More

    ರಕ್ತಹೀನತೆಗೆ ತರಕಾರಿ, ಸೊಪ್ಪು ಮದ್ದು

    ಐಮಂಗಲ: ಸೊಪ್ಪು ಹಸಿ, ತರಕಾರಿ, ಹಣ್ಣು, ಮೊಳಕೆ ಕಾಳು ಸೇವಿಸಿದರೆ ರಕ್ತಹೀನತೆ ತಡೆಗಟ್ಟಲು ಸಾಧ್ಯ ಎಂದು ಅಂಗನವಾಡಿ ಮೇಲ್ವಿಚಾರಕಿ ಶಾಂತಕುಮಾರಿ ಹೇಳಿದರು.

    ಗ್ರಾಮದ ಎಸ್‌ವಿಎಸ್ ಪ್ರೌಢಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಪೋಷಣ್ ಅಭಿಯಾನ ಪಕ್ವಾಡ್ ಹಾಗೂ ರಕ್ತ ಪರೀಕ್ಷಾ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಸೇವಿಸುವ ಆಹಾರದಲ್ಲಿ ಕಬ್ಬಿಣಾಂಶ ಕಡಿಮೆ ಇರುವುದು ಹಾಗೂ ಜಂತು ಹುಳುಗಳು ದೇಹ ಸೇರಿ ಪೋಷಕಾಂಶಗಳನ್ನು ಹೀರಿದರೆ ಅನೇಕ ರೋಗಗಳಿಗೆ ತುತ್ತಾಗುತ್ತಾರೆ. ದೇಹದಲ್ಲಿ ಕಬ್ಬಿಣಾಂಶ ಕಡಿಮೆಯಾಗಿ ರಕ್ತ ಹೀನತೆ ಉಂಟಾಗುತ್ತದೆ ಎಂದರು.

    ಗರ್ಭಿಣಿಯರು, ಬಾಣಂತಿಯರಲ್ಲಿ ಹೆಚ್ಚಿನದಾಗಿ ಕಂಡುಬರುತ್ತದೆ. ರಕ್ತ ಹೀನತೆಗೆ ತುತ್ತಾದವರಲ್ಲಿ ಅತಿಯಾಗಿ ತಲೆ ಸುತ್ತುವುದು, ನಾಲಿಗೆ, ಮುಖ, ಕಣ್ಣಿನ ರೆಪ್ಪೆಗಳು ಒಣಗುವುದು, ಹಸಿವಾಗದಿರುವುದು ಕಂಡುಬರುತ್ತದೆ ಎಂದು ಹೇಳಿದರು.

    ಗರ್ಭಿಣಿ, ಬಾಣಂತಿಯರು ಸೊಪ್ಪು, ತರಕಾರಿ, ಹಣ್ಣು, ಮೊಳಕೆ ಕಾಳುಗಳನ್ನು ಸೇವಿಸಿದರೆ ದೇಹಕ್ಕೆ ಬೇಕಾಗುವ ಪೋಷಕಾಂಶಗಳು ಸಿಗುತ್ತವೆ. ಇದು ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿ ಆಗುತ್ತದೆ ಎಂದರು.

    ಶಿಕ್ಷಕರಾದ ಜಿ.ಸಿ.ಎಚ್.ಗೊಂಚಿಗಾರ್, ಆರೋಗ್ಯ ಇಲಾಖೆಯ ರಮೇಶ್, ಅಮಿತ್, ನೇತ್ರಾವತಿ, ಅಂಗನವಾಡಿ ಶಿಕ್ಷಕಿಯರಾದ ಈ.ಎಚ್.ಅರುಣಕುಮಾರಿ, ಕೆ.ಸುಧಾ, ಶ್ರೀದೇವಿ, ಸ್ವರೂಪ ನಾಡಿಗ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts