More

    ದಾನ ಮಾಡಿದರೆ ದುಪ್ಪಟ್ಟು ಫಲ ಪ್ರಾಪ್ತಿ: ಕೋಡಿಮಠದ ಶ್ರೀ ಆಶೀರ್ವಚನ

    ಶಿರಾಳಕೊಪ್ಪ: ಗಳಿಸಿದ ಸಂಪತ್ತಿನಲ್ಲಿ ಅಲ್ಪ ಪ್ರಮಾಣದಲ್ಲಿ ದಾನ ಮಾಡಿದಾಗ ಆ ಕೈಗೆ ದುಪ್ಪಟ್ಟು ಬೆಲೆ ಬರುತ್ತದೆ ಎಂದು ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದರು.
    ಕಡೇನಂದಿಹಳ್ಳಿ ಶ್ರೀ ಗುರು ರೇವಣಸಿದ್ಧೇಶ್ವರ ಪುಣ್ಯಾಶ್ರಮದಲ್ಲಿ ಜರುಗಿದ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಜೀವನದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಬೇಕೆಂಬ ಸಂಕಲ್ಪವಿದ್ದರೆ ಆ ಕಾರ್ಯಗಳನ್ನು ತಕ್ಷಣ ಮಾಡಿ ಮುಗಿಸಬೇಕು. ಊಟಗಳಲ್ಲಿ ಎರಡು ವಿಧವಿದೆ. ನಿತ್ಯ ಹೊಟ್ಟೆ ತುಂಬಿಸಿಕೊಳ್ಳಲು ಮಾಡುವ ಊಟ ಒಂದು ವಿಧವಾದರೆ ಧಾರ್ಮಿಕ ಚಿಂತನ, ಪೂಜೆ, ಗುರು ಸೇವೆ ಇವೆಲ್ಲವೂ ಆತ್ಮದ ಊಟವೆನ್ನಿಸಿಕೊಳ್ಳುತ್ತವೆ ಎಂದರು.
    ಶ್ರೀ ರೇವಣಸಿದ್ಧೇಶ್ವರ ಸ್ವಾಮೀಜಿ ಕಿರಿಯ ವಯಸ್ಸಿನಲ್ಲಿ ಅಧ್ಯಾತ್ಮ ಸಾಧನೆ ಮಾಡುತ್ತಿದ್ದಾರೆ. ಲಿಂಗ ಪೂಜಾನುಷ್ಠಾನ ಶಕ್ತಿ ಬೆಳೆಸಿಕೊಂಡಿದ್ದಾರೆ. ಶ್ರೀಗಳು ಭಕ್ತರ ಹೃದಯ ಗೆದ್ದಿದ್ದಾರೆ. ಭಕ್ತರ ಸಂಪತ್ತು ಗಳಿಸಿಕೊಂಡಿದ್ದಾರೆ. ಸಂತ ಮಹಾಂತರ ಜೀವನ ತಮ್ಮ ಉದ್ಧಾರಕ್ಕಾಗಿರದೇ ಭಕ್ತರ ಉದ್ಧಾರಕ್ಕಾಗಿ ಇರುತ್ತದೆ ಎಂದರು.
    ಕಡೇನAದಿಹಳ್ಳಿ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. ತೊಗರ್ಸಿ ಶ್ರೀ ಮಹಾಂತ ದೇಶಿಕೇಂದ್ರ ಶಿವಾಚಾರ್ಯರು, ಕನ್ನೂರು-ಸಿಂಧನೂರು ಶ್ರೀ ಸೋಮನಾಥ ಶಿವಾಚಾರ್ಯರು, ಚನ್ನಗಿರಿ ಶ್ರೀ ಕೇದಾರ ಶಿವಶಾಂತವೀರ ಶಿವಾಚಾರ್ಯರು, ಕಾರ್ಜುವಳ್ಳಿ ಶ್ರೀ ಸದಾಶಿವ ಶಿವಾಚಾರ್ಯರು, ಹಾರನಹಳ್ಳಿ ಶ್ರೀ ಶಿವಯೋಗಿ ಶಿವಾಚಾರ್ಯರು ಇತರರಿದ್ದರು. ವಿವಿಧ ಕ್ಷೇತ್ರಗಳ ಗಣ್ಯರಿಗೆ, ಸೇವಾರ್ಥಿಗಳಿಗೆ ಗುರುರಕ್ಷೆ ನೀಡಿ ಗೌರವಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts