More

    ರಾಮಮಂದಿರಕ್ಕೆ ದೇಣಿಗೆ: ಇಷ್ಟವಿದ್ದವರು ಕೊಡಿ, ಬೇಡವಾದವರು ಬಿಡಿ; ಪೇಜಾವರ ಶ್ರೀಗಳ ಖಡಕ್ ನುಡಿ

    ಉಡುಪಿ: ರಾಮ ಜನ್ಮಭೂಮಿಯ ನಿಧಿ ಸಂಗ್ರಹಕ್ಕಾಗಿ ದೇಶದ ಪ್ರತಿಯೊಂದು ಮನೆಯನ್ನು ಸಂಪರ್ಕಿಸಬೇಕು ಎನ್ನುವುದು ನಮ್ಮ ಉದ್ದೇಶ. ದೇಣಿಗೆ ಕೊಟ್ಟವರ ದಾಖಲೆಗಾಗಿ ರಶೀದಿ ನೀಡುತ್ತಿದ್ದೇವೆ. ಜನರ ಆಸಕ್ತಿ ನಿರೀಕ್ಷೆಗಿಂತ ಹೆಚ್ಚಾಗಿದ್ದು, ರಶೀದಿ ಪುಸ್ತಕ ಕೊರತೆ ಉಂಟಾಗಿದೆ. ಹೀಗಾಗಿ ಕಾರ್ಯಕರ್ತರು ಸಂಪರ್ಕಿಸದ ಮನೆಗಳನ್ನು ಗುರುತು ಮಾಡಿಕೊಳ್ಳುತ್ತಿದ್ದಾರೆ. ಇದು ನಿಧಿ ಸಮರ್ಪಣೆ ಮಾಡದವರನ್ನು ಗುರುತಿಸುವ ಪ್ರಕ್ರಿಯೆಯಲ್ಲ. ಬಿಟ್ಟುಹೋಗಿರುವ ಮನೆ ಮರು ಸಂಪರ್ಕ ಮಾಡುವ ಕಾರ್ಯ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

    ರಾಮಮಂದಿರಕ್ಕೆ ದೇಣಿಗೆ ನೀಡದವರ ಮನೆ ಗುರುತು ಮಾಡಿಕೊಳ್ಳಲಾಗುತ್ತಿದೆ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರೋಪ ಆಧಾರರಹಿತ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಬೇಜವಾಬ್ದಾರಿ ಹೇಳಿಕೆ ನೀಡಬಾರದು. ಆರೋಪಕ್ಕೆ ಸರಿಯಾದ ದಾಖಲೆ ಒದಗಿಸಬೇಕು. ರಾಮಜನ್ಮಭೂಮಿ ಟ್ರಸ್ಟ್ ಅಥವಾ ಆರೆಸ್ಸೆಸ್ ಕಾರ್ಯಕರ್ತರಿಗೆ ಇಂಥ ಯಾವುದೇ ಸೂಚನೆ ನೀಡಿಲ್ಲ ಎಂದು ಪೇಜಾವರ ಮಠದಲ್ಲಿ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

    ಯಾರಿಗೂ ರಾಮಮಂದಿರ ನಿರ್ಮಾಣಕ್ಕೆ ನಿಧಿ ಸಮರ್ಪಣೆ ಮಾಡುವಂತೆ ಒತ್ತಾಯಿಸುವುದಿಲ್ಲ. ಇಷ್ಟವಿದ್ದವರು ನೀಡಬಹುದು, ಇಲ್ಲದಿದ್ದವರು ಬಿಡಬಹುದು. ಜನ್ಮಭೂಮಿ ವಿವಾದಿತ ಪ್ರದೇಶ ಎನ್ನುವವರ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸುವುದಿಲ್ಲ. ದೇಶದ ಸಂವಿಧಾನವನ್ನು ಮಾನ್ಯ ಮಾಡುವವರು ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪನ್ನು ಒಪ್ಪುತ್ತಾರೆ. ಅದಕ್ಕೆ ಗೌರವ ನೀಡದವರ ದೇಶ ನಿಷ್ಠೆ ಬಗ್ಗೆ ಸಂದೇಹ ಪಡುವಂತಾಗಿದೆ ಎಂದು ಶ್ರೀಗಳು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

    ರಾಮ ಮಂದಿರಕ್ಕೆ ಹಣ ಕೊಡದವರ ಮನೆ ಗುರುತು: ಎಚ್.​ಡಿ. ಕುಮಾರಸ್ವಾಮಿ ವಿರುದ್ಧ ತಿರುಗಿಬಿದ್ದ ವಿಎಚ್​ಪಿ

    ವಿವಾದಿತ ಭೂಮಿಯ ರಾಮ ಮಂದಿರಕ್ಕೆ ದುಡ್ಡು ಕೊಡಲ್ಲ: ಸಿದ್ದರಾಮಯ್ಯ

    ರಾಮ ಮಂದಿರ ನಿಧಿ ಸಂಗ್ರಹಕ್ಕೆ ಈ 11 ರ ಬಾಲೆ ನೀಡಿದ್ದು ಅಷ್ಟಿಷ್ಟು ಹಣವಲ್ಲ!

    ‘ರಾಮ ಮಂದಿರಕ್ಕೆ ನನ್ನೆಲ್ಲ ಆಭರಣ ಅರ್ಪಿಸಿ’ ಹೆಂಡತಿಯ ಕೊನೆಯಾಸೆ ನೆರವೇರಿಸಿದ ಗಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts