More

    ನದಿ ಪ್ರವಾಹದಲ್ಲಿ ಮುಳುಗುತ್ತಿದೆ ಪ್ರಸಿದ್ಧ ದೇವಾಲಯ; ಸ್ಥಳೀಯರೂ ಆತಂಕದಲ್ಲಿ

    ದೇಶಾದ್ಯಂತ ಮುಂಗಾರು ಮಳೆ ಭರ್ಜರಿ ಸುರಿಯುತ್ತಿದೆ. ಮುಂಬೈ ಸೇರಿ ಹಲವು ರಾಜ್ಯಗಳಲ್ಲಿ ಗಾಳಿ-ಮಳೆ ಅನಾಹುತವನ್ನೇ ಸೃಷ್ಟಿಸಿದೆ. ಬಿಹಾರ, ಸಿಕ್ಕಿಂ ಮತ್ತಿತರ ಕಡೆ ಭೂಕುಸಿತವುಂಟಾಗುತ್ತಿದೆ.

    ಇದೀಗ ಸಿಕ್ಕಿಂನ ಲೆಗ್​ಶಿಪ್​ ಗ್ರಾಮದಲ್ಲಿರುವ ಪ್ರಸಿದ್ಧ ಕಿರಾಟೇಶ್ವರ ದೇವಾಲಯ ಪ್ರವಾಹದಲ್ಲಿ ಅರ್ಧಭಾಗ ಮುಳುಗಿದೆ. ಈ ದೇವಾಲಯ ಪೂರ್ವ ಸಿಕ್ಕಿಂನ ರಂಗೀತ್​ ದೇವಾಲಯದಲ್ಲಿ ಇದೆ. ಬುಧವಾರ ಸಂಜೆ 5ಗಂಟೆಯಿಂದ ಒಂದೇ ಸಮನೆ ಮಳೆ ಸುರಿಯುತ್ತಿದ್ದು, ದೇವಾಲಯವೂ ಮುಳುಗುತ್ತಿದೆ ಎಂದು ಗ್ರಾಮದವರು ಹೇಳಿದ್ದಾರೆ.

    ರಂಗೀತ್​ ನದಿಯ ಅಣೆಕಟ್ಟು ಕೂಡ ಸಾಮರ್ಥ್ಯಕ್ಕೂ ಮೀರಿ ತುಂಬಿದ್ದು, ನೀರು ರಭಸದಿಂದ ಹೊರ ಹರಿಯುತ್ತಿದೆ. ಹಾಗಾಗಿ ನದಿ ನೀರಿನ ಮಟ್ಟ ಇನ್ನೂ ಏರುತ್ತಲೇ ಇದ್ದು, ಸುತ್ತಲಿನ ಹಳ್ಳಿಗರೂ ಕೂಡ ಆತಂಕದಲ್ಲಿದ್ದಾರೆ.
    ಕಿರಾಟೇಶ್ವರ ದೇವಾಲಯಕ್ಕೆ ಮಹಾಭಾರತದ ನಂಟಿದೆ. ಇಲ್ಲಿಗೆ ಅರ್ಜುನ ಭೇಟಿಕೊಟ್ಟಿದ್ದ. ಇಲ್ಲಿಯೇ ಶಿವನ ಧ್ಯಾನ ಮಾಡಿದ್ದ ಎಂಬ ಪ್ರತೀತಿ ಇದೆ. (ಏಜೆನ್ಸೀಸ್​)

    ಮಥುರಾ ಶ್ರೀಕೃಷ್ಣಜನ್ಮಭೂಮಿ ವಿಮೋಚನಾ ಹೋರಾಟ ಶುರು: 80 ಸಾಧುಗಳನ್ನೊಳಗೊಂಡ ಟ್ರಸ್ಟ್​ ರಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts