More

    ಮೈಸೂರಿನಲ್ಲಿ ಕರೆ ಮಾಡಿದರೆ ಮನೆಗೆ ಬರುತ್ತಾನೆ ಗಣಪ!

    ಮೈಸೂರು: ಸದಾ ಕೆಲಸದ ಒತ್ತಡದಲ್ಲಿರುವವರಿಗೆ ಗಣೇಶನ ಮೂರ್ತಿಯನ್ನು ಹುಡುಕಿ ತರುವುದು ಕಷ್ಟ. ಹೀಗಾಗಿ ಕರೆ ಮಾಡಿದರೆ ತಕ್ಷಣ ಮನೆ ಬಾಗಿಲಿಗೆ ಪೂಜಾ ಸಾಮಗ್ರಿಗಳೊಂದಿಗೆ ಗಣೇಶ ಆಗಮಿಸುತ್ತಾನೆ.

    ಇಂತಹದೊಂದು ವಿಭಿನ್ನ ಕಲ್ಪನೆಗೆ ಮೈಸೂರಿನ ಸಹೋದರರಾದ ಟಿ.ಎಂ.ಪ್ರತಾಪ್, ಗಂಗೂ ಹಾಗೂ ಪ್ರದೀಪ್ ಚಾಲನೆ ನೀಡಿದ್ದು, ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಾಕಷ್ಟು ಕರೆಗಳು ಬರುತ್ತಿವೆ. ಲಾಭದ ಆಕಾಂಕ್ಷೆ ಇಲ್ಲದ ಇವರ ಉದ್ದೇಶ ಪರಿಸರ ಸ್ನೇಹಿ ಗಣಪನ ಮೂರ್ತಿ ಪ್ರತಿಯೊಬ್ಬರ ಮನೆಯಲ್ಲಿಯೂ ಇರಬೇಕು ಎನ್ನುವುದು. ಇದು ಈ ಸಹೋದರರ ದೂರದೃಷ್ಟಿಯಾಗಿದೆ. ಸದ್ಯಕ್ಕೆ ಕರೆ ಮಾಡಿದರೆ ಗಣೇಶ ಮನೆ ಬಾಗಿಲಿಗೆ ಬರುವ ಸೇವೆ ಮೈಸೂರಿನಲ್ಲಿ ಮಾತ್ರ ಲಭ್ಯವಿದೆ. ಪ್ರತಿಕ್ರಿಯೆಯನ್ನು ಗಮನಿಸಿ ಮುಂದಿನ ವರ್ಷದಿಂದ ರಾಜ್ಯದ ಇತರೆಡೆಗಳಿಗೂ ಕಳುಹಿಸುವ ಚಿಂತನೆಯಲ್ಲಿದ್ದಾರೆ.

    ಏನಿದು ಪಾರ್ಸಲ್ ಗಣಪ?: ಗಣೇಶೋತ್ಸವ ಹತ್ತಿರ ಬರುತ್ತಿದ್ದಂತೆ ಗಣೇಶನ ಮಾರಾಟ ಜೋರಾಗುತ್ತದೆ. ಆದರೆ, ಈ ಬಾರಿ ಮತ್ತೆ ಪರಿಸರಕ್ಕೆ ಹಾನಿಕರವಾಗಿರುವ ಬಣ್ಣದ ಗಣಪ ಬೀದಿ ಬದಿಯಲ್ಲಿ ಕಂಡು ಬರುತ್ತಿದ್ದಾನೆ. ಕೋವಿಡ್ ನಂತರ ಗಣೇಶೋತ್ಸವ ಜಾಗೃತಿ ಮೂಡಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಪರಿಸರ ಸ್ನೇಹಿ ಗಣಪನಿಗಿಂತ ಬಣ್ಣದ ಗಣಪನೇ ಹೆಚ್ಚಿಗೆ ಮಾರಾಟವಾಗುತ್ತಿವೆ. ಇದರಿಂದ ಸಾಕಷ್ಟು ತೊಂದರೆಗಳು ಪರಿಸರದ ಮೇಲೆ ಆಗಲಿದೆ. ಹೀಗಾಗಿ ಮೈಸೂರಿನ ಸಹೋದರರು ಇದಕ್ಕೆ ಪರ್ಯಾಯವಾಗಿ ಪರಿಸರ ಸ್ನೇಹಿ ಗಣಪನ ಮೂರ್ತಿಯನ್ನು ತಯಾರಿಸಿದ್ದಾರೆ. ಇದು ಶುದ್ಧ ಮಣ್ಣಿನಿಂದ ಮಾಡಿದ್ದು, ಯಾವುದೇ ರೀತಿಯ ಕಲರ್ ಬಳಸಿಲ್ಲ. ನೀರಿಗೆ ಹಾಕಿದ ತಕ್ಷಣ ಅದು ಕರಗುತ್ತದೆ. ಈ ಹಿನ್ನೆಲೆಯಲ್ಲಿ ಪರಿಸರ ಪ್ರೇಮಿಗಳು ಈ ಗಣಪನತ್ತ ಹೆಚ್ಚಿನ ಆಸಕ್ತಿ ವಹಿಸಿದ್ದಾರೆ.
    ಈಗಾಗಲೇ ಸಾಮಾಜಿತ ತಾಣದಲ್ಲಿ ಪಾರ್ಸಲ್ ಗಣಪತಿ ಸದ್ದು ಮಾಡುತ್ತಿದೆ. ಅದರಲ್ಲಿರುವ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೆ ಮೈಸೂರಿನಲ್ಲಿ ಅವರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts