More

    ಕ್ರಿಕೆಟಿಗ ಮಯಾಂಕ್​ ಅಗರ್ವಾಲ್‌ ಆರೋಗ್ಯದಲ್ಲಿ ಚೇತರಿಕೆ

    ಬೆಂಗಳೂರು: ಅಗರ್ತಲಾದಿಂದ ಸೂರತ್‌ಗೆ ವಿಮಾನದಲ್ಲಿ ಪ್ರಯಾಣಿಸುವ ವೇಳೆ, ಸೀಟ್‌ನ ಮುಂಭಾಗದಲ್ಲಿದ್ದ ಸ್ಪಿರಿಟ್‌ಅನ್ನು ನೀರು ಎಂದುಕೊಂಡು ಕುಡಿದಿದ್ದ ಮಯಾಂಕ್‌ ಅಗರ್ವಾಲ್‌ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ.

    ಇದನ್ನೂ ಓದಿ:ವರ್ಕ್​ ಫ್ರಮ್​ ಹೋಮ್​ ಸಾಕು..ಆಫೀಸ್​ಗೆ ಬನ್ನಿ ಎಂದು ಕರೆದ ಪ್ರತಿಷ್ಠಿತ MNC ಕಂಪನಿ

    ಈ ಕುರಿತು ಸ್ವತಃ ಕ್ರಿಕೆಟಿಗ ಮಯಂಕ್ ತಮ್ಮ ‘ಎಕ್ಸ್‌’ನಲ್ಲಿ ಬರೆದುಕೊಂಡಿದ್ದಾರೆ. ನಾನೀಗ ಆರೋಗ್ಯವಾಗಿದ್ದೇನೆ. ತಂಡಕ್ಕೆ ಪುನರಾಗಮನ ಮಾಡಲು ಕಾತರದಲ್ಲಿದ್ದೇನೆ. ನಿಮ್ಮೆಲ್ಲರ ಪ್ರಾರ್ಥನೆ, ಪ್ರೀತಿ ಹಾಗೂ ಬೆಂಬಲಕ್ಕಾಗಿ ಧನ್ಯವಾದಗಳು ಎಂದು ಹೇಳಿದ್ದಾರೆ. ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ತನ್ನ ಮುಂದಿನ ಪಂದ್ಯದಲ್ಲಿ ಸೂರತ್‌ನಲ್ಲಿ ರೈಲ್ವೆ ಸವಾಲನ್ನು ಎದುರಿಸಲಿದೆ. ಈ ಪಂದ್ಯ ಫೆಬ್ರುವರಿ 2ರಂದು ಆರಂಭವಾಗಲಿದೆ.

    ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದ ಮಯಾಂಕ್​, ಗುರುವಾರ (ಫೆಬ್ರವರಿ 1) ಆಸ್ಪತ್ರೆಯಿಂದ ಬಿಡುಯಾಗಲಿದ್ದಾರೆ. ಈ ಬಗ್ಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ರಘುರಾಮ್ ಭಟ್ ಮಾಹಿತಿ ಕೊಟ್ಟಿದ್ದಾರೆ.

    ಅಗರ್ವಾಲ್ ಅಪಾಯದಿಂದ ಪಾರಾಗಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಮರಳಲಿದ್ದಾರೆ. ಅವರು ಶೀಘ್ರವೇ ಆಟಕ್ಕೆ ಮರಳುವ ವಿಶ್ವಾಸದಲ್ಲಿದ್ದಾರೆ. ಆದರೆ, ಫೆಬ್ರವರಿ 2ರಂದು ನಡೆಯುವ ಕರ್ನಾಟಕ ಮತ್ತು ರೈಲ್ವೇಸ್ ಪಂದ್ಯಕ್ಕೆ ಲಭ್ಯರಾಗುವ ಸಾಧ್ಯತೆ ಕಡಿಮೆ ಇದೆ. ಹಾಗಾಗಿ ಉಪನಾಯಕ ನಿಕಿನ್ ಜೋಸ್ ತಂಡದ ಜವಾಬ್ದಾರಿ ಹೊರಲಿದ್ದಾರೆ.

    ಸ್ಪಿರಿಟ್‌ ಕುಡಿದ ಬೆನ್ನಲ್ಲಿಯೇ ಅವರ ಬಾಯಿ, ಕೆನ್ನೆ, ನಾಲಿಗೆ ಸುಟ್ಟು ಹೋಗಿದೆ. ತಕ್ಷಣವೇ ಅವರನ್ನು ಸ್ಥಳೀಯ ಐಎಲ್‌ಎಸ್‌ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮೂಲಗಳ ಪ್ರಕಾರ ಅವರಿಗೆ ಗಂಭೀರ ಪ್ರಮಾಣದ ಗಾಯಗಳಾಗಿವೆ ಎಂದು ವರದಿಯಾಗಿದೆ.

    ಹೆಚ್ಚಿನ ಚಿಕಿತ್ಸೆಗಾಗಿ ಅವರು ಬೆಂಗಳೂರಿನಲ್ಲಿ ಆಸ್ಪತ್ರೆಗೆ ಅಡ್ಮಿಟ್ ಆಗುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ಅವರು ಪೋಷಕರು ನಿರ್ಧಾರ ಮಾಡಲಿದ್ದಾರೆ ಎಂದು ತಿಳಿಸಲಾಗಿದೆ. ಮಯಾಂಕ್‌ಗೆ ಈಗಲೂ ಮಾತನಾಡಲು ಸಾಧ್ಯವಾಗುತ್ತಿಲ್ಲ. ನೀರು‌ ಮತ್ತು ಎಳೆನೀರನ್ನ ಮಾತ್ರ ಸೇವನೆ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಬಂದಿದೆ.

    ಆರೋಗ್ಯದಲ್ಲಿ ಸ್ಥಿರವಾಗುತ್ತಿದ್ದಂತೆ ಮಯಾಂಕ್ ತನ್ನ ಮ್ಯಾನೇಜರ್​ ಮೂಲಕ ಪೊಲೀಸ್​ ದೂರು ನೀಡಿದ್ದಾರೆ. ತನ್ನ ಮೇಲೆ ಸಂಚು ನಡೆದಿದೆ ಎಂಬ ಕಾರಣವನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ಹಲವು ಊಹಾಪೋಹಗಳು ಎದ್ದಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಅವರ ಮ್ಯಾನೇಜರ್ ಎನ್‌ಸಿಸಿಪಿಎಸ್ (ಹೊಸ ಕ್ಯಾಪಿಟಲ್ ಕಾಂಪ್ಲೆಕ್ಸ್ ಪೊಲೀಸ್ ಠಾಣೆ) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಎಸ್‌ಪಿ ಪಶ್ಚಿಮ ತ್ರಿಪುರಾ ಕಿರಣ್ ಕುಮಾರ್ ಇಲ್ಲಿ ಪಿಟಿಐಗೆ ತಿಳಿಸಿದ್ದಾರೆ.

    ನಾಯಿ, ಇಲಿಗಳಿಗೆ ಸಂಗೀತ ಸಂಯೋಜನೆ; ಈತನ ಆದಾಯ ಕೇಳಿದ್ರೆ ಶಾಕ್​ ಆಗ್ತೀರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts