More

    ಸಾರ್ವಕಾಲಿಕ ಐಪಿಎಲ್​ ತಂಡಕ್ಕೆ ಧೋನಿ ಸಾರಥ್ಯ: ರೋಹಿತ್​ ಮಿಸ್​

    ನವದೆಹಲಿ: ಟೀಮ್​ ಇಂಡಿಯಾ ಮಾಜಿ ನಾಯಕ ಎಂಎಸ್​ ಧೋನಿ ಐಪಿಎಲ್​ ಟೂರ್ನಿಯ ಸಾರ್ವಕಾಲಿಕ ಶೇಷ್ಠ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ. ಮಾಜಿ ಕ್ರಿಕೆಟಿಗರಾದ ಪಾಕ್​ನ ವಾಸೀ ಅಕ್ರಂ, ಆಸ್ಟ್ರೆಲಿಯಾದ ಮ್ಯಾಥ್ಯೂ ಹೇಡನ್​, ಟಾಮ್​ ಮೂಡಿ, ದ.ಆಫ್ರಿಕಾದ ಡೇಲ್​ ಸ್ಟೇಯ್ನ ಒಳಗೊಂದ ಆಯ್ಕೆ ಸಮಿತಿಯು ಇದುವರೆಗಿನ ಐಪಿಎಲ್​ನ ಸಾರ್ವಕಾಲಿಕ ಶ್ರೇಷ್ಠ ತಂಡವನ್ನು ಆಯ್ಕೆ ಮಾಡಿದ್ದಾರೆ. ಆಯ್ಕೆ ಸಮಿತಿಯಲ್ಲಿ 70 ಪತ್ರಕರ್ತರಿಗೂ ಅವಕಾಶ ನೀಡಲಾಗಿತ್ತು.

    https://x.com/StarSportsIndia/status/1759584456128532543?s=20

    ಟೀಮ್​ ಇಂಡಿಯಾದ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ಹಾಗೂ ಆಸೀಸ್​ ಡೇವಿಡ್​ ವಾರ್ನರ್​ ಆರಂಭಿಕರಾಗಿದ್ದು, ವಿಂಡೀಸ್​ ಕ್ರಿಸ್​ಗೇಲ್​ ಮೂರನೇ ಕ್ರಮಾಂಕದ ಬ್ಯಾಟರ್​ ಆಗಿದ್ದಾರೆ.ಧೋನಿ ನಾಯಕತ್ವದಲ್ಲಿ ಚೆನ್ನೆ ಸೂಪರ್​ ಕಿಂಗ್ಸ್​ ತಂಡ ಐದು ಬಾರಿ ಚಾಂಪಿಯನ್​ ಎನಿಸಿದೆ.ಸಾರ್ವಕಾಲಿಕ ಶ್ರೇಷ್ಠ ತಂಡ: ಎಂಎಸ್​ ಧೋನಿ (ನಾಯಕ), ವಿರಾಟ್​ ಕೊಹ್ಲಿ, ಡೇವಿಡ್​ ವಾರ್ನರ್​, ಕ್ರಿಸ್​ ಗೇಲ್​, ಸುರೇಶ್​ ರೈನಾ, ಎಬಿ ಡಿವಿಲಿಯರ್ಸ್​, ಸೂರ್ಯಕುಮಾರ್​, ಹಾರ್ದಿಕ್​ ಪಾಂಡ್ಯ, ರವೀಂದ್ರ ಜಡೇಜ, ಕೈರಾನ್​ ಪೋಲ್ಲಾರ್ಡ್​, ರಶೀದ್​ ಖಾನ್​, ಸುನೀಲ್​ ನರೈನ್​,ಯಜುವೇಂದ್ರ ಚಾಹಲ್​, ಲಸಿತ್​ ಮಲಿಂಗ ಹಾಗೂ ಜಸ್​ಪ್ರೀತ್​ ಬುಮ್ರಾ.

    https://x.com/StarSportsIndia/status/1759394291481514449?s=20

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts