More

    ಮಿಡತೆ ಕಾಣಿಸಿಕೊಂಡರೆ ತಟ್ಟೆ, ಡ್ರಮ್ಮು ಬಡಿಯಿರಿ

    ಗುಂಡ್ಲುಪೇಟೆ: ಮಿಡತೆಗಳ ಹಾವಳಿ ತಪ್ಪಿಸುವ ಕುರಿತು ಪಟ್ಟಣದ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ನಂಜುಂಡಯ್ಯ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಯಿತು.

    ತೊಟಗಾರಿಕೆ, ರೇಷ್ಮೆ ಹಾಗೂ ಕೃಷಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ತಹಸೀಲ್ದಾರ್, ಮಿಡತೆಗಳ ಹಾವಳಿ ನಿಯಂತ್ರಿಸುವ ಸಂಬಂಧ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚಿಸಿದರು. ಅಲ್ಲದೆ ರೈತರಿಗೆ ಕರಪತ್ರದ ಮೂಲಕ ಈ ಬಗ್ಗೆ ಮಾಹಿತಿ ನೀಡಲು ನಿರ್ಧರಿಸಲಾಯಿತು.

    ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ನಾಗೇಂದ್ರಪ್ಪ ಮಾತನಾಡಿ, ಮಿಡತೆಗಳು ಕಾಣಿಸಿಕೊಂಡರೆ ಕೂಡಲೇ ತಟ್ಟೆ, ಡ್ರಮ್ಮು ಹಾಗೂ ಡಬ್ಬಿಗಳನ್ನು ಬಡಿಯುವುದರ ಜತೆಗೆ ಎಲೆಕ್ಟಾನಿಕ್ ಉಪಕರಣಗಳನ್ನು ಜೋರಾಗಿ ಶಬ್ದ ಮಾಡಬೇಕು. ಆಗ ಮಿಡತೆಗಳು ಭೂಮಿಗೆ ಇಳಿಯುವುದಿಲ್ಲ ಎಂದು ಹೇಳಿದರು

    ಬೆಳನಾಶ ಮಾಡಿದ ಪ್ರದೇಶಗಳಲ್ಲಿ ಮೊಟ್ಟೆ ಇಟ್ಟಿದ್ದರೆ ಅದನ್ನು ನಾಶಪಡಿಸಬೇಕು. ಮೇಲಿಂದ ಮೇಲೆ ಉಳುಮೆ ಮಾಡುವ ಮೂಲಕ ಮರಿಗಳು ಹೊರಬರದಂತೆ ಸುತ್ತಲೂ ಕಂದಕ ನಿರ್ಮಿಸಬೇಕು ಎಂದರು

    ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ವೆಂಕಟೇಶ್ ಮಾತನಾಡಿ, 15 ಲೀಟರ್ ನೀರಿಗೆ 45 ಮಿ.ಲೀ. ಬೇವು ಆಧಾರಿತ ದ್ರಾವಣವನ್ನು ಗಿಡಗಳಿಗೆ ಸಿಂಪಡಣೆ ಮಾಡುವುದರಿಂದ ಮಿಡತೆಗಳ ದಾಳಿಯನ್ನು ತಡೆಗಟ್ಟಬಹುದು. ರಾಸಾಯನಿಕ ಸಿಂಪಡನೆ ಸಂದರ್ಭ ರೈತರು ಸುರಕ್ಷತಾ ವಿಧಾನಗಳನ್ನು ಅನುಸರಿಸಬೇಕು. ಬಲಿತ ಮಿಡತೆಗಳ ಮೇಲೆ ರಾಸಾಯನಿಕ ಸಿಂಪಡಣೆ, ಒಣ ಹುಲ್ಲಿಗೆ ಬೆಂಕಿ ಹಚ್ಚಿ ಸುಡುವ ಮೂಲಕ ನಿಯಂತ್ರಿಸಬಹುದು ಎಂದರು.

    ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ಶಿವಲಿಂಗಪ್ಪ, ರೈತ ಸಂಪರ್ಕ ಕೇಂದ್ರಗಳ ಕೃಷಿ ಅಧಿಕಾರಿಗಳಾದ ಸತೀಶ್, ಅಂಚಿತಾ, ಕಿರಣ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts