More

    ಸನ್ಮಾರ್ಗದಲ್ಲಿ ನಡೆದರೆ ಬದುಕು ಬಂಗಾರ

    ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಪಟ್ಟಣದ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯರು ಪಾದಯಾತ್ರೆಯ ಮೂಲಕ ಮನೆಮನೆಗೆ ತೆರಳಿ ಭಕ್ತರಿಗೆ ರುದ್ರಾಕ್ಷಿಧಾರಣೆ ಹಾಗೂ ಧರ್ಮ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

    ತಾಲೂಕಿನ ಮನಗೂಳಿ ಪಟ್ಟಣದಲ್ಲಿ 2024ರ ಜನವರಿ 17ರಂದು ಸಂಜೆ ಕಲಬುರ್ಗಿ ಶರಣಬಸವೇಶ್ವರ ಪುರಾಣ ಜರುಗಲಿದೆ. ಫೆ. 3 ಮತ್ತು 4ರಂದು ನೂತನ ರಥೋತ್ಸವ ಕಲ್ಯಾಣಮಂಟಪ ಲೋಕಾರ್ಪಣೆ, 2008 ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ, ನಾಡಿನ ವಿವಿಧ ಮಠಾಧೀಶರಿಂದ 25 ಪೂಜಾಮಂಟಪ, ಶ್ರೀಮಠದ ಉಭಯ ಶ್ರೀಗಳ ಬೆಳ್ಳಿಮೂರ್ತಿ ಮೆರವಣಿಗೆ, ಸಾಮೂಹಿಕ ವಿವಾಹ, ರಾಜ್ಯಮಟ್ಟದ ಶ್ರೀಸಂಗನಬಸವ ಪ್ರಶಸ್ತಿ ಪ್ರದಾನ ಹಾಗೂ ಧರ್ಮಸಭೆ ಹಮ್ಮಿಕೊಳ್ಳಲಾಗಿದೆ.

    ಇದರ ಅಂಗವಾಗಿ ಬಸವನಬಾಗೇವಾಡಿ ಅಖಂಡ ತಾಲೂಕಿನ ವಿವಿಧ ಹಳ್ಳಿಗಳಿಗೆ ಪಾದಯಾತ್ರೆಯ ಮೂಲಕ ಭಕ್ತರ ಮನೆಮನೆಗೆ ತೆರಳಿ ರುದ್ರಾಕ್ಷಿಧಾರಣೆ ಹಾಗೂ ಜನರಲ್ಲಿ ಧರ್ಮದ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಶ್ರೀಗಳು ಹಮ್ಮಿಕೊಂಡಿದ್ದಾರೆ. ಪ್ರತಿದಿನವು ಒಂದೊಂದು ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಕ್ಕೆ ತೆರಳಿ ಭಕ್ತರಲ್ಲಿ ಧರ್ಮದ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ. ಈಗಾಗಲೇ ಸುಮಾರು 40 ಗ್ರಾಮಗಳಲ್ಲಿ ಪಾದಯಾತ್ರೆ ನಡೆಸಲಾಗಿದೆ. ಭಕ್ತರಿಗೆ ರುದ್ರಾಕ್ಷಿಧಾರಣೆ ಮಾಡಿ ದುಶ್ಚಟಗಳನ್ನು ತ್ಯಜಿಸಿ ಸನ್ಮಾರ್ಗದಲ್ಲಿ ತೊಡಗಿಕೊಳ್ಳಬೇಕು. ಕುಟುಂಬದ ಸದಸ್ಯರೊಂದಿಗೆ ಸುಂದರ ಬದುಕನ್ನು ಕಟ್ಟಿಕೊಳ್ಳಬೇಕು. ದೇವರು ಕೊಟ್ಟ ಐಶ್ವರ್ಯದಲ್ಲಿ ಅಲ್ಪಸ್ವಲ್ಪ ದಾನ, ಧರ್ಮ ಮಾಡಬೇಕು. ಅದರಲ್ಲಿ ಸಿಗುವ ತೃಪ್ತಿ, ಶಾಂತಿ, ನೆಮ್ಮದಿ ಬೇರೆ ಯಾವುದರಲ್ಲಿ ದೊರೆಯುವದಿಲ್ಲ ಎಂದು ಶ್ರೀಗಳು ತಿಳಿಸಿದರು.

    ಶಿವಾನಂದ ಗುಜಗೊಂಡ, ಶಿವಾಜಿ ಘೋರ್ಪಡೆ, ಶ್ರೀಶೈಲ ಬಿರಾದಾರ, ರೇವಣಸಿದ್ದಪ್ಪ ತಪಶೆಟ್ಟಿ, ಪ್ರಕಾಶ ಕುಂಬಾರ, ಶೇಕಪ್ಪ ಬಿರಾದಾರ, ಭೀಮಣ್ಣ ಔರಸಂಗ, ರಾಮು ಬಿರಾದಾರ, ಮುದುಕಪ್ಪ ಮಣ್ಣೂರ, ಬಸವರಾಜ ತಪಶೆಟ್ಟಿ, ಯಂಕಪ್ಪ ಬನ್ನೂರ, ಮಾಂತಪ್ಪ ತೊನಿಶ್ಯಾಳ, ರಾಜು ಹುಣಶಿನಕಟ್ಟಿ, ಮಡಿವಾಳಪ್ಪ ತೊನಿಶ್ಯಾಳ, ಈರಣ್ಣ ಕಂಬಿ ಇತರರು ಶ್ರೀಗಳೊಂದಿಗೆ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts