More

    ಭಾಷೆ ನಶಿಸಿದರೆ, ಸಂಸ್ಕೃತಿಯೂ ನಾಶ

    ಉಳ್ಳಾಲ: ಭಾಷೆ ನಶಿಸಿದರೆ ನಮ್ಮ ಸಂಸ್ಕೃತಿಯೂ ನಾಶವಾಗಲಿದೆ. ಆ ಕಾರಣಕ್ಕೆ ಭಾಷೆ ಉಳಿಸಿ ಬೆಳೆಸುವುದು ಮುಖ್ಯ. ಶೈಕ್ಷಣಿಕ ನಂತರದ ಜೀವನಕ್ಕೆ ಆಂಗ್ಲಭಾಷೆ ಕಲಿಯುವುದೂ ಅಗತ್ಯ ಎಂದು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್‌ನ ಉಪಕುಲಪತಿ ಡಾ.ಎಚ್.ಎಸ್.ಬಳ್ಳಾಲ್ ಅಭಿಪ್ರಾಯಪಟ್ಟರು.

    ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಸಭಾಂಗಣದಲ್ಲಿ ಮಂಗಳವಾರ 2020ನೇ ಸಾಲಿನ ಡಾ.ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಅತ್ಯುತ್ತಮ ಗ್ರಾಮೀಣ ಕನ್ನಡ ಮಾಧ್ಯಮ ಶಾಲಾ ಪ್ರಶಸ್ತಿ ವಿತರಿಸಿ ಮಾತನಾಡಿದರು.
    ಸಮಾಜದಿಂದ ಪಡೆಯುವುದಕ್ಕಿಂತ ಸಮಾಜಕ್ಕೆ ಹೆಚ್ಚು ನೀಡದಿದ್ದರೆ ನಾವು ಬದುಕಿದ್ದೂ ಸತ್ತಂತೆ. ಅಂತಹ ಉತ್ತಮ ಕೆಲಸ ನಿಟ್ಟೆ ವಿಶ್ವವಿದ್ಯಾಲಯ ಮಾಡುತ್ತಿದೆ ಎಂದು ಶ್ಲಾಘಿಸಿದರು.

    ನಿಟ್ಟೆ ವಿವಿ ಕುಲಾಧಿಪತಿ ಎನ್.ವಿನಯ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ನಿಟ್ಟೆ ವಿವಿ ಸಹಕುಲಾಧಿಪತಿ ಡಾ.ಎಂ.ಶಾಂತಾರಾಮ ಶೆಟ್ಟಿ, ಹಣಕಾಸು ಅಧಿಕಾರಿ ಡಾ.ರಾಜೇಂದ್ರ ಉಪಸ್ಥಿತರಿದ್ದರು.
    ನಿಟ್ಟೆ ವಿಶ್ವವಿದ್ಯಾಲಯದ ಸಹಕುಲಪತಿ ವಿಶಾಲ್ ಹೆಗ್ಡೆ ಸ್ವಾಗತಿಸಿದರು. ಉಪಕುಲಪತಿ ಡಾ.ಎಂ.ಎಸ್.ಮೂಡಿತ್ತಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಲಸಚಿವೆ ಡಾ.ಆಲ್ಕಾ ಕುಲಕರ್ಣಿ ಪ್ರಶಸ್ತಿ ಪುರಸ್ಕೃತ ಶಾಲೆಗಳ ಹೆಸರು ವಾಚಿಸಿದರು. ಕುಲಪತಿ ಡಾ.ಸತೀಶ್ ಕುಮಾರ್ ಭಂಡಾರಿ ವಂದಿಸಿದರು. ಡಾ.ಸಾಯಿಗೀತಾ ಕಾರ್ಯಕ್ರಮ ನಿರೂಪಿಸಿದರು.

    ಪೈಪೋಟಿ ಇಲ್ಲದೆ ಜೀವನ ಕಷ್ಟ: ಪೈಪೋಟಿ ಇಲ್ಲದೆ ಜೀವನ ಕಷ್ಟ ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಹೇಳಿದರು. ದೇಶದ ಭ ವಿಷ್ಯವಾಗಿರುವ ವಿದ್ಯಾರ್ಥಿಗಳಲ್ಲಿ ಪೈಪೋಟಿ ಇದ್ದರೆ ಸಂಸ್ಥೆಗಳಿಗೆ ಪ್ರಶಸ್ತಿ ಬರಲು ಸಾಧ್ಯ. ಇಂದು ಮೌಲ್ಯಗಳನ್ನು ಕಲಿಸುವ ಪಾಠ ಇಲ್ಲ. ಇಂದು ಅಧಿಕಾರದ ದುರಾಸೆಯಿಂದಾಗಿ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗಿದೆ. ಮೌಲ್ಯಗಳು ಇಲ್ಲದ ಸಮಾಜ ಬದಲಾವಣೆ ಅಸಾಧ್ಯ ಎಂದರು.

     ಕನ್ನಡ ಭಾಷೆ ಸಂದರ್ಭ ಬಂದಾಗ ಭಾವನಾತ್ಮಕವಾಗಿ ಮಾತನಾಡುತ್ತೇವೆ. ಆದರೆ ಸರ್ಕಾರ ಕನ್ನಡ ಶಾಲೆ ಉಳಿಸುವ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿಲ್ಲ. ಬಹಳಷ್ಟು ಹಿಂದೆ ಇದ್ದ ಕನ್ನಡ ಮಾಧ್ಯಮ ಶಾಲೆಗಳನ್ನು ಆ ಕಾಲದಲ್ಲಿ ಕಟ್ಟಲು ತೋರಿಸಿದ ಉತ್ಸಾಹ ಮುಂದುವರಿಸುವಲ್ಲಿ ಸರ್ಕಾರ ಸೋತಿದೆ. ಆಂಗ್ಲ ಮಾಧ್ಯಮ, ಸಿಬಿಎಸ್ಸಿ, ಕನ್ನಡ ಮಾಧ್ಯಮ ಶಾಲಾ ಫಲಿತಾಂಶ ಪ್ರಕಟಣೆಯಲ್ಲಿನ ತಾರತಮ್ಯವೂ ಕನ್ನಡ ಮಾಧ್ಯಮ ಸೋಲಲು ಕಾರಣ.
    ಡಾ.ಎಂ.ಮೋಹನ್ ಆಳ್ವ ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts