More

    ಇಚಲಕರಂಜಿಯಲ್ಲಿ ಸಿಲುಕಿದ ಕಾರ್ಮಿಕರಿಗೆ ಸಹಾಯಹಸ್ತ

    ತಾಳಿಕೋಟೆ: ಹೊಟ್ಟೆಪಾಡಿಗಾಗಿ ಮಹಾರಾಷ್ಟ್ರದ ಇಚಲಕರಂಜಿಗೆ ದುಡಿಯುಲು ಹೋಗಿ ಲಾಕ್‌ಡೌನ್‌ದಿಂದ ಅಲ್ಲೇ ಸಿಲುಕಿದ ತಾಲೂಕಿನ ಬ.ಸಾಲವಾಡಗಿ ಗ್ರಾಮದ 70 ಜನ ಕಾರ್ಮಿಕರಿಗೆ ಸಮಾಜಸೇವಕ ಪ್ರಶಾಂತ ಹಾವರಗಿ ದವಸಧಾನ್ಯ ತಲುಪಿಸಿದರು.
    ಕರೊನಾ ವೈರಸ್ ತಡೆಗಟ್ಟಲು ವಿಧಿಸಿದ ಲಾಕ್‌ಡೌನ್‌ದಿಂದ ಇಚಲಕರಂಜಿಯಲ್ಲಿ ಸಿಲಿಕಿರುವ ಕೂಲಿಕಾರ್ಮಿಕರು ಮರಳಿ ತಮ್ಮೂರಿಗೆ ಬರಲಾಗದೇ, ಕುರ್ಚಿ ಗ್ರಾಮದ ಬಳಿ ಇರುವ ಅರಣ್ಯದಲ್ಲಿ ಒಪ್ಪತ್ತಿನ ಊಟಕ್ಕೂ ಪರದಾಡುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿದಾಡಿರುವುದನ್ನು ಗಮನಿಸಿದ ತಾಳಿಕೋಟೆ ಸಮಾಜಸೇವಕ ಪ್ರಶಾಂತ ಹಾವರಗಿ ಅವರು ಕಾರ್ಮಿಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಅವರ ಸ್ಥಿತಿಗತಿ ವಿಚಾರಿಸಿದರು. ಅಲ್ಲಿನ ಜಿಲ್ಲಾಡಳಿತ ಇವರಿಗೆ ಸಹಾಯ ನೀಡಲು ಹಿಂದೇಟು ಹಾಕಿದ ವಿಷಯ ತಿಳಿದು ಆ ಕಾರ್ಮಿಕರು ಮರಳಿ ಸ್ವಗ್ರಾಮಕ್ಕೆ ಬರುವವರೆಗೆ ಬೇಕಾಗುವಷ್ಟು ದವಸಧಾನ್ಯಗಳನ್ನು ತಲುಪಿಸಬೇಕೆಂದು ಇಚಲಕರಂಜಿಯ ತಮ್ಮ ಸ್ನೇಹಿತರಿಗೆ ಆನ್‌ಲೈನ್‌ನಲ್ಲಿ ಹಣ ಪಾವತಿಸುವ ಮೂಲಕ 1ಲಕ್ಷ ರೂ. ಮೌಲ್ಯದ ಅಕ್ಕಿ, ರವಾ, ತೊಗರಿ ಬೇಳೆ, ಸಕ್ಕೆ, ಎಣ್ಣಿ ಮತ್ತಿತರ ಸಾಮಗ್ರಗಳನ್ನು ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಈ ಎಲ್ಲ ದವಸಧಾನ್ಯವನ್ನು ಇಚಲಕರಂಜಿಯಲ್ಲಿ ಕೂಲಿಕಾರ್ಮಿಕರಿದ್ದ ಸ್ಥಳಕ್ಕೆ ತಲುಪಿಸಲು ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ (ಸಾಸನೂರ) ಅವರು ಮಹಾರಾಷ್ಟ್ರದ ಪೊಲೀಸರಿಗೆ ವಿನಂತಿ ಮಾಡಿಕೊಂಡಿರುವುದು ಇಲ್ಲಿ ಸ್ಮರಿಸಬಹುದು.

    ಇಚಲಕರಂಜಿಯಲ್ಲಿ ಸಿಲುಕಿದ ಕಾರ್ಮಿಕರಿಗೆ ಸಹಾಯಹಸ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts