More

    ಇಷ್ಟವಿಲ್ಲದಿದ್ದರೆ ನನ್ನ ಚಿತ್ರ ನೋಡಬೇಡಿ..

    ಕೆಲವು ವರ್ಷಗಳ ಹಿಂದೆ ನೆಪೋಟಿಸಂ (ಸ್ವಜನಪಕ್ಷಪಾತ) ಎಂಬ ಪದಕ್ಕೆ ಅರ್ಥವೇ ಬಹಳಷ್ಟು ಜನರಿಗೆ ಗೊತ್ತಿರಲಿಲ್ಲ. ಯಾವಾಗ ‘ಕಾಫಿ ವಿಥ್ ಕರಣ್’ ಕಾರ್ಯಕ್ರಮದಲ್ಲಿ ಕರಣ್ ಜೋಹರ್ ಕುರಿತು ಸ್ಟಾರ್ ಮಕ್ಕಳನ್ನು ಮಾತ್ರ ಬೆಳೆಸುತ್ತಾರೆ ಎಂದರೋ, ಅಲ್ಲಿಂದ ಈ ನೆಪೋಟಿಸಂ ಚರ್ಚೆ ಶುರುವಾಯ್ತು. ಅದರಲ್ಲೂ ಸುಶಾಂತ್ ಸಿಂಗ್ ರಜಪೂತ್ ನಿಧನದ ನಂತರ ಈ ಚರ್ಚೆಗೆ ಇನ್ನಷ್ಟು ಕಾವು ಸಿಕ್ಕಿತು. ಹಲವು ಸ್ಟಾರ್ ಮಕ್ಕಳಿಗೆ ಇದರಿಂದ ಬಿಸಿ ತಟ್ಟಿದ್ದು ಸುಳ್ಳಲ್ಲ. ಅದರಲ್ಲೂ ಆಲಿಯಾ ಭಟ್ ಇದರಿಂದ ಸಾಕಷ್ಟು ಕಿರಿಕಿರಿ ಅನುಭವಿಸಿದರು. ಅವರ ಹಲವು ಚಿತ್ರಗಳನ್ನು ಟ್ರೋಲ್ ಮಾಡಲಾಯಿತು.

    ಇದೆಲ್ಲದರಿಂದ ನೊಂದಿರುವ ಆಲಿಯಾ, ಇಷ್ಟವಿಲ್ಲದಿದ್ದರೆ ತನ್ನ ಚಿತ್ರಗಳನ್ನು ನೋಡಬೇಡಿ ಎಂದು ಹೇಳಿದ್ದಾರೆ. ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘ನಾನು ಇಷ್ಟವಿಲ್ಲದಿದ್ದರೆ, ನನ್ನ ಚಿತ್ರಗಳನ್ನು ನೋಡಬೇಡಿ. ಆದರೆ, ಪದೇಪದೇ ಸ್ಟಾರ್ ಮಕ್ಕಳು ಎಂದು ಹಂಗಿಸಬೇಡಿ. ನನಗೆ ಈ ವಿಷಯದ ಬಗ್ಗೆ ಚರ್ಚೆ ಮಾಡುತ್ತಾ ಕೂರಲು ಇಷ್ಟವಿಲ್ಲ. ಒಂದಲ್ಲ ಒಂದು ದಿನ ನನ್ನ ಅಭಿನಯದಿಂದ ಎಲ್ಲರ ಬಾಯಿ ಮುಚ್ಚಿಸುವೆ ಎಂಬ ನಂಬಿಕೆ ನನಗಿದೆ’ ಎನ್ನುತ್ತಾರೆ ಆಲಿಯಾ. ನೆಪೋಟಿಸಂ ಎನ್ನುವುದು ಪ್ರತೀ ಕ್ಷೇತ್ರದಲ್ಲೂ ಇದೆ ಎನ್ನುವ ಆಲಿಯಾ, ಅದು ಒಂದು ಹಂತದವರೆಗೆ ಮಾತ್ರ ಒಬ್ಬರನ್ನು ಬೆಳೆಸುವುದಕ್ಕೆ ಸಾಧ್ಯ ಎಂದು ಅಭಿಪ್ರಾಯಪಡುತ್ತಾರೆ.

    ‘ನಾಳೆ ನನ್ನ ಮಗ ಅಥವಾ ಮಗಳೋ ಚಿತ್ರರಂಗಕ್ಕೆ ಬರಬೇಕು ಎಂದರೆ ಬರೀ ನನ್ನ ಹೆಸರು ಮಾತ್ರ ಸಾಲದು. ನನ್ನ ಹೆಸರಿನಿಂದ ಅವಕಾಶ ಸಿಗಬಹುದು. ಆದರೆ, ನಂತರ ಇಲ್ಲಿ ನೆಲೆಯೂರುವುದಕ್ಕೆ ತಾನೇನೆಂದು ಸಾಬೀತು ಮಾಡಬೇಕು’ ಎನ್ನುತ್ತಾರೆ. –ಏಜೆನ್ಸೀಸ್

    ವೋಟರ್​ ಐಡಿಗೆ ಆಧಾರ್ ಲಿಂಕ್ ಮಾಡದಿದ್ದರೆ ಹೆಸರು ರದ್ದಾಗುತ್ತಾ?: ಇಲ್ಲಿದೆ ಚುನಾವಣಾ ಆಯೋಗದ ಸ್ಪಷ್ಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts