More

    ಅಸ್ಪೃಶ್ಯತೆ ಕಂಡುಬಂದರೆ ಕಾನೂನು ಕ್ರಮ

    ಮುಂಡರಗಿ: ಮನುಷ್ಯ ಜಾತಿ ಒಂದೇ. ಮನುಷ್ಯನಲ್ಲಿ ಹರಿಯುವ ರಕ್ತವೂ ಒಂದೇ ಆಗಿದೆ. ಗಾಳಿ, ನೀರು ಎಲ್ಲ ಒಂದೇ ಇರುವಾಗ ಜಾತೀಯತೆ ಆಚರಣೆ ಏಕೆ ಮಾಡಬೇಕು? ಅಸ್ಪೃಶ್ಯತೆ ಆಚರಣೆ ಕಂಡುಬಂದಲ್ಲಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ಆಶಪ್ಪ ಪೂಜಾರಿ ಹೇಳಿದರು.

    ತಾಲೂಕಿನ ಶಿಂಗಟಾಲೂರ ಗ್ರಾಮದಲ್ಲಿ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ, ತಾಪಂ ಸಹಯೋಗದಲ್ಲಿ ಗುರುವಾರ ಏರ್ಪಡಿಸಿದ್ದ ಅಸ್ಪೃಶ್ಯತೆ ನಿಮೂಲನೆ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ತಾಪಂ ಸದಸ್ಯ ರುದ್ರಗೌಡ ಪಾಟೀಲ ಮಾತನಾಡಿ, ಕಾನೂನಿನ ಅರಿವು ಎಲ್ಲರಿಗೂ ಅವಶ್ಯ. ಚತುರ್ವರ್ಣ ಪದ್ಧತಿಯಿಂದ ಆರಂಭವಾದ ಈ ಜಾತಿ ವ್ಯವಸ್ಥೆ ಈಗ ನೂರಾರು ಜಾತಿ, ಉಪಜಾತಿಗಳಾಗಿವೆ. ಕಾಯ್ದೆ ಏನೇ ಇದ್ದರೂ ಸಮಾನತೆ ಎನ್ನುವುದು ಪ್ರತಿಯೊಬ್ಬರ ಹೃದಯದಿಂದ ಬರಬೇಕು. ಅದಾಗದಿದ್ದಾಗ ಕಾನೂನು ಜಾರಿಗೆ ತರಬೇಕಾಗುತ್ತದೆ ಎಂದರು.

    ವಕೀಲ ಆರ್.ವಿ. ದೊಡ್ಡಮನಿ ಮಾತನಾಡಿದರು. ಶಿಂಗಟಾಲೂರ ಗ್ರಾಪಂ ಅಧ್ಯಕ್ಷೆ ಮಂಜವ್ವ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷೆ ಸುಮಿತ್ರಾ ಕಗ್ಗಲರ, ದಂಡೆಪ್ಪ ಹರಿಜನ, ಹುಚ್ಚಿರಪ್ಪ ಅಂಗಡಿ, ಗ್ರಾಪಂ ಸದಸ್ಯರು ಇದ್ದರು.

    ದೀಪಾ ಪಾಟೀಲ ಅವರ ಕಲಾ ತಂಡ ಜಾಗೃತಿ ಗೀತೆಗಳನ್ನು ಮತ್ತು ಬೀದಿ ನಾಟಕಗಳನ್ನು ಪ್ರಸ್ತುತಪಡಿಸಿತು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಉದಯಕುಮಾರ ಯಲಿವಾಳ ಸ್ವಾಗತಿಸಿದರು. ಸಮಾಜ ಕಲ್ಯಾಣ ಇಲಾಖೆ ಅಧೀಕ್ಷಕ ಶರಣಯ್ಯ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts