More

    ಮಧ್ಯರಾತ್ರಿ ಐಎಫ್​ಎಸ್ ಅಧಿಕಾರಿ ವಿಶ್ರಾಂತಿ ಗೃಹಕ್ಕೆ ಬಂತು ಚಿರತೆ!

    ಲಖನೌ: ಪ್ರಾಣಿಗಳು ಆಗ್ಗಾಗ್ಗೆ ಮನುಷ್ಯರಿಗೆ ಎದುರಾಗುವುದು ಸಾಮಾನ್ಯ. ಆದರೆ ಒಬ್ಬರೇ ಇದ್ದಾಗ ಪ್ರಾಣಿ ಎದುರಾದರೆ ಏನಾಗಬಹುದು.ಹೀಗೊಂದು ಘಟನೆ ಇಲ್ಲಿ ನಡೆದಿದ್ದು, ರಾತ್ರಿ ವೇಳೆಯಲ್ಲಿ ಅರಣ್ಯಾಧಿಕಾರಿಗಳ ವಿಶ್ರಾಂತಿ ಗೃಹಕ್ಕೆ ಆಗಮಿಸಿದ ಚಿರತೆ ರಾಜಾರೋಷವಾಗಿ ಓಡಾಡಿರುವ ಚಿತ್ರವನ್ನು ಅಧಿಕಾರಿಯೊಬ್ಬರು ಸೆರೆ ಹಿಡಿದಿದ್ದಾರೆ.

    ವಿಶ್ರಾಂತಿ ಗೃಹದಲ್ಲಿದ್ದ ಐಎಫ್​ಎಸ್​ ಅಧಿಕಾರಿ ನಿವಾಸಕ್ಕೆ ಮಧ್ಯರಾತ್ರಿ ಅತಿಥಿಯೊಂದು ಆಗಮಿಸಿದೆ. ನಾವಿಬ್ಬರು ಉತ್ತಮ ಸಮಯ ಕಳೆದೆವು ಎಂದು ಚಿರತೆಯ ಚಿತ್ರ ಸಮೇತ ಟ್ವೀಟ್​ ಮಾಡಿದ್ದಾರೆ.

    ಉತ್ತರ ಪ್ರದೇಶದ ಖತರ್ನಿಯಾಘಾಟ್​​ ವನ್ಯಜೀವಿ ಅಭಯಾರಣ್ಯದಲ್ಲಿ ವಿಶ್ರಾಂತಿ ಗೃಹದಲ್ಲಿ ಐಎಫ್​ಎಸ್​ ಅಧಿಕಾರಿ ಆಕಾಶ್​ ದೀಪ್​ ಬಧ್ವಾನ್​ ಇದ್ದರು. ಈ ವೇಳೆ ಚಿರತೆ ಆಗಮಿಸಿದೆ. ಈ ವೇಳೆ ಅದರ ದೃಶ್ಯವನ್ನು ಸೆರೆಹಿಡಿದಿದ್ದಾರೆ. ನಿನ್ನೆ ರಾತ್ರಿ ಚಿರತೆಯ ಬಂದಿತ್ತು, ಅದರ ನಡೆಯ ನೋಟ ನಿಮಗೆ ವಿನೋದವೆನಿಸಬಹುದು ಎಂದೂ ಟ್ವೀಟ್​ ಮಾಡಿದ್ದಾರೆ.

    ಅಲ್ಲದೇ 120 ವರ್ಷಗಳ ಇತಿಹಾಸ ಹೊಂದಿರುವ ಈ ವನ್ಯಜೀವಿ ಅಭಯಾರಣ್ಯ ತುಂಬಾ ಪ್ರಸಿದ್ಧಿಯಾಗಿದೆ ಎಂದೂ ಟ್ವೀಟ್​ ಮಾಡಿದ್ದಾರೆ. ಅವರ ಈ ಟ್ವೀಟ್​ಗೆ 3 ಸಾವಿರಕ್ಕೂ ಅಧಿಕ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಇನ್ನು ಅಧಿಕಾರಿ ಆಕಾಶ್​ ದೀಪ್​ ಬಧ್ವಾನ್​ ಅವರು ಆಗ್ಗಾಗ್ಗೆ ವನ್ಯಜೀವಿಗಳ ವಿಶೇಷ ಫೋಟೋ ಸೆರೆ ಹಿಡಿದು ಟ್ವೀಟ್​ ಮಾಡುತ್ತಿರುತ್ತಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts