More

    ಸರ್ಕಾರಿ ಯೋಜನೆಗಳು ಸದ್ಬಳಕೆಯಾಗಲಿ

    ಮಾಂಜರಿ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಅನೇಕ ಯೋಜನೆಗಳ ಮೂಲಕ ಮಹಿಳೆಯರನ್ನು ಸಬಲೀಕರಣ ಮಾಡುತ್ತಿದೆ. ಜತೆಗೆ ಸರ್ಕಾರದ ಯೋಜನೆಗಳನ್ನು ತಲುಪಿಸುತ್ತಿದೆ. ಮಹಿಳೆಯರು ಅವುಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಯೋಜನೆಯ ಚಿಕ್ಕೋಡಿ ಜಿಲ್ಲಾ ನಿರ್ದೇಶಕ ಕೃಷ್ಣ ಟಿ. ಹೇಳಿದರು.

    ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನವಿಕಾಸ ಸೃಜನಶೀಲ ಕಾರ್ಯಕ್ರಮದಡಿ ತಾಲೂಕಿನ ಹಿರೇಕೋಡಿ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಜ್ಞಾನವಿಕಾಸ ಸೃಜನಶೀಲ ಸದಸ್ಯೆಯರಿಗೆ ಆಯುಷ್ಮಾನ್ ಭಾರತ ಆರೋಗ್ಯ ಕಾರ್ಡ್ ಮತ್ತು ನಿರ್ಮಾಣ ಕಾಮಗಾರಿ ಕಾರ್ಮಿಕರಿಗೆ ಕಾರ್ಡ್ ವಿತರಣೆ, ಸರ್ಕಾರದ ಯೋಜನೆಗಳ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹಿಳಾ ಸಬಲೀಕರಣಕ್ಕೆ ಹತ್ತಾರು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಅವುಗಳ ಸದುಪಯೋಗ ಮಾಡಿಕೊಳ್ಳಬೇಕು. ಈ ಬಗ್ಗೆ ಸಂಸ್ಥೆಯಿಂದ ಸದಸ್ಯೆಯರಿಗೆ ಅಗತ್ಯ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

    ತಾಲೂಕು ಯೋಜನಾಧಿಕಾರಿ ರಾಘವೇಂದ್ರ ಮಾತನಾಡಿ, ತಾಲೂಕಿನ ಜೈನಾಪುರ, ಹಿರೇಕೋಡಿ, ನಾಗರಾಳ ಮತ್ತು ನೇಜ್ ಗ್ರಾಮಗಳ 600 ರಷ್ಟು ಜ್ಞಾನ ವಿಕಾಸ ಸೃಜನಶೀಲ ಸದಸ್ಯೆಯರಿಗೆ ಆಯುಷ್ಮಾನ್ ಭಾರತ ಆರೋಗ್ಯ ಕಾರ್ಡ್ ಮತ್ತು 60 ರಷ್ಟು ನಿರ್ಮಾಣ ಕಾಮಗಾರಿ ಕಾರ್ಮಿಕರಿಗೆ ಕಾರ್ಡ್ ವಿತರಿಸಲಾಗಿದೆ. ಮಹಿಳೆಯರು ಅಗತ್ಯವಿದ್ದಾಗ ಅವುಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

    ಗ್ರಾಪಂ ಅಧ್ಯಕ್ಷ ಬಾಬರ ಪಟೇಲ್, ಉಪಾಧ್ಯಕ್ಷೆ ಅನಿತಾ ದೇವಡಕರ ಹಾಗೂ ಅನಿತಾ ಬನಗೆ, ಭರತ ದೇವಡಕರ, ಬಸವರಾಜ ಚಿಂಚಣಿ, ಸೇವಾ ಪ್ರತಿನಿಧಿ ಸುನೀತಾ ಮಗದುಮ್, ಸಂಗೀತಾ ಕಾಂಬಳೆ, ಒಕ್ಕೂಟ ಅಧ್ಯಕ್ಷೆ ಶಾರವ್ವ ಕರಗಾಂವೆ, ಜ್ಞಾನವಿಕಾಸ ಸಮನ್ವಯಾಧಿಕಾರಿ ತುಳಸಾ ವಿಶ್ವಕರ್ಮ, ಬೇಬಿ ವಿಶ್ವಕರ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts