More

    ಪ್ರಿಯಾಂಕ ಗಾಂಧಿ ವಾರಣಾಸಿಯಿಂದ ಸ್ಪರ್ಧಿಸಿದರೆ ಪ್ರಧಾನಿ ಮೋದಿ ಸೋಲುವುದು ಗ್ಯಾರಂಟಿ: ಸಂಜಯ್​ ರಾವುತ್​

    ಮುಂಬೈ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ವಾರಣಾಸಿ ಕ್ಷೇತ್ರದಿಂದ ಸ್ಪರ್ಧಿಸಿದರೆ ಪ್ರಧಾನಿ ಮೋದಿ ಸೋಲುವುದು ಗ್ಯಾರಂಟಿ ಎಂದು ಶಿವಸೇನೆ ನಾಯಕ(ಉದ್ಧವ್​ ಠಾಕ್ರೆ ಬಣ), ರಾಜ್ಯಸಭೆ ಸದಸ್ಯ ಸಂಜಯ್​ ರಾವುತ್​ ಭವಿಷ್ಯ ನುಡಿದಿದ್ದಾರೆ.

    ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜನ ಬದಲಾವಣೆ ಬಯಸಿದ್ದು, ಈ ನಿಟ್ಟಿನಲ್ಲಿ ವಾರಣಾಸಿ ಕ್ಷೇತ್ರದಿಂದ ಪ್ರಿಯಾಂಕ ಗಾಂಧಿ ಅವರು ಸ್ಪರ್ಧಿಸಬೇಕು ಎಂಬ ಆಗ್ರಹ ಕೇಳಿಬರುತ್ತಿದೆ. ಇದಲ್ಲದೆ ರಾಯ್​ಬರೇಲಿ, ಅಮೇಥಿಯಲ್ಲೂ ಸಹ ಬಿಜೆಪಿಗೆ ಕಠಿಣ ಸ್ಪರ್ಧೆ ಏರ್ಪಟ್ಟಿದೆ ಎಂದು ಹೇಳಿದ್ದಾರೆ.

    ಮಹಾರಾಷ್ಟ್ರ ಡಿಸಿಎಂ ಅಜಿತ್​ ಪವಾರ್​ ಹಾಗೂ ಎನ್​ಸಿಪಿ ವರಿಷ್ಠ ಶರದ್ ಪವಾರ್​ ಗುಪ್ತ ಸಭೆ ಕುರಿತು ಪ್ರತಿಕ್ರಿಯಿಸಿ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್​ ಷರೀಫ್​ ಹಾಗೂ ನರೇಂದ್ರ ಮೋದಿ ಭೇಟಿಯಾಗಿ ಮಾತುಕತೆ ನಡೆಸಬಹುದು. ಆದರೆ, ಇವರಿಬ್ಬರೂ ಭೇಟಿಯಾಗಿ ಮಾತುಕತೆ ನಡೆಸಿದರೆ ಏನು ತೊಂದರೆ ಎಂದು ಪ್ರಶ್ನಿಸಿದ್ದಾರೆ.

    ಇದನ್ನೂ ಓದಿ: VIDEO| ಭಾರಿ ಮಳೆಗೆ ತತ್ತರಿಸಿದ ಹಿಮಾಚಲ ಪ್ರದೇಶ; ಭೂ ಕುಸಿತದಿಂದಾಗಿ 21 ಮಂದಿ ಮೃತ್ಯು

    ಶರದ್​ ಪವಾರ್​ ಹಾಗೂ ಅಜಿತ್​ ಅವರ ಭೇಟಿ ಸುದ್ದಿಯನ್ನೂ ನಾನು ಟಿವಿಯಲ್ಲಿ ನೋಡಿದ್ದೇನೆ. ಶೀಘ್ರದಲ್ಲೇ ಈ ಕುರಿತು ಸ್ವತಃ ಶರದ್​ ಪವಾರ್​ ಅವರೇ ಸ್ಪಷ್ಟನೆ ನೀಡಲಿದ್ದಾರೆ. ಆಗಸ್ಟ್​ 31 ಹಾಗೂ ಸೆಪ್ಟೆಂಬರ್​ 01ರಂದು ಮುಂಬೈನಲ್ಲಿ ನಡೆಯಲಿರುವ ವಿಪಕ್ಷಗಳ ಒಕ್ಕೂಟ ಸಭೆಗೆ ಆಹ್ವಾನಿಸಲು ಭೇಟಿಯಾಗಿರಬಹುದು. ರಾಜಕೀಯದಲ್ಲಿ ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

    ಏಕನಾಥ್​ ಶಿಂಧೆ ನೇತೃತ್ವದ ಸರ್ಕಾರದ ಬಗ್ಗೆ ಇಬ್ಬರು ಡಿಸಿಎಂಗಳಾದ ದೇವೇಂದ್ರ ಫಡ್ನವೀಸ್​ ಹಾಗೂ ಅಜಿತ್​ ಪವಾರ್​ಗೆ ಅತೃಪ್ತಿ ಹೊಂದಿದ್ದು, ಮುಂದಿನ ಕೆಲ ದಿನಗಳಲ್ಲೇ ಮಹತ್ವದ ಬೆಳವಣಿಗೆಯೊಂದು ನಡೆಯಲಿದೆ ಕಾದು ನೋಡಿ ಎಂದು ಶಿವಸೇನೆ ನಾಯಕ(ಉದ್ಧವ್​ ಠಾಕ್ರೆ ಬಣ), ರಾಜ್ಯಸಭೆ ಸದಸ್ಯ ಸಂಜಯ್​ ರಾವುತ್ ಹೇಳಿದ್ದಾರೆ. ​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts