More

    ರಾಕೇಶ್​ ಟಿಕಾಯತ್​ ರೈತ ಮುಖಂಡನಾಗಿರಲಿಲ್ಲವೆಂದರೆ ಇಷ್ಟೊತ್ತಿಗೆ ಎನ್​ಕೌಂಟರ್​ ಆಗಿರುತ್ತಿತ್ತು; ವಿವಾದದ ಕಿಡಿ ಹೊತ್ತಿಸಿದ ಬಿಜೆಪಿ ಶಾಸಕ

    ಲಖನೌ: ರಾಕೇಶ್​ ಟಿಕಾಯತ್​ ರೈತರಿಗೆ ದ್ರೋಹ ಎಸಗಿದ್ದು, ಆತ ಇಷ್ಟೊತ್ತಿಗಾಗಲೇ ಎನ್​ಕೌಂಟರ್​ ಆಗಬೇಕಿತ್ತು ಎಂದು ಹೇಳುವ ಮೂಲಕ ಬಿಜೆಪಿ ಶಾಸಕರೊಬ್ಬರು ಹೊಸ ವಿವಾದ ಒಂದನ್ನು ಹುಟ್ಟುಹಾಕಿದ್ದಾರೆ.

    ಉತ್ತರಪ್ರದೇಶದ ಗಾಜಿಯಾಬಾದ್​ನ ಲೋನಿ ವಿಧಾನಸಭಾ ಕ್ಷೇತ್ರದ ಶಾಸಕ ನಂದಕಿಶೋರ್​ ಗುರ್ಜಾರ್​ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪರ-ವಿರೋಧದ ಚರ್ಚೆಯನ್ನು ಹುಟ್ಟುಹಾಕಿದೆ.

    ಇದನ್ನೂ ಓದಿ: ಆಸ್ಪತ್ರೆಗೆ ದಾಖಲಾಗಿದ್ದ ಡೆಂಗ್ಯೂ ರೋಗಿಗೆ ಲೈಂಗಿಕ ಕಿರುಕುಳ ನೀಡಿದ ಕಾಂಪೌಂಡರ್; ಆರೋಪಿ ಅರೆಸ್ಟ್

    ಲೋನಿ ವಿಧಾನಸಭಾ ಕ್ಷೇತ್ರದ ಬಾಗ್‌ಪತ್‌ನ ದಗರ್‌ಪುರ ಗ್ರಾಮದಲ್ಲಿ ನಡೆದ ಕುಸ್ತಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ನಂದಕಿಶೋರ್​ ಗುರ್ಜಾರ್ ರೈತರ ಹೆಸರೇಳಿಕೊಂಡು ರಾಕೇಶ್​ ಟಿಕಾಯತ್​ ಸಾಕಷ್ಟು ಜನರಿಗೆ ಅನ್ಯಾಯ ಮಾಡಿದ್ದಾನೆ. ಆತ ಒಂದು ವೇಳೆ ರೈತ ಮುಖಂಡನಾಗಿ ಗುರುತಿಸಿಕೊಂಡಿರಲಿಲ್ಲವೆಂದರೆ ಇಷ್ಟೊತ್ತಿಗಾಗಲೇ ಎನ್​ಕೌಂಟರ್​ ಆಗಿರುತ್ತಿತ್ತು.

    ಕೃಷಿ ಮಸೂದೆಗಳು ಜಾರಿಗೆ ಬಂದಿದ್ದರೆ ಇಂದು ರೈತರ ಬದುಕುಗಳು ಬದಲಾಗುತ್ತಿದ್ದವು. ಆದರೆ, ಖಲಿಸ್ತಾನಿಗಳು ಮತ್ತು ಮಧ್ಯವರ್ತಿಗಳ ಜೊತೆಗಿನ ಒಡನಾಟದ ಮೂಲಕ ರಾಕೇಶ್​ ಟಿಕಾಯತ್ ಹೇಯ ಕೃತ್ಯಗಳನ್ನು ಎಸಗಿದ್ದಾರೆ. ಖಲಿಸ್ತಾನಿಗಳ ಬೆಂಬಲದೊಂದಿಗೆ ಆತ ಕೆಂಪುಕೋಟೆ ಮೇಲೆ ರಾಷ್ಟ್ರಧ್ವಜವನ್ನು ಇಳಿಸಿ ಖಲಿಸ್ತಾನಿಗಳ ಬಾವುಟವನ್ನು ಹಾರಿಸಿ ದೇಶಕ್ಕೆ ಅವಮಾನ ಮಾಡಿದ. ಆತ ದೇಶದ ಇತಿಹಾಸದಲ್ಲೇ ಒಂದು ಕರಾಳ ಅಧ್ಯಾಯ ಎಂದು ಬಿಜೆಪಿ ಶಾಸಕ ನಂದಕಿಶೋರ್ ಗುರ್ಜಾರ್ ವಾಗ್ದಾಳಿ ನಡೆಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts