More

    ಐಸಿಸಿ ಸಿಇಒ ಮನು ಸಾವ್ನೆಗೆ ರಜೆಯ ಸಜೆ ನೀಡಿದ್ದೇಕೆ ಗೊತ್ತೇ?

    ನವದೆಹಲಿ: ಸಹೋದ್ಯೋಗಿಗಳ ಜತೆಗೆ ದಬ್ಬಾಳಿಕೆಯ ವರ್ತನೆ ತೋರಿದ ಬಗ್ಗೆ ಆಂತರಿಕ ತನಿಖೆಯಲ್ಲಿ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಸಿಇಒ ಮನು ಸಾವ್ನೆ ಅವರನ್ನು ಐಸಿಸಿ ‘ರಜೆ’ಯ ಮೇಲೆ ಕಳುಹಿಸಿದೆ. 2019ರ ಏಕದಿನ ವಿಶ್ವಕಪ್ ಬಳಿಕ ಡೇವ್ ರಿಚರ್ಡ್‌ಸನ್ ಉತ್ತರಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದ ಭಾರತ ಮೂಲದ ಮನು ಸಾವ್ನೆ 2022ರವರೆಗೆ ಅವಧಿ ಹೊಂದಿದ್ದಾರೆ. ಆದರೆ ಅವರಿಗೆ ಅವಧಿಗೆ ಮುನ್ನವೇ ರಾಜೀನಾಮೆ ನೀಡುವಂತೆ ಐಸಿಸಿ ಸೂಚಿಸುವ ನಿರೀಕ್ಷೆ ಇದೆ.

    ಆಡಳಿತಾತ್ಮಕ ವಿಷಯದಲ್ಲಿ ಈಗಾಗಲೆ ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾದಂಥ ಬಲಿಷ್ಠ ಕ್ರಿಕೆಟ್ ಮಂಡಳಿಗಳನ್ನು ಎದುರು ಹಾಕಿಕೊಂಡಿರುವ ಸಾವ್ನೆಯನ್ನು ಐಸಿಸಿಯಿಂದ ಹೊರಹಾಕಲು, ಈ ದುರ್ವರ್ತನೆಯ ಪ್ರಕರಣ ಪ್ರಮುಖ ಅಸವಾಗಲಿದೆ. 56 ವರ್ಷದ ಮನು ಸಾವ್ನೆಯ ನಿರಂಕುಶ ವರ್ತನೆಯ ಬಗ್ಗೆ ಐಸಿಸಿಯ ಹಲವು ಸಿಬ್ಬಂದಿ ದೂರು ನೀಡಿದ್ದರು. ಈ ಸಂಬಂಧ ಐಸಿಸಿ ನಡೆಸಿದ ಆಂತರಿಕ ಪರಾಮರ್ಶೆಯಲ್ಲಿ ಸಾವ್ನೆ ವಿರುದ್ಧ ಸಾಕ್ಷ್ಯಧಾರಗಳು ದೊರೆತಿವೆ. ಕುಟುಂಬ ಸದಸ್ಯರೊಬ್ಬರು ಕರೊನಾ ಪಾಸಿಟಿವ್ ಆದ ಹಿನ್ನೆಲೆಯಲ್ಲಿ ಸಾವ್ನೆ ಕಳೆದ ಒಂದು ವಾರದಿಂದ ಮನೆಯಿಂದಲೂ ಕೆಲಸ ನಿರ್ವಹಿಸುತ್ತಿದ್ದರು. ಸಾವ್ನೆ ಗೈರಿನಲ್ಲಿ ಐಸಿಸಿ ಪ್ರಧಾನ ವ್ಯವಸ್ಥಾಪಕ ಜೆಫ್​ ಅಲರ್ಡೈಸ್ ಹಂಗಾಮಿ ಸಿಇಒ ಆಗಿ ಕಾರ್ಯನಿರ್ವಹಿಸಲಿದ್ದಾರೆ.

    ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯಿಂದ ವರುಣ್ ಚಕ್ರವರ್ತಿ ಔಟ್, ನಟರಾಜನ್ ಡೌಟ್

    2017ರಲ್ಲಿ ಆಗಿನ ಐಸಿಸಿ ಚೇರ್ಮನ್ ಶಶಾಂಕ್ ಮನೋಹರ್ ಜತೆಗೂಡಿ ‘ಬಿಗ್ ತ್ರಿ’ ಆದಾಯ ಹಂಚಿಕೆ ಸೂತ್ರವನ್ನು ತೆಗೆದುಹಾಕುವಲ್ಲೂ ಮನು ಸಾವ್ನೆ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಈ ಮೂಲಕ ಆಗಿನಿಂದಲೂ ಅವರು ಬಿಸಿಸಿಐ ವಿರೋಧವನ್ನು ಕಟ್ಟಿಕೊಂಡು ಬಂದಿದ್ದರು. 2023-31ರ ಸಾಲಿನ ಪ್ರತಿ ದ್ವಿಪಕ್ಷೀಯ ಸರಣಿಗಳಿಗೂ ಆತಿಥೇಯ ದೇಶ, ಐಸಿಸಿಗೆ ಶುಲ್ಕ ಪಾವತಿಸಬೇಕು ಮತ್ತು 8 ವರ್ಷಗಳ ಅವಧಿಯಲ್ಲಿ ಪ್ರತಿ ವರ್ಷವೂ ಐಸಿಸಿ ಟೂರ್ನಿಯೊಂದನ್ನು ಆಯೋಜಿಸುವ ಮನು ಸಾವ್ನೆ ಪ್ರಸ್ತಾಪಕ್ಕೆ ಈಗಾಗಲೆ ಪ್ರಮುಖ ದೇಶಗಳಿಂದ ವಿರೋಧ ವ್ಯಕ್ತವಾಗಿದ್ದವು. ಈ ಮುನ್ನ ಐಸಿಸಿ ಚೇರ್ಮನ್ ಆಯ್ಕೆ ವಿಚಾರದಲ್ಲೂ ಸಾವ್ನೆ ನಿಲುವುಗಳು ಅಸಮಾಧಾನಕ್ಕೆ ಕಾರಣವಾಗಿದ್ದವು.

    ಸಾವ್ನೆ ರಾಜೀನಾಮೆ ನೀಡಿ ತಾವಾಗಿಯೇ ಹೊರನಡೆಯದಿದ್ದರೆ ಆಗ ಅವರನ್ನು ವಜಾಗೊಳಿಸಲು ಐಸಿಸಿಯ ನಿರ್ದೇಶಕರ ಮಂಡಳಿಯಲ್ಲಿ 3ನೇ 2ರಷ್ಟು ಬಹುಮತ ಅಗತ್ಯವಾಗಿರುತ್ತದೆ. ಅಂದರೆ 17 ಮತಗಳಲ್ಲಿ 12 ಮತ ಸಾವ್ನೆಗೆ ವಿರುದ್ಧವಾಗಿ ಬೀಳಬೇಕಾಗುತ್ತದೆ. ಈ ಹಿಂದೆ 17 ವರ್ಷಗಳ ಕಾಲ ಇಎಸ್‌ಪಿಎನ್ ಸ್ಟಾರ್ ಸ್ಪೋರ್ಟ್ಸ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಸಾವ್ನೆ, ಬಳಿಕ ಸಿಂಗಾಪುರ ಸ್ಪೋರ್ಟ್ಸ್ ಹಬ್‌ನ ಸಿಇಒ ಆಗಿದ್ದರು.

    ಇಂಗ್ಲೆಂಡ್ ವಿರುದ್ಧ ಟಿ20 ಸರಣಿಗೆ 11ರ ಬಳಗದ ಆಯ್ಕೆ ಗೊಂದಲದಲ್ಲಿ ಭಾರತ

    ಕ್ರೀಡಾ ವಿಶ್ಲೇಷಕಿಯನ್ನು ವರಿಸಲಿದ್ದಾರೆ ಟೀಮ್ ಇಂಡಿಯಾ ವೇಗಿ ಜಸ್‌ಪ್ರೀತ್ ಬುಮ್ರಾ..?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts