More

    ಉಚಿತ ಶಿಕ್ಷಣ ಪಡೆಯುತ್ತಿದ್ದುದೇ ಐಐಟಿ ವಿದ್ಯಾರ್ಥಿಯ ಜೀವಕ್ಕೆ ಮುಳುವಾಯ್ತಾ? ಮಗನ ದುಡುಕಿನ ನಿರ್ಧಾರದ ಬಗ್ಗೆ ತಾಯಿ ಹೇಳಿದ್ದಿಷ್ಟು…

    ಮಹಾರಾಷ್ಟ್ರ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಾಂಬೆ (ಐಐಟಿಬಿ)ಯ ವಿದ್ಯಾರ್ಥಿ ದರ್ಶನ್ ಸೋಲಂಕಿ ಎಂಬಾತ ಕಳೆದ ಫೆಬ್ರವರಿಯಲ್ಲಿ ಹಾಸ್ಟೆಲ್​ನ ಏಳನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಇದೀಗ ಪೊಲೀಸರು ನ್ಯಾಯಾಲಯಕ್ಕೆ ಆರೋಪ ಪಟ್ಟಿ(chargesheet) ಸಲ್ಲಿಸಿದ್ದು, ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನೆಂಬುದು ಬಹಿರಂಗವಾಗಿದೆ.

    ಅಹಮದಾಬಾದ್ ಮೂಲದ ಬಿ-ಟೆಕ್ (ರಾಸಾಯನಿಕ) ಮೊದಲ ವರ್ಷದ ವಿದ್ಯಾರ್ಥಿ ದರ್ಶನ್ ಸೋಲಂಕಿ ತನ್ನ ಸೆಮಿಸ್ಟರ್ ಪರೀಕ್ಷೆ ಮುಗಿಯುತ್ತಿದ್ದಂತೆ ಹಾಸ್ಟೆಲ್​ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಬಗ್ಗೆ ಪ್ರಕರಣದ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಆರಂಭಿಸಿದ್ದರು. ವಿಚಾರಣೆಯ ಭಾಗವಾಗಿ ಮೃತ ವಿದ್ಯಾರ್ಥಿಯ ತಾಯಿಯ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದರು.

    ಇದನ್ನೂ ಓದಿ: VIDEO | ನೀರಿನಾಳದಲ್ಲಿ ನಿವೇದಿತಾಗೆ ಮುತ್ತಿಟ್ಟ ಚಂದನ್ ಶೆಟ್ಟಿ; ಮತ್ತೆ ಟ್ರೋಲ್ ಆದ ಜೋಡಿ

    ಬದಲಾದ ಸ್ನೇಹಿತರ ವರ್ತನೆ!

    ‘ಮಗನ ಜಾತಿಯ ಬಗ್ಗೆ ಗೊತ್ತಾಗುತ್ತಿದ್ದಂತೆ ಸ್ನೇಹಿತರ ವರ್ತನೆಯಲ್ಲಿ ಬದಲಾಗಿದೆ’ ಎಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ ಚಾರ್ಜ್​ಶೀಟ್​ನಲ್ಲಿ ಮೃತ ವಿದ್ಯಾರ್ಥಿಯ ತಾಯಿ ಹೇಳಿರುವುದು ಉಲ್ಲೇಖವಾಗಿದೆ ಎಂದು ವರದಿಯಾಗಿದೆ.

    ದರ್ಶನ್ ಸೋಲಂಕಿ ಧರ್ಮದ ಬಗ್ಗೆ ಮಾತನಾಡಿದ್ದಕ್ಕೆ ಸ್ನೇಹಿತನಾಗಿದ್ದ ಅರ್ಮಾನ್ ಖತ್ರಿ ಎಂಬಾತ ಜೀವ ಬೆದರಿಕೆ ಹಾಕಿದ್ದ ಎಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ. ಅರ್ಮಾನ್ ಖತ್ರಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದ ಎಂಬ ಆರೋಪದ ಮೇಲೆ ಈ ಹಿಂದೆ ಬಂಧನಕ್ಕೊಳಗಾಗಿದ್ದ. ಸದ್ಯ ಜಾಮೀನು ಪಡೆದು ಜೈಲಿನಿಂದ ಹೊರಗಿದ್ದಾನೆ. ಆರೋಪಪಟ್ಟಿಯಲ್ಲಿ ಕೆಲ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಸೇರಿದಂತೆ 55 ಸಾಕ್ಷಿಗಳ ಹೇಳಿಕೆಗಳು ಉಲ್ಲೇಖಗೊಂಡಿವೆ.

    ಇದನ್ನೂ ಓದಿ: ಟರ್ಕಿಯಲ್ಲಿ ಎಂಜಾಯ್ ಮಾಡ್ತಿದ್ದಾರೆ ವಿಜಯ್ ದೇವರಕೊಂಡ; ರಶ್ಮಿಕಾ ಎಲ್ಲಿ ಎಂದ ನೆಟ್ಟಿಗರು!

    ಮುಳುವಾದ ಉಚಿತ ಶಿಕ್ಷಣ!

    2022 ಡಿಸೆಂಬರ್​ನಲ್ಲಿ ಸೋಲಂಕಿ ಕರೆ ಮಾಡಿದ್ದಾಗ ಜಾತಿ ತಾರತಮ್ಯದ ಬಗ್ಗೆ ಹೇಳಿಕೊಂಡಿದ್ದ. ಸ್ನೇಹಿತರು ನನ್ನ ಅಧ್ಯಯನದ ಬಗ್ಗೆ ವ್ಯಂಗ್ಯವಾಡುತ್ತಾ, ನೀನು ಉಚಿತ ಶಿಕ್ಷಣ ಪಡೆಯುತ್ತಿದ್ದೀಯಾ ಎಂದು ನಿಂದಿಸುತ್ತಿದ್ದಾರೆ. ಈ ಬಗ್ಗೆ ನನ್ನಲ್ಲಿ ಹೇಳಿಕೊಂಡು ನೊಂದುಕೊಂಡಿದ್ದ ಎಂದು ವಿಚಾರಣೆ ವೇಳೆ ಪೊಲೀಸರ ಪ್ರಶ್ನೆಗೆ ಸೋಲಂಕಿಯ ತಾಯಿ ಉತ್ತರಿಸಿರುವುದು ವರದಿಯಾಗಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts