More

    ಪ್ಲಾಸ್ಟಿಕ್​ ಸಮಸ್ಯೆಗೂ ಪರಿಹಾರ, ಸೂಕ್ಷ್ಮಜೀವಿಯ ಸಂಹಾರ; ಇದೇನಿದು ಹೊಸ ಆವಿಷ್ಕಾರ?

    ಚೆನ್ನೈ: ಅತಿಯಾದ ಪ್ಲಾಸ್ಟಿಕ್​ ಬಳಕೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಮತ್ತೊಂದೆಡೆ ಈ ಕರೊನಾ ಸಂಕಷ್ಟದಲ್ಲಿ ಸ್ವಚ್ಛತೆಯನ್ನು ಕಾಪಾಡುವುದು ಕೂಡ ಸವಾಲಾಗಿದೆ. ಆದರೆ ಎರಡಕ್ಕೂ ಉತ್ತರವೆಂಬಂತೆ ಆವಿಷ್ಕಾರವೊಂದು ನಡೆದಿದೆ. ಇದರಿಂದ ಪ್ಲಾಸ್ಟಿಕ್​ ಸಮಸ್ಯೆಗೆ ಪರಿಹಾರ ಮಾತ್ರವಲ್ಲ, ಸೂಕ್ಷ್ಮಜೀವಿಯ ಸಂಹಾರವೂ ಈಡೇರಲಿದೆ.

    ಇಂಥದ್ದೊಂದು ಆವಿಷ್ಕಾರವನ್ನು ಚೆನ್ನೈನಲ್ಲಿರುವ ಇಂಡಿಯನ್​ ಇನ್​ಸ್ಟಿಟ್ಯೂಟ್​ ಆಫ್​ ಟೆಕ್ನಾಲಜಿ-ಮದ್ರಾಸ್​ (ಐಐಟಿ-ಎಂ) ಮಾಡಿದೆ. ಆಹಾರ ಪದಾರ್ಥಗಳ ಪೊಟ್ಟಣ ಕಟ್ಟಲು ಸೂಕ್ಷ್ಮಜೀವಿ ನಿರೋಧಕ (ಆ್ಯಂಟಿಮೈಕ್ರೋಬಿಯಲ್​) ವಸ್ತುವೊಂದನ್ನು ಐಐಟಿ-ಎಂ ಕಂಡು ಹಿಡಿದಿದೆ. ಪೊಟ್ಟಣ ಕಟ್ಟಲು ಬಳಸುವ ಪ್ಲಾಸ್ಟಿಕ್​ನಂಥ ಈ ವಸ್ತು ಸೂಕ್ಷ್ಮಜೀವಿ ನಿರೋಧಕವಾಗಿ ಕೆಲಸ ಮಾಡಲಿದೆ. ಮಾತ್ರವಲ್ಲ ಬಳಸಿ ಎಸೆದಾಗ ಪ್ರಕೃತಿಸಹಜವಾಗಿ ಮಣ್ಣಲ್ಲಿ ಮಣ್ಣಾಗಲಿದೆ.

    ಇದರಲ್ಲಿ ಇನ್​ಬಿಲ್ಟ್​ ಆ್ಯಂಟಿ ಬ್ಯಾಕ್ಟೀರಿಯಲ್​ ಕಾಂಪೌಂಡ್ ಇದ್ದು, ಇದು ಸಂಗ್ರಹಿತ ಆಹಾರದ ಪೊಟ್ಟಣದಲ್ಲಿ ಬ್ಯಾಕ್ಟೀರಿಯಾ ಬೆಳೆಯದಂತೆ ನೋಡಿಕೊಳ್ಳುತ್ತದೆ. ಅಲ್ಲದೆ ಈ ಸಂಯುಕ್ತವಸ್ತು ಸೇವನೆಗೆ ಯೋಗ್ಯವಿದ್ದು, ಯಾವುದೇ ಅಡ್ಡಪರಿಣಾಮ ಇರುವುದಿಲ್ಲ ಎಂದು ಐಐಟಿ-ಎಂ ಬಯೋಟೆಕ್ನಾಲಜಿ ವಿಭಾಗದ ಮುಖೇಶ್ ದೊಬ್ಲೆ ಹೇಳಿಕೊಂಡಿದ್ದಾರೆ.

    ಪೊಟ್ಟಣ ಕಟ್ಟುವ ಈ ವಸ್ತುವನ್ನು ಸ್ಟಾರ್ಚ್​, ಪಾಲಿವಿನೈಲ್​ ಆಲ್ಕೋಹಾಲ್​, ಸೈಕ್ಲಿಕ್ ಬೀಟಾ ಗ್ಲೈಕ್ಯಾನ್ಸ್​(ಸಿಬಿಜಿ)ಗಳ ಪಾಲಿಮೆರಿಕ್​ ಬ್ಲೆಂಡ್​​ನಿಂದ ಮಾಡಲಾಗಿದೆ. ಇದಕ್ಕೆ ಬಳಸಲಾಗಿರುವ ವಸ್ತುಗಳು ಯುಎಸ್​ ಫುಡ್​ ಆ್ಯಂಡ್ ಡ್ರಗ್​ ಅಡ್ಮಿನಿಸ್ಟ್ರೇಷನ್​ನಿಂದ ಮಾನ್ಯತೆ ಪಡೆದಿವೆ. ಬಳಸಲಾಗಿರುವ ಆ್ಯಂಟಿ ಬ್ಯಾಕ್ಟೀರಿಯಲ್​ ಏಜೆಂಟ್​ಗಳೂ ಆಹಾರ ಪ್ರಾಧಿಕಾರಗಳ ಮಾನ್ಯತೆ ಪಡೆದಿವೆ ಎಂದು ಅವರು ತಿಳಿಸಿದ್ದಾರೆ.

    ಬಳಕೆ ಬಳಿಕ ಎಸೆಯಲಾಗುವ ಈ ವಸ್ತು 21 ದಿನಗಳಲ್ಲಿ ಶೇ. 4ರಿಂದ 98ರಷ್ಟು ಕೊಳೆತು ಪ್ರಕೃತಿಸಹಜವಾಗಿ ವಿಲೀನವಾಗಲಿದೆ. ತೇವದ ವಾತಾವರಣದಲ್ಲಿ ಈ ಪ್ರಕ್ರಿಯೆ ಮತ್ತಷ್ಟು ವೇಗವಾಗಿ ನಡೆಯಲಿದೆ. ಪನೀರ್​, ಮಾಂಸ, ಚಿಕನ್​ ಮುಂತಾದ ವಸ್ತುಗಳನ್ನು ಇದರಲ್ಲಿ ಪೊಟ್ಟಣ ಕಟ್ಟಬಹುದಾಗಿದೆ ಹಾಗೂ ಇದರ ಕಾರ್ಯಕ್ಷಮತೆ ಸಾಬೀತಾಗಿದೆ ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts