More

    ಅನ್ಯ ಊರುಗಳಿಗೆ ಹೊರಡುವವರು ಸೋಮವಾರ ರಾತ್ರಿಯೊಳಗೇ ಹೊರಟುಬಿಡಿ!

    ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರ ಮಂಗಳವಾರದಿಂದ ಆರಂಭವಾಗಿ 22ರ ಬೆಳಗ್ಗೆ 5 ಗಂಟೆಯವರೆಗೆ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಲಾಕ್​ಡೌನ್​ ಮಾಡಲು ನಿರ್ಧರಿಸಿದೆ. ಇದರ ಜತೆಗೆ ಇನ್ನೂ 12 ಜಿಲ್ಲೆಗಳು ಸಂಪೂರ್ಣ ಲಾಕ್​ಡೌನ್​ ಆಗುವ ಸಾಧ್ಯತೆಯೂ ಇದೆ.

    ಆದ್ದರಿಂದ, ಬೇರೆ ಊರುಗಳಿಗೆ ಹೋಗಬೇಕು ಎನ್ನುವವರು, ಬೆಂಗಳೂರಿಗೆ ಕೆಲಸದ ಮೇಲೆ ಅನ್ಯ ಊರುಗಳಿಂದ ಬಂದವರು ಸೋಮವಾರ ರಾತ್ರಿಯೊಳಗೇ ತಮ್ಮ ಊರುಗಳಿಗೆ ತೆರಳುವುದು ಒಳಿತು ಎನ್ನಲಾಗಿದೆ. ಇಲ್ಲವಾದರೆ ಒಂದು ವಾರ ಬೆಂಗಳೂರಲ್ಲೇ ಅನಿವಾರ್ಯವಾಗಿ ಸಿಲುಕಿಕೊಂಡು ಪರದಾಡಬೇಕಾಗುತ್ತದೆ.

    ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಲಾಕ್​ಡೌನ್​ ಮಾರ್ಗಸೂಚಿ ಕುರಿತು ರಾಜ್ಯದ ಮುಖ್ಯ ಕಾರ್ಯದರ್ಶಿ ಅವರ ಜೆ ಸಿಎಂ ಬಿ.ಎಸ್​. ಯಡಿಯೂರಪ್ಪ ಸೋಮವಾರ ಚರ್ಚಿಸಲಿದ್ದಾರೆ. ಬಳಿಕ ಅದನ್ನು ಬಿಡುಗಡೆ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್​. ಅಶೋಕ್​ ಹೇಳಿದ್ದಾರೆ.

    ಇದನ್ನೂ ಓದಿ: ಪೊಲೀಸರಿಗೂ ಮನೆಯಿಂದಲೇ ಕೆಲಸ; ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ

    ಸಿಎಂ ನಿವಾಸದಲ್ಲಿ ಭಾನುವಾರ ಸಿಎಂ ಬಿ.ಎಸ್​. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡಿದ್ದ ಅವರು, ರಾಜ್ಯದಲ್ಲಿ ವೈದ್ಯಕೀಯ ಉಪಕರಣಗಳು ಮತ್ತು ಔಷಧೀಯ ಕಂಪನಿಗಳು ಎಂದಿನಂತೆ ಕಾರ್ಯನಿರ್ವಹಿಸಲು ಸಿಎಂ ಸಮ್ಮತಿಸಿರುವುದಾಗಿ ತಿಳಿಸಿದ್ದಾರೆ.

    ಮಂಗಳವಾರದಿಂದ ಲಾಕ್​ಡೌನ್​ ಜಾರಿಗೊಳಿಸುವ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡ ಅವರು, ಶನಿವಾರ ರಾತ್ರಿಯಿಂದ ಸೋಮವಾರ ಬೆಳಗಿನವರೆಗೆ ವಾರಾಂತ್ಯದ ಲಾಕ್​ಡೌನ್​ ಜಾರಿಯಲ್ಲಿರುತ್ತದೆ. ಆದ್ದರಿಂದ, ಅಗತ್ಯವಸ್ತುಗಳನ್ನು ಖರೀದಿಸಲು, ಊರಿಗೆ ತೆರಳಬೇಕೆಂದು ಇರುವವರಿಗೆ ತೊಂದರೆಯಾಗುತ್ತದೆ. ಇದನ್ನು ಮನಗಂಡು ಅಗತ್ಯವಸ್ತುಗಳ ಖರೀದಿಗೆ ಮತ್ತು ಊರಿಗೆ ಹೋಗುವವರಿಗೆ ಅನುಕೂಲವಾಗಲೆಂದು ಸೋಮವಾರ ಅವಕಾಶ ಮಾಡಿಕೊಡಲಾಗಿದೆ. ಮಂಗಳವಾರದಿಂದ ಮತ್ತೆ ಲಾಕ್​ಡೌನ್​ ಜಾರಿಯಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

    ಬೆಂಗಳೂರಿನಲ್ಲಿ ಕರೊನಾ ಸೋಂಕಿನ ಹರಡುವಿಕೆ ವಿಪರೀತವಾಗಿದೆ. ಆ ಸರಪಳಿಯನ್ನು ತುಂಡರಿಸಬೇಕಿದೆ. ಅದಕ್ಕಾಗಿ ಲಾಕ್​ಡೌನ್​ ಜಾರಿಗೊಳಿಸಲಾಗುತ್ತಿದೆ. ಈ ಅವಧಿಯಲ್ಲಿ ಸೋಂಕಿನ ಹರಡುವಿಕೆ ಕಡಿಮೆಯಾಗುತ್ತದೋ ಇಲ್ಲವೋ ಎಂಬುದನ್ನು ಗಮನಿಸಿ, ಲಾಕ್​ಡೌನ್​ ವಿಸ್ತರಿಸುವ ಅಥವಾ ಸ್ಥಗಿತಗೊಳಿಸುವ ಕುರಿತು ನಿರ್ಧರಿಸಲಾಗುವುದು ಎಂದು ಹೇಳಿದ್ದಾರೆ.

    ರಷ್ಯಾದಲ್ಲಿ ಸಿದ್ಧವಾಯ್ತು ಜಗತ್ತಿನ ಮೊದಲ ಕೊವಿಡ್​-19 ಲಸಿಕೆ; ಕ್ಲಿನಿಕಲ್​ ಪ್ರಯೋಗ ಸಂಪೂರ್ಣ ಯಶಸ್ವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts