More

    ಕಲಾಮಂದಿರ ನಿರ್ಮಾಣಕ್ಕೆ ಸ್ಥಳ ಗುರುತಿಸಿ

    ಎಚ್.ಡಿ.ಕೋಟೆ: ಕನ್ನಡಿಗರು ನೆಲ, ಜಲ, ಭಾಷೆಗೆ ಗೌರವ ನೀಡುವ ಮೂಲಕ ಭಾಷೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ನಿರಂತರವಾಗಿ ಶ್ರಮಿಸಬೇಕು ಎಂದು ಶಾಸಕ ಅನಿಲ್ ಚಿಕ್ಕಮಾದು ಸಲಹೆ ನೀಡಿದರು.

    ಪಟ್ಟಣದ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಬುಧವಾರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಆಯೋಜಿಸಿದ್ದ 68ನೇ ಕನ್ನ ರಾಜ್ಯೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕ್ಷೇತ್ರದ ಎರಡು ತಾಲೂಕಿನಲ್ಲಿ ಮೂರು ಪ್ರಮುಖ ಜಲಾಶಯಗಳಿದ್ದು, ರಾಜ್ಯಕ್ಕೆ ತನ್ನದೇ ಕೊಡುಗೆ ನೀಡುತ್ತಿವೆ ಎಂದರು.

    ನಮ್ಮ ತಾಲೂಕು ಕೇರಳದ ಗಡಿಯನ್ನು ಹಂಚಿಕೊಂಡಿದ್ದರೂ ಕನ್ನಡತನವನ್ನು ಉಳಿಸಿಕೊಂಡಿದಿದೆ. ಗಡಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಹಲವು ಬಾರಿ ಆಚರಿಸಿದ್ದೇವೆ. ಗಡಿ ನಾಡಿನಲ್ಲಿ ಕನ್ನಡಿಗರ ನೆರವಿಗೆ ತಾಲೂಕು ಆಡಳಿತ ಸಿದ್ಧವಿದೆ ಎಂದರು.

    ಪಟ್ಟಣ ವ್ಯಾಪ್ತಿಯಲ್ಲಿ ಕಲಾಮಂದಿರವನ್ನು ನಿರ್ಮಿಸಲು ಪುರಸಭಾ ಅಧಿಕಾರಿ, ತಹಸೀಲ್ದಾರ್ ಹಾಗೂ ಕಂದಾಯ ಅಧಿಕಾರಿಗಳು ಜಂಟಿಯಾಗಿ ಸರ್ವೇ ನಡೆಸಿ ಸ್ಥಳ ಗುರುತಿಸಬೇಕು ಎಂದು ಸೂಚಿಸಿದರು.

    ಸರ್ಕಾರಿ ಪದವಿ ಕಾಲೇಜಿನ ಪ್ರಾಧ್ಯಾಪಕ ಗಣೇಶ್ ಮಾತನಾಡಿದರು. ಕನ್ನಡ ಪರೀಕ್ಷೆಯಲ್ಲಿ 125 ಕ್ಕೆ 125 ಅಂಕ ಪಡೆದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳನ್ನು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕನ್ನಡ ಪ್ರಮೋದ ಅಭಿನಂದಿಸಿದರು.

    ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ವರದರಾಜ ದೇವಾಲಯ ಆವರಣದಿಂದ ನಾದಸ್ವರ, ನಂಧಿ ಧ್ವಜ, ಹಾಗೂ ವಿವಿಧ ಕಲಾ ತಂಡಗಳೊಂದಿಗೆ ಆರಂಭವಾದ ಮೆರವಣಿಗೆಗೆ ಸ್ತಬ್ಧಚಿತ್ರಗಳು ಮೆರುಗು ನೀಡಿತು. ಬೆಳ್ಳಿ ರಥದಲ್ಲಿ ಭುವನೇಶ್ವರಿ ಭಾವಚಿತ್ರ ಇರಿಸಿ ಜೂನಿಯರ್ ಕಾಲೇಜು ವರೆಗೆ ಮೆರವಣಿಗೆ ಮಾಡಲಾಯಿತು.

    ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯರಾದ ಎಚ್.ಸಿ. ನರಸಿಂಹಮೂರ್ತಿ, ನಂಜಪ್ಪ, ಆಸಿಫ್, ಪ್ರೇಮ್, ಮಧು, ಮುಖಂಡರಾದ ಮೊತ್ತ ಬಸವರಾಜಪ್ಪ, ಪ್ರಮೋದ, ಸಣ್ಣಕುಮಾರ್, ಮುದ್ದುಮಲ್ಲಯ್ಯ, ಶ್ರೀಕಾಂತ್, ಶೈಲಾ ಸುಧಾಮಣಿ ತಹಸೀಲ್ದಾರ್ ಸಣ್ಣ ರಾಮಪ್ಪ, ತಾಪಂ ಇಒ ಧರಣೇಶ್, ಕ್ಯಾತನಹಳ್ಳಿ ನಾಗರಾಜು, ಅನುಷಾ, ಶಂಕರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts