More

    ಛಲವಿದ್ದರೆ ಉನ್ನತಮಟ್ಟಕೇರಲು ಸಾಧ್ಯ

    ಬೆಳಗಾವಿ: ರಿಯಲ್ ಎಸ್ಟೇಟ್, ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ವೃತ್ತಿ ನಿಷ್ಠೆ, ಪಾರದರ್ಶಕತೆ, ಕಠಿಣ ಪರಿಶ್ರಮ, ಸಾಧಿಸುವ ಛಲವಿದ್ದರೆ ಜೀವನದಲ್ಲಿ ಉನ್ನತ ಮಟ್ಟಕ್ಕೆ ಬೆಳೆಯಲು ಸಾಧ್ಯ ಎಂದು ಕ್ರೆಡಾಯ್ ಸದಸ್ಯ, ರಿಯಲ್ ಎಸ್ಟೇಟ್ ಉದ್ಯಮಿ ಗೋವಿಂದ ಟೆಕ್ಕೇಕರ್ ಹೇಳಿದರು.

    ನಗರದ ಮಿಲೇನಿಯಂ ಗಾರ್ಡನ್‌ನಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಸಾರ್ಥಕ 25ನೇ ವರ್ಷದ ಬೆಳ್ಳಿ ಮಹೋತ್ಸವ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಸಾಕಷ್ಟು ಅಡತಡೆ ಎದುರಾಗುತ್ತಿವೆ. ಅವುಗಳನ್ನು ಸಮರ್ಪಕವಾಗಿ ಎದುರಿಸಿ ಹೊಸದಾಗಿ ಶ್ರೀರಾಮ ಬಿಲ್ಡರ್ ಡೆವಲಪರ್ಸ್‌ ಆ್ಯಂಡ್ ಇಂಜಿನಿಯರ್ಸ್‌ ಸಂಸ್ಥೆ ಆರಂಭಿಸುತ್ತಿದ್ದೇನೆ ಎಂದರು.

    ಭವಿಷ್ಯದಲ್ಲಿ ನಿರ್ಮಾಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಅದಕ್ಕೆ ಪೂರಕವಾಗುವಂತೆ ಈಗಿನಿಂದಲೇ ಸಜ್ಜಾಗುತ್ತಿದ್ದೇವೆ. ನಿರ್ಮಾಣ ಕ್ಷೇತ್ರದಲ್ಲಿ ತಂದೆಯವರು ಹಾಕಿಕೊಟ್ಟ ಮಾರ್ಗದಲ್ಲೇ ನಾವು ನಡೆಯುತ್ತಿದ್ದೇವೆ. ಪಾರದರ್ಶಕತೆ, ವೃತ್ತಿ ನಿಷ್ಠೆ, ವಿಶ್ವಾಸವೇ ನಮ್ಮ ಉದ್ಯಮ ಬೆಳೆಯಲು ಕಾರಣವಾಗಿದೆ ಎಂದರು.

    ಉದ್ಯಮಿ ಗೋಪಾಲರಾವ್ ಕುಕಡೋಳಕರ್ ಮಾತನಾಡಿ, ದಶಕಗಳಿಂದ ನಿರ್ಮಾಣ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಬಂದಿರುವ ಉದ್ಯಮಿ ಗೋವಿಂದ ಟೆಕ್ಕೇಕರ್ ಕಷ್ಟಪಟ್ಟು ಬೆಳೆದಿದ್ದಾರೆ. ಅವರ ವೃತ್ತಿನಿಷ್ಠೆ, ಪಾರದರ್ಶಕತೆ ಅವರನ್ನು ಉನ್ನತ ಮಟ್ಟಕ್ಕೆ ಬೆಳೆಯಲು ಪ್ರಮುಖ ಕಾರಣ ಎನ್ನಲಾಗಿದೆ. ರಿಯಲ್ ಎಸ್ಟೇಟ್, ನಿರ್ಮಾಣ ಕ್ಷೇತ್ರದಲ್ಲಿ ಉದ್ಯಮಿ ಗೋವಿಂದ ಟೆಕ್ಕೇಕರ್ ಹೊಸ ಮೈಲುಗಲ್ಲು ಸ್ಥಾಪಿಸಲಿದ್ದಾರೆ ಎಂದು ಶುಭಹಾರೈಸಿದರು.

    ವಿಜಯ ಬೇಕರಿ ಮಾಲೀಕ ಪಾಂಡುರಂಗ ಕದಂ, ಪುಂಡಲೀಕ ಕುಟ್ರೆ, ಶಿವಾಜಿರಾವ ಪಾಟೀಲ, ವಿಜಯ ಕುಕಡೋಳಕರ್, ಅಶೋಕ ಹಲಗೇಕರ್, ದೀಪಕ ಗೊಜಗೇಕರ್, ಅಮಿತ್ ಕಿಲ್ಲೇಕರ್, ವರ್ಷ ಟಕ್ಕೇಕರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts