More

    ಎಲ್ಲ ಸಂಪತ್ತು ಇದ್ದು ಆರೋಗ್ಯ ಉತ್ತಮವಾಗಿರದಿದ್ದರೆ ಜೀವನ ವ್ಯರ್ಥ

    ಕಡೂರು: ಎಲ್ಲ ಸಂಪತ್ತು ಇದ್ದು ಆರೋಗ್ಯ ಉತ್ತಮವಾಗಿರದಿದ್ದರೆ ಜೀವನವೇ ವ್ಯರ್ಥ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಜಿಲ್ಲಾ ಯೋಜನಾಧಿಕಾರಿ ಪ್ರಕಾಶ್‌ರಾವ್ ತಿಳಿಸಿದರು.

    ಹಿರೇನಲ್ಲೂರು ಗ್ರಾಪಂನಲ್ಲಿ ಮಂಗಳವಾರ ಅಜ್ಜಂಪುರ ತಾಲೂಕು ಧರ್ಮಸ್ಥಳ ಗ್ರಾಮಾಭಿವೃದ್ಧಿ ಘಟಕದಿಂದ ಜ್ಞಾನವಿಕಾಸ ಕಾರ್ಯಕ್ರಮದಡಿ ಏರ್ಪಡಿಸಿದ್ದ ತಾಲೂಕು ಮಟ್ಟದ ಆರೋಗ್ಯ ಉಚಿತ ತಪಾಸಣಾ ಶಿಬಿರದಲ್ಲಿ ಮಾತನಾಡಿ, ಒತ್ತಡದ ಬದುಕಿನಲ್ಲಿ ಸಿಲುಕಿರುವ ಮನುಷ್ಯ ಆರೋಗ್ಯ ರಕ್ಷಿಸಿಕೊಳ್ಳಲಾರದ ಸ್ಥಿತಿಯಲ್ಲಿದ್ದಾನೆ. ರೋಗ ಆರಂಭಿಕ ಹಂತದಲ್ಲಿಯೇ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.
    ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸ್ವಾತಿ ಆರೋಗ್ಯದ ಕಾಳಜಿ ಅರಿವು ಮೂಡಿಸಿದರು. ಚಿತ್ರದುರ್ಗದ ಕಣ್ಣಿನ ಆಸ್ಪತ್ರೆ ವೈದ್ಯರ ತಂಡ ತಪಾಸಣೆ ನಡೆಸಿದರು. ಅಜ್ಜಂಪುರ ತಾಲೂಕು ಯೋಜನಾಧಿಕಾರಿ ಸಂಜೀವ್, ಹಿರೇನಲ್ಲೂರು ವಲಯದ ಮೇಲ್ವಿಚಾರಕಿ ಸುಮಿತ್ರಾ, ಸ್ವಸಹಾಯ ಸಂಘದ ಮಹಿಳಾ ಸದಸ್ಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts