More

    ಐಬಿಪಿಎಸ್ ಪರೀಕ್ಷಾ ಫಲಿತಾಂಶ ಪ್ರಕಟ: ವೆಬ್​ಸೈಟ್​​ನಲ್ಲಿ ನೋಡಿ

    ನವದೆಹಲಿ: ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್) ಕಾಮನ್ ರಿಕ್ರೂಟ್​​​ಮೆಂಟ್ ಪ್ರೊಸೆಸ್ 8 ರ ಅಡಿ ನಡೆಸಲಾದ ಕ್ಲರ್ಕ್, ಪ್ರೊಬೆಷನರಿ ಆಫೀಸರ್ ಹಾಗೂ ಸ್ಪೆಷಲಿಸ್ಟ್ ಆಫೀಸರ್ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದೆ.
    ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಐಬಿಪಿಎಸ್‌ನ ಅಧಿಕೃತ ವೆಬ್‌ಸೈಟ್‌ ibps.in ನಲ್ಲಿ ಫಲಿತಾಂಶ ಪರಿಶೀಲಿಸಬಹುದು.
    ಅಭ್ಯರ್ಥಿಗಳು ಲಾಗಿನ್ ಆಗಲು ಮತ್ತು ತಮ್ಮ ಸ್ಕೋರ್‌ಕಾರ್ಡ್‌ಗಳನ್ನು ಡೌನ್​​ಲೋಡ್ ಮಾಡಿಕೊಳ್ಳಲು ನೋಂದಣಿ ಸಂಖ್ಯೆ / ರೋಲ್ ಸಂಖ್ಯೆ ಮತ್ತು ಹುಟ್ಟಿದ ದಿನಾಂಕ ಅಥವಾ ಪಾಸ್‌ವರ್ಡ್‌ ನಮೂದಿಸಬೇಕು.

    ಇದನ್ನೂ ಓದಿ: ಲಾಕ್​ಡೌನ್ ಎಫೆಕ್ಟ್ : ಧಾರ್ಮಿಕ ಪ್ರವಾಸೋದ್ಯಮಕ್ಕೆ ಭಾರೀ ಹಿನ್ನಡೆ

    ಅಭ್ಯರ್ಥಿಗಳ ತಾತ್ಕಾಲಿಕ ಮೀಸಲು ಪಟ್ಟಿಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದ್ದು, ಅದು ಜೂನ್ 30 ರವರೆಗೆ ಲಭ್ಯವಿರುತ್ತದೆ.

    ಐಬಿಪಿಎಸ್ ಕ್ಲರ್ಕ್ ಪ್ರಿಲಿಮ್ಸ್ ಪರೀಕ್ಷೆಯನ್ನು ಡಿಸೆಂಬರ್ 7,8,14 ಮತ್ತು 21 ರಂದು ಹಾಗೂ ಮುಖ್ಯ ಪರೀಕ್ಷೆಯನ್ನು ಜನವರಿ 18 ರಂದು ನಡೆಸಲಾಗಿತ್ತು. ಪಿಒ ಪ್ರಿಲಿಮ್ಸ್ ಪರೀಕ್ಷೆಯನ್ನು ಅಕ್ಟೋಬರ್ 12,13,19 ಮತ್ತು 20 ರಂದು ನಡೆಸಲಾಗಿದ್ದು, ಮುಖ್ಯ ಪರೀಕ್ಷೆಯನ್ನು ನವೆಂಬರ್ 30, ರಂದು ನಡೆಸಲಾಗಿತ್ತು. ಎಸ್‌ಒ ಪ್ರಿಲಿಮ್ಸ್ ಪರೀಕ್ಷೆಯನ್ನು ಡಿಸೆಂಬರ್ 28 ಮತ್ತು 29 ರಂದು ನಡೆಸಲಾಗಿದ್ದರೆ, ಮುಖ್ಯ ಪರೀಕ್ಷೆಯನ್ನು ಜನವರಿ 25, 2020 ರಂದು ನಡೆಸಲಾಗಿತ್ತು.

    ಶಾಲಾ ಆವರಣ ಗೋಡೆಗಳ ಮೇಲೀಗ ಕರೊನಾ ಜಾಗೃತಿ ಚಿತ್ರಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts