More

    ಬಾದಾಮಿ ಬನಶಂಕರಿಯತ್ತ ಸಾವಿರಾರು ಭಕ್ತಗಣ

    ಇಳಕಲ್ಲ: ಬಾದಾಮಿ ಬನಶಂಕರಿ ಬನದಲ್ಲಿ ಜ.10 ರಂದು ನಡೆಯಲಿರುವ ದೇವಿ ರಥೋತ್ಸವದಲ್ಲಿ ಪಾಲ್ಗೊಳ್ಳಲು 20 ಸಾವಿರ ಜನರು ಪಾದಯಾತ್ರೆ ಕೈಗೊಂಡಿದ್ದು, ಅವರಿಗೆ ಮಾರ್ಗದುದ್ದಕ್ಕೂ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.

    ಶಿರಾ, ಬಾಲುಶಾ, ಉಪ್ಪಿಟ್ಟು, ದೋಸೆ, ಇಡ್ಲಿ, ವಡಾ, ಪುರಿ, ಪಲಾವ್, ಮಿರ್ಜಿ, ಸೂಸಲಾ, ಮಂಡಾಳು ಚೂಡಾ, ಅವಲಕ್ಕಿ ಮೊಸರು, ಚಹಾ, ಬದಾಮಿ ಹಾಲು, ಶರಬತ್, ಫ್ರೂಟ್ ಸಲಾಡ್, ಐಸ್ ಕ್ರೀಮ್, ಅನ್ನ ಸಾರು, ಸಜ್ಜಕ, ಮಿನರಲ್ ವಾಟರ್, ಕಜೂರಿ ಹಣ್ಣು ಪಾಕೆಟ್ ಪ್ರಾಯೋಜಕರು ಸಿದ್ಧಪಡಿಸಿ ಪಾದಯಾತ್ರಿಕರಿಗೆ ವಿತರಿಸುತ್ತಿದ್ದ ಸಾಮಾನ್ಯ ದೃಶ್ಯಗಳು ಇಳಕಲ್ಲದಿಂದ ಬಾದಾಮಿ ತಾಲೂಕಿನ ಕಾಟಾಪುರ ಸಾಯಿ ಮಂದಿರದವರೆಗೆ ಕಂಡು ಬಂದವು.

    ಮಹಿಳೆಯರಿಗೆ ಹೂ ವಿತರಣೆ
    ಮಹಿಳೆಯರಿಗೆ ಮಲ್ಲಿಗೆ ಮತ್ತು ಕನಕಾಂಬರಿ ಹೂ ಮಾಲೆಗಳನ್ನು ಒಂದೆಡೆ ಕೊಡುತ್ತಿದ್ದರೆ ಮತ್ತೊಂದೆಡೆ ಸೇವಕರು ಮೈ ಕೈ ನೋವು ನಿವಾರಣೆಗೆ ಮಾತ್ರೆಗಳನ್ನು ಕೊಡುತ್ತಿದ್ದರು. ಬನಶಂಕರಿ ದೇವಿ ಯಾತ್ರಾ ಸಮಿತಿ ಪಾದಯಾತ್ರಿಕರ ಲಗೇಜ್‌ನ್ನು ತೆಗೆದುಕೊಂಡು ಹೋಗುವ ವ್ಯವಸ್ಥೆಯನ್ನು ಅತ್ಯಂತ ಅಚ್ಚುಕಟ್ಟಾಗಿ ಮಾಡುತ್ತಿದೆ. ನಗರದ ಹಲವಾರು ವೈದ್ಯರು ಬೈಸಿಕಲ್ ಮೇಲೆ ಪರಿವಾರ ಸಮೇತ ಬನಶಂಕರಿಯತ್ತ ಹೊರಟ್ಟಿದ್ದರೆ, ನಗರಸಭೆ ಮಾಜಿ ಸದಸ್ಯ ಪ್ರಶಾಂತ ಗೋಟೂರ ಅವರ ಪತ್ನಿ ಕೂಸನ್ನು ಬೆನ್ನಿಗೆ ಕಟ್ಟಿಕೊಂಡು ಹೋಗುತ್ತಿದ್ದ ದೃಶ್ಯ ಕಂಡು ಬಂದಿತು.

    ವಿವಿಧ ಸಮಿತಿಗಳ ಸೇವೆ
    ಹುಡೇದ ಮಹಾಲಕ್ಷ್ಮೀ ದೇವಸ್ಥಾನ ಸಮಿತಿ ಸದಸ್ಯರು ದೋಸೆ, ಬ್ಲೂೃ ಸರ್ಕಲ್ ಗ್ರೂಪ್ ವತಿಯಿಂದ ಇಡ್ಲಿ ವಡಾ, ಕೊಪ್ಪರದ ಪೇಟೆ ಬನಶಂಕರಿ ಮಿತ್ರ ಮಂಡಳಿ ವತಿಯಿಂದ ಪಲಾವ್, ಇಳಕಲ್ಲ ಸಹಕಾರಿ ಬ್ಯಾಂಕ್ ನಿರ್ದೇಶಕ ಮಲ್ಲು ಅಗ್ನಿ ಅವರಿಂದ ಉದುರು ಸಜ್ಜಕ, ಅನ್ನ ಸಾರು, ಉದಯೋನ್ಮುಖ ಸೇವಾ ಸಂಸ್ಥೆ ವತಿಯಿಂದ ಶರಬತ್, ಫ್ರೂಟ್ ಸಲಾಡ್, ರಾಜೊಳ್ಳಿ ಗೆಳೆಯರ ಬಳಗದಿಂದ ಕಜೂರಿ ಹೀಗೆ ಹಲವಾರು ಪ್ರಾಯೋಜಕರು ಬಗೆ ಬಗೆಯ ತಿಂಡಿ ತಿನಿಸುಗಳನ್ನು ಮಾಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts