More

    ನವಾಜ್​ ಎಸೆದ ವೈಡ್​ ಬಾಲ್​ ಸ್ಪಿನ್​ ಆಗಿ ಪ್ಯಾಡ್​ಗೆ ಬಡಿದಿದ್ರೆ ಏನ್​ ಮಾಡ್ತಿದ್ರಿ? ಅಚ್ಚರಿಯ ಉತ್ತರ ಕೊಟ್ಟ ಅಶ್ವಿನ್

    ನವದೆಹಲಿ: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಟೀಮ್​ ಇಂಡಿಯಾ ಜಯ ಸಾಧಿಸಿದಂತಹ ರೋಚಕ ಕ್ಷಣದ ಹ್ಯಾಂಗೋವರ್​ನಿಂದ ಬರಲು ಈವರೆಗೂ ಆಗುತ್ತಿಲ್ಲ. ಅಷ್ಟೊಂದು ಕುತೂಹಲಭರಿತವಾಗಿತ್ತು ಕಳೆದ ಭಾನುವಾರ (ಅ.23) ಮೆಲ್ಬೋರ್ನ್​ನಲ್ಲಿ ನಡೆದ ಸೂಪರ್​ 12 ಹಂತದ ಪಂದ್ಯ. ಅಮೋಘ ಬ್ಯಾಟಿಂಗ್ ನೆರವಿನಿಂದ​ ತಂಡವನ್ನು ಗೆಲುವಿನ ದಡ ಸೇರಿಸಿದ್ದ ವಿರಾಟ್​ ಕೊಹ್ಲಿ ಒಂದೆಡೆಯಾದರೆ, ಕೊನೆಯ ಎಸೆತದಲ್ಲಿ ಜಯಭೇರಿ ಬಾರಿಸಿದ ರವಿಚಂದ್ರನ್​ ಅಶ್ವಿನ್​ ಸಹ ಕ್ರೀಡಾಭಿಮಾನಿಗಳ ಗಮನ ಸೆಳೆದರು.

    ಕೊನೆಯ ಓವರ್​ನಲ್ಲಿ ಟೀಮ್​ ಇಂಡಿಯಾ ಗೆಲ್ಲಲ್ಲು 16 ರನ್​ ಬೇಕಾಗಿದ್ದಾಗ ಬೌಲಿಂಗ್​ಗೆ ಇಳಿದ ಮೊಹಮ್ಮದ್​​ ನವಾಜ್​, ಮೊದಲ ಎಸೆತದಲ್ಲೇ ಕ್ರೀಸ್​ನಲ್ಲಿ ಗಟ್ಟಿಯಾಗಿ ನೆಲೆ ನಿಂತಿದ್ದ ಹಾರ್ದಿಕ್​ ಪಾಂಡ್ಯ (40) ವಿಕೆಟ್​ ಪಡೆದು ಭಾರತಕ್ಕೆ ಶಾಕ್​ ನೀಡಿದರು. ನಂತರ ಬಂದ ದಿನೇಶ್​ ಕಾರ್ತಿಕ್​ ಕೂಡ 19ನೇ ಓವರ್​ನ 5ನೇ ಎಸೆತದಲ್ಲಿ ಔಟಾದರು. ಈ ವೇಳೆ ಪಂದ್ಯ ಗೆಲ್ಲಲು ಒಂದು ಎಸೆತಕ್ಕೆ 2 ರನ್​ ಅವಶ್ಯಕತೆ ಇತ್ತು. ಈ ವೇಳೆ ಅಶ್ವಿನ್​ ಕ್ರೀಸ್​ಗೆ ಆಗಮಿಸಿದರು. ಅವರ ನವಾಜ್​ ಎಸೆದ ಮೊದಲ ಎಸೆತವೇ ವೈಡ್​ ಆಯಿತು. ಅಲ್ಲಿಗೆ ಪಂದ್ಯ ಟೈ ಆಯಿತು. ಬೇರೆ ಆಟಗಾರರಾಗಿದ್ದರೆ ಅದು ಕೊನೆಯ ಹಂತದಲ್ಲಿ ವೈಡ್​ ಬಾಲನ್ನು ಸಹ ಹೊಡೆಯಲು ಪ್ರಯತ್ನಿಸುತ್ತಿದ್ದರು. ಆದರೆ, ಅಶ್ವಿನ್​ ವೈಡ್​ ಬಾಲನ್ನು ಸೂಕ್ಷ್ಮವಾಗಿ ಗಮನಿಸಿ ತಂಡಕ್ಕೆ ಒಂದು ರನ್​ ತಂದು ಕೊಟ್ಟರು. ಓವರ್​ನ ಕೊನೆಯ ಎಸೆತದಲ್ಲಿ 1 ರನ್​ ಅವಶ್ಯಕತೆ ಇತ್ತು. ಈ ವೇಳೆ ಕ್ಷೇತ್ರ ರಕ್ಷಕರೆಲ್ಲ ಮುಂದೆ ಬಂದು ರನ್​ ಕದಿಯುವ ಯತ್ನಕ್ಕೆ ಬ್ರೇಕ್​ ಹಾಕುವ ಪ್ರಯತ್ನಕ್ಕೆ ಮುಂದಾಗಿದ್ದರು. ಆದರೆ, ಅಶ್ವಿನ್​ ಕ್ಷೇತ್ರ ರಕ್ಷಕರ ಮೇಲೆ ಚೆಂಡನ್ನು ಬಾರಿಸುವ ಮೂಲಕ ಚೆಂಡನ್ನು ಬೌಂಡರಿಗೆ ಅಟ್ಟಿದರು. ಈ ಮೂಲಕ ಭಾರತಕ್ಕೆ ಗೆಲುವು ತಂದುಕೊಟ್ಟರು.

    ಈ ಕ್ಷಣದ ಬಗ್ಗೆ ಬಿಸಿಸಿಐ.ಟಿವಿಯಲ್ಲಿ ಋಷಿಕೇಶ್​ ಕಾಂತಿಕರ್​ ಜೊತೆ ಮಾತನಾಡಿದ ಅಶ್ವಿನ್​, ಒಂದು ವೇಳೆ 19ನೇ ಓವರ್​ನ 5ನೇ ಎಸೆತ ವೈಡ್​ ಆಗದೇ ನನ್ನ ಪ್ಯಾಡಿಗೆ ಬಡಿದಿದ್ದರೆ ನಾನು ಕ್ರಿಕೆಟ್​ನಿಂದಲೇ ವಿದಾಯ ಹೇಳಬೇಕಾಗುತ್ತಿತ್ತು ಎಂದು ಹಾಸ್ಯಚಟಾಕಿ ಹಾರಿಸಿದ್ದಾರೆ.

    ಒಂದು ವೇಳೆ ನವಾಜ್​ ಎಸೆದ ಚೆಂಡ್​ ಸ್ಪಿನ್​ ಆಗಿ ನನ್ನ ಪ್ಯಾಡಿಎ ಬಡಿದು ಔಟ್​ ಆಗಿದ್ದರೆ, ನಾನು ಸೀದ ಡ್ರೆಸ್ಸಿಂಗ್​ ರೂಮ್​ಗೆ ಹೋಗಿ, ಟ್ವಿಟರ್​ಗೆ ಲಾಗಿನ್​ ಆಗಿ ” ತುಂಬಾ ಧನ್ಯವಾದಗಳು, ನನ್ನ ಕ್ರಿಕೆಟ್ ವೃತ್ತಿಜೀವನ ಮತ್ತು ಪ್ರಯಾಣ ಅದ್ಭುತವಾಗಿದೆ ಮತ್ತು ಎಲ್ಲರಿಗೂ ಧನ್ಯವಾದಗಳು” ಎಂದು ಹೇಳಿ ನಿವೃತ್ತಿ ಘೋಷಿಸುತ್ತಿದ್ದೆ ಎಂದು ಅಶ್ವಿನ್​ ನಗುತ್ತಾ ಹೇಳಿದರು.

    ಭಾನುವಾರ (ಅ.23) ನಡೆದ ಪಂದ್ಯದಲ್ಲಿ ಟಾಸ್​​ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ರೋಹಿತ್ ಶರ್ಮಾ ಪಡೆ, ಎದುರಾಳಿ ಪಾಕಿಸ್ತಾನ ತಂಡದ 8 ವಿಕೆಟ್ ಕಬಳಿಸಿ 159 ರನ್​ಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಬಳಿಕ 160ರನ್​ಗಳ ಗುರಿ ಬೆನ್ನು ಹತ್ತಿದ ಭಾರತ, ಕೇವಲ 31 ರನ್​ಗೆ ಪ್ರಮುಖ 4 ವಿಕೆಟ್​ ಕಳೆದುಕೊಳ್ಳುವ ಮೂಲಕ ಸೋಲಿನ ದವಡೆಗೆ ಸಿಲುಕಿತು. ಆದರೆ, ಈ ಹಂತದಲ್ಲಿ ವಿರಾಟ್​ ಕೊಹ್ಲಿ ಜೊತೆಯಾದ ಹಾರ್ದಿಕ್​ ಪಾಂಡ್ಯ ನೂರು ರನ್​ಗಳ ಜೊತೆಯಾಟ ಮೂಲಕ ಪಂದ್ಯವನ್ನು ಮತ್ತೆ ಭಾರತ ಕಡೆಗೆ ತಿರುಗಿಸಿದರು.

    ವಿರಾಟ್​ ಕೊಹ್ಲಿ (53 ಎಸೆತಗಳಲ್ಲಿ ಅಜೇಯ 82) ಮತ್ತು ಹಾರ್ದಿಕ್​ ಪಾಂಡ್ಯ (40) ಅವರ ಅಮೋಘ ಬ್ಯಾಟಿಂಗ್​ ನೆರವಿನಿಂದ ಟೀಮ್​ ಇಂಡಿಯಾ ಅದ್ಭುತ ಗೆಲುವು ದಾಖಲಿಸಿತು. ಈ ಮೂಲಕ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಶುಭಾರಂಭ ಕಂಡಿದೆ. (ಏಜೆನ್ಸೀಸ್​)

    ಕೊನೇ ಎಸೆತದಲ್ಲಿ ಭಾರತಕ್ಕೆ ರೋಚಕ ಗೆಲುವು: ರಾಹುಲ್​ ಡ್ರಾವಿಡ್​ ಸಂಭ್ರಮಿಸಿದ ಪರಿ ಕಂಡು ಹುಬ್ಬೇರಿಸಿದ ನೆಟ್ಟಿಗರು

    ಮಕ್ಕಳ ಮುಂದೆ ಬೆತ್ತಲಾಗಿ ಛೀಮಾರಿ ಹಾಕಿಸಿಕೊಂಡಿದ್ದ ರೆಹಾನಾಳ ವಿರುದ್ಧ ತಾಯಿಯಿಂದಲೇ ದೂರು ದಾಖಲು!

    ಪರಸ್ತ್ರಿಗಾಗಿ ಪತ್ನಿಯ ಮೇಲೆಯೇ ಕಾರು ಹರಿಸಿದ ಬಾಲಿವುಡ್​ ನಿರ್ಮಾಪಕನ ವಿರುದ್ಧ ದೂರು ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts