More

    ಸರ್ಕಾರಿ ನೌಕರರಾಗಿ ಪರಿಗಣಿಸಲು ಒತ್ತಾಯ

    ಇಳಕಲ್ಲ: ತಮ್ಮನ್ನು ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸುವ ಜತೆಗೆ ವಿವಿಧ ಬೇಡಿಕೆಗಳನ್ನು ತಕ್ಷಣವೇ ಈಡೇರಿಸಬೇಕು ಎಂದು ಒತ್ತಾಯಿಸಿ ಶುಕ್ರವಾರ ಇಲ್ಲಿನ ಕೆಎಸ್‌ಆರ್‌ಟಿಸಿ ಘಟಕದ ನೌಕರರು ಬಸ್ ಸಂಚಾರ ಸ್ಥಗಿತಗೊಳಿಸಿ ಬಸ್ ಡಿಪೋ ಮುಂಭಾಗ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದರು.

    ಸಾರಿಗೆ ಸಂಸ್ಥೆ ನೌಕರರ ಮುಖಂಡ ಎಸ್.ಪಿ. ಪಾಟೀಲ ಮಾತನಾಡಿ, ರಾಜ್ಯದಲ್ಲಿ ಸರ್ಕಾರಿ ನೌಕರರಿಗೆ ಸಿಗುವ ಸೌಲಭ್ಯಗಳನ್ನು ನಮಗೂ ಕಲ್ಪಿಸಬೇಕೆಂದು ಒತ್ತಾಯಿಸಿ ರಾಜ್ಯಾದ್ಯಂತ ಹೋರಾಟ ನಡೆಯುತ್ತಿದೆ. ಬೆಂಗಳೂರಿನಲ್ಲಿ ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಿದ ರೈತ ಸಂಘದ ಮುಖಂಡರು ಹಾಗೂ ನಮ್ಮವರನ್ನು ಪೊಲೀಸರು ಬಂಧಿಸಿದ್ದು ತಕ್ಷಣವೇ ಸರ್ಕಾರ ಅವರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದರು.

    ನಮ್ಮ ಹೋರಾಟದಿಂದ ಸಾರಿಗೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು ಪ್ರಯಾಣಿಕರು, ಸಾರ್ವಜನಿಕರು, ಸಂಘ-ಸಂಸ್ಥೆಗಳ ಸದಸ್ಯರು ಸಹಕರಿಸುವ ಮೂಲಕ ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಬೇಕು ಎಂದು ಮನವಿ ಮಾಡಿಕೊಂಡರು.

    ಸಾರಿಗೆ ಸಂಸ್ಥೆ ನೌಕರರ ಮುಖಂಡರಾದ ಸೋಮನಗೌಡ ಪಾಟೀಲ, ಬಿ.ಎಂ. ಪೂಜಾರ, ಬಿ.ಬಿ. ಬಸನಗೌಡ, ಮಹಾಂತೇಶ ಕುರಿ, ಎಸ್.ಪಿ. ದೊಡಮನಿ, ಎಂ.ಎಂ. ಹರಿಜನ, ಎನ್.ವಿ. ಬಲಕುಂದಿ, ಎಸ್.ಎಲ್. ಬಲಕುಂದಿ, ಎ.ಎಸ್. ಮೀರಾಕೋರ, ಎ.ಆರ್. ಬಾಗೇವಾಡಿ, ಎಂ.ಬಿ. ಬಾಗವಾನ ಇತರರು ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts