More

    ನೀವು ಸಿಎಂ ಆಗೋದಾದ್ರೆ ಜೆಡಿಎಸ್‌ ಶಾಸಕರೆಲ್ಲ ಜೈ ಅಂತೀವಿ: ಶಾಸಕ ಎಚ್‌.ಡಿ. ರೇವಣ್ಣ ಕೊಟ್ರು ಆಫರ್‌

    ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್‌ನ ಎಚ್.ಡಿ. ರೇವಣ್ಣ ಜಲಸಂಪನ್ಮೂಲ ಸಚಿವರಾಗದೇ ಇರುವುದಕ್ಕೆ ಕಾರಣ ಯಾರು ಗೊತ್ತಾ? ಕಾಂಗ್ರೆಸ್‌ನ ಯಾವ ಶಾಸಕ ಮುಖ್ಯಮಂತ್ರಿ ಅಭ್ಯರ್ಥಿಯಾದರೆ ಜೆಡಿಎಸ್ ಬೆಂಬಲ ನೀಡುತ್ತೆ?
    – ಈ ಎಲ್ಲ ವಿಷಯಗಳು ಅಶ್ಲೀಲ ಸಿಡಿ ವಿಚಾರವಾಗಿ ವಿಧಾನಸಭೆಯಲ್ಲಿ ಕಾಂಗ್ರೆಸ್ ನಡೆಸಿದ ಧರಣಿ ಹಿನ್ನೆಲೆಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ 10 ನಿಮಿಷ ಕಲಾಪ ಮುಂದೂಡಿದ ಅವಧಿಯಲ್ಲಿ ನಡೆದ ಸ್ವಾರಸ್ಯಕರ ಚರ್ಚೆಗಳು.

    ನಿಮಗೋಸ್ಕರ ಜಲಸಂಪನ್ಮೂಲ ಖಾತೆ ಬಿಟ್ಟೆ: ಕಲಾಪದ ವಿರಾಮದ ವೇಳೆ ಕಾಂಗ್ರೆಸ್‌ನ ಎಚ್.ಕೆ. ಪಾಟೀಲ್, ಎಂ.ಬಿ. ಪಾಟೀಲ್. ಆರ್.ವಿ. ದೇಶಪಾಂಡೆ, ಶಿವಶಂಕರ ರೆಡ್ಡಿ ಮಾತನಾಡುತ್ತಿದ್ದರು. ಅಲ್ಲಿಗೆ ಬಂದ ಜೆಡಿಎಸ್‌ನ ಎಚ್.ಡಿ. ರೇವಣ್ಣ, ಕಾಂಗ್ರೆಸ್ ಅವಧಿಯಲ್ಲಿ ಎಂ.ಬಿ. ಪಾಟೀಲ್ ಜಲಸಂಪನ್ಮೂಲ ಖಾತೆಯನ್ನು ಸಮರ್ಥವಾಗಿ ನಿಭಾಯಿಸಿದ್ದರು. ಸಮ್ಮಿಶ್ರ ಸರ್ಕಾರದಲ್ಲೂ ಅವರಿಗೆ ಆ ಖಾತೆ ಸಿಗುತ್ತದೆ ಎಂದುಕೊಂಡಿದ್ದೆ. ಅದಕ್ಕೆ ನಾನು ಜಲಸಂಪನ್ಮೂಲ ಖಾತೆ ಬಗ್ಗೆ ಬೇಡಿಕೆ ಇಡಲಿಲ್ಲ ಎಂದರು. ಅದಕ್ಕೆ ಎಂ.ಬಿ. ಪಾಟೀಲ್ ನಕ್ಕು ಸುಮ್ಮನಾದರು.

    ಇದನ್ನೂ ಓದಿ: ಗಾರ್ಮೆಂಟ್ ಫ್ಯಾಕ್ಟರಿಯ ಯಂತ್ರಕ್ಕೆ ಸಿಲುಕಿ ಯುವತಿ ಸಾವು; ಜೀವ ಕಳೆದುಕೊಳ್ಳುವಂತೆ ಮಾಡಿತು ಸಣ್ಣದೊಂದು ಆಕಸ್ಮಿಕ

    ನೀವು ಸಿಎಂ ಆಗೋದಾದ್ರೆ ಜೈ ಅಂತೀವಿ: ನಂತರ ಆರ್.ವಿ. ದೇಶಪಾಂಡೆ ಕಡೆ ತಿರುಗಿದ ಎಚ್‌.ಡಿ. ರೇವಣ್ಣ, ಏನು ನಾಯಕರೆ? ನೀವು ಸಿಎಂ ಆಗೋದಾದ್ರೆ ಹೇಳಿ, ಜೆಡಿಎಸ್ ಶಾಸಕರೆಲ್ಲ ಜೈ ಅಂತೀವಿ ಎಂದರು.
    ಅದಕ್ಕೆ ಆರ್.ವಿ. ದೇಶಪಾಂಡೆ, ರೇವಣ್ಣ ಅವರಿಗೆ ಕೈಮುಗಿದು, ನಾನು ಒಂದು ಡಜನ್ ಸಿಎಂಗಳನ್ನು ನೋಡಿದ್ದೇನೆ. ನನಗೆ ಆ ಪದವಿ ಬೇಡ ಎಂದು ಹೇಳಿದರು.

    ಒಂದಾದ ಕಾಂಗ್ರೆಸ್-ಬಿಜೆಪಿ ಶಾಸಕರು: ಕಲಾಪ ಮುಂದೂಡುವುದಕ್ಕೂ ಮುನ್ನ ಪರಸ್ಪರ ಆರೋಪ – ಪ್ರತ್ಯಾರೋಪದಲ್ಲಿ ತೊಡಗಿದ್ದ ಕಾಂಗ್ರೆಸ್-ಬಿಜೆಪಿ ಶಾಸಕರು, ನಂತರ ಒಬ್ಬರಿಗೊಬ್ಬರು ಹೆಗಲ ಮೇಲೆ ಕೈ ಹಾಕಿಕೊಂಡು ಮಾತನಾಡಿದರು. ಬಿಜೆಪಿಯ ರಾಜೂ ಗೌಡ, ಕಾಂಗ್ರೆಸ್‌ನ ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್ ಅವರಿದ್ದಲ್ಲಿಗೆ ಬಂದು, 15 ನಿಮಿಷಗಳ ಕಾಲ ಮಾತನಾಡಿದರು. ಈ ವೇಳೆ ಕಾಂಗ್ರೆಸ್ ಶಾಸಕರ ಬಳಿ ಇದ್ದ ಸಿಡಿಯನ್ನು ಮೈಕ್‌ಗೆ ಸಿಕ್ಕಿಸಿ ತಮಾಷೆ ಮಾಡಿದರು.

    ಶಿರಸಿ ತಾಲೂಕಿನಲ್ಲಿ ಭೂಕುಸಿತ! ಅಪಾರ ಪ್ರಮಾಣದ ಹಾನಿ

    ಚುನಾವಣೆಯಲ್ಲಿ ಗೆದ್ದರೆ ವಾಷಿಂಗ್ ಮಷಿನ್ ಕೊಡಿಸುತ್ತೇನೆ ಎಂದು ಮಹಿಳೆಯ ಬಟ್ಟೆಗಳನ್ನು ತೊಳೆದು ಕೊಟ್ಟ ಎಐಎಡಿಎಂಕೆ ಅಭ್ಯರ್ಥಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts