More

    ಮಹಿಳಾ ವಿಶ್ವಕಪ್ ವೇಳಾಪಟ್ಟಿ ಪ್ರಕಟ

    ವೆಲ್ಲಿಂಗ್ಟನ್: ಮಹಿಳೆಯರ ಟಿ20 ವಿಶ್ವಕಪ್ ಯಶಸ್ವಿಯಾಗಿ ಮುಗಿದ ಬೆನ್ನಲ್ಲಿಯೇ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಮುಂದಿನ ವರ್ಷ ನ್ಯೂಜಿಲೆಂಡ್ ಆತಿಥ್ಯದಲ್ಲಿ ನಡೆಯಲಿರುವ ಮಹಿಳೆಯರ ಏಕದಿನ ವಿಶ್ವಕಪ್​ನ ವೇಳಾಪಟ್ಟಿ ಪ್ರಕಟಿಸಿದೆ. ಟಿ20 ವಿಶ್ವಕಪ್​ನ ನಾಕೌಟ್ ವೇಳೆ ಮೀಸಲು ದಿನಗಳ ವ್ಯವಸ್ಥೆ ಮಾಡದೇ ದೊಡ್ಡ ಪಾಠ ಕಲಿತಿರುವ ಐಸಿಸಿ, 2021ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ನ ಎರಡು ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳಿಗೆ ಮೀಸಲು ದಿನಗಳ ವ್ಯವಸ್ಥೆ ಮಾಡಿದೆ.

    31 ಪಂದ್ಯಗಳ ವೇಳಾಪಟ್ಟಿಯನ್ನು ಬುಧವಾರ ನ್ಯೂಜಿಲೆಂಡ್​ನ ಪ್ರಧಾನಿ ಜೆಸಿಂದಾ ಆರ್ಡ್ರೆನ್, ಐಸಿಸಿ ಸಿಇಒ ಮನು ಸಾವನಿ ಅನಾವರಣ ಮಾಡಿದರು. ಕಳೆದ ವಾರ ನಡೆದ ಟಿ20 ವಿಶ್ವಕಪ್​ನ ಸೆಮಿಫೈನಲ್​ನಲ್ಲಿ ಇಂಗ್ಲೆಂಡ್ ತಂಡ ಪಂದ್ಯವಾಡದೇ ಟೂರ್ನಿಯಿಂದ ಹೊರಬಿದ್ದಿದ್ದಿತ್ತು. ವಾಶೌಟ್ ಆಗಿದ್ದ ಕಾರಣಕ್ಕೆ ಭಾರತ ತಂಡ ಟೂರ್ನಿಯ ಫೈನಲ್​ಗೆ ಲಗ್ಗೆ ಇಟ್ಟಿತ್ತು. ಮಹಿಳೆಯರ ಏಕದಿನ ವಿಶ್ವಕಪ್ ಟೂರ್ನಿ ನ್ಯೂಜಿಲೆಂಡ್​ನ ಆರು ಸ್ಟೇಡಿಯಂಗಳಲ್ಲಿ ನಡೆಯಲಿದೆ. ಈಡನ್ ಪಾರ್ಕ್ (ಆಕ್ಲೆಂಡ್), ಬೇ ಓವಲ್ (ಟೌರಂಗ), ಸೆಡ್ಡಾನ್ ಪಾರ್ಕ್ (ಹ್ಯಾಮಿಲ್ಟನ್), ಯುನಿವರ್ಸಿಟಿ ಓವಲ್ (ಡುನೆಡಿನ್), ಬೇಸಿನ್ ರಿಸರ್ವ್ (ವೆಲ್ಲಿಂಗ್ಟನ್) ಹಾಗೂ ಹ್ಯಾಗ್ಲೆ ಓವಲ್ (ಕ್ರೖೆಸ್ಟ್​ಚರ್ಚ್) ಮೈದಾನಗಳಲ್ಲಿ ನಡೆಯಲಿವೆ. ಬೇಸಿನ್ ರಿಸರ್ವ್ ನಲ್ಲಿ ಫೆ. 13 ರಂದು ನ್ಯೂಜಿಲೆಂಡ್- ಆಸ್ಟ್ರೇಲಿಯಾ ಎದುರಾಗಲಿವೆ.

    ಭಾರತ-ಆಫ್ರಿಕಾ ಏಕದಿನ ಟಿಕೆಟ್​ ಸೇಲ್​ಗೆ ಕೊರೊನಾ ಹೊಡೆತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts