಯಕರಿಗೆ ನಿವೇಶನ ಮಾರಾಟ ಮಾಡುತ್ತಿದ್ದರು.

    ಇದನ್ನೂ ಓದಿ: ‘ನಿಮ್ಮ ತಂದೆ- ತಾಯಿಗೆ ವಯಸ್ಸಾಗಿದ್ದು, 2.5 ಲಕ್ಷ ಪಾವತಿಸಿದ್ರೆ ಖಾಸಗಿ ಆಸ್ಪತ್ರೇಲಿ ಚೆನ್ನಾಗಿ ಚಿಕಿತ್ಸೆ ಕೊಡ್ತಾರೆ’!

    ಈ ಹಿಂದೆಯೇ ಬೆಂ. ದಕ್ಷಿಣ ತಹಸೀಲ್ದಾರ್ ನೋಟಿಸ್ ನೀಡಿದ್ದರೂ ಅದಕ್ಕೆ ಉತ್ತರಿಸದ ಕಾರಣ, ದಕ್ಷಿಣ ವಲಯ ಉಪ ವಿಭಾಗಾಧಿಕಾರಿ ಡಾ.ಎಂ.ಜಿ. ಶಿವಣ್ಣ ನೇತೃತ್ವದಲ್ಲಿ ದಕ್ಷಿಣ ತಾಲೂಕು ತಹಸೀಲ್ದಾರ್ ಶಿವಪ್ಪ ಲಮಾಣಿ ಮತ್ತು ಅಧಿಕಾರಿಗಳ ತಂಡ ಬುಧವಾರ ಬಡಾವಣೆಗಳನ್ನು ತೆರವುಗೊಳಿಸಿದರು. ಬಡಾವಣೆ ನಿರ್ವಣದ ವೇಳೆ ಸರ್ವೆ ನಂ. 73ರಲ್ಲಿದ್ದ 3 ಎಕರೆ 32 ಗುಂಟೆ ಸರ್ಕಾರಿ ಖರಾಬು ಜಮೀನು ಒತ್ತುವರಿ ಮಾಡಿಕೊಳ್ಳಲಾಗಿದೆ. ಒಟ್ಟು 14 ಎಕರೆ 38 ಗುಂಟೆಯಲ್ಲಿ ಈಗಾಗಲೇ ನಿವೇಶನ ಖರೀದಿಸಿರುವವರು ಸಕ್ಷಮ ಪ್ರಾಧಿಕಾರ ಅಥವಾ ಸ್ಥಳೀಯ ಪೊಲೀಸ್ ಠಾಣೆಗೆ ದೂರು ಸಲ್ಲಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕರೊನಾ ನಿಯಂತ್ರಣದಲ್ಲಿ ಯಾವುದೇ ರಾಜಿಯಿಲ್ಲ : ಅಧಿಕಾರಿಗಳಿಗೆ ಸಿಎಂ ಬಿಎಸ್​ವೈ ಖಡಕ್ ಎಚ್ಚರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts