More

    ಅಗ್ನಿಪಥ ವಿರೋಧಿಸಿದವರೇ ಇಲ್ಲಿ ನೋಡಿ: ಮೂರೇ ದಿನದಲ್ಲಿ ನಿರೀಕ್ಷೆಗೂ ಮೀರಿ ವಾಯುಪಡೆಗೆ ಸಲ್ಲಿಕೆಯಾದ ಅರ್ಜಿಗಳೆಷ್ಟು? ಇಲ್ಲಿದೆ ವಿವರ

    ನವದೆಹಲಿ: ದೇಶಾದ್ಯಂತ ಭಾರೀ ವಿರೋಧ ವ್ಯಕ್ತವಾಗಿದ್ದ ಅಗ್ನಿಪಥ ಯೋಜನೆಗೆ ಅರ್ಜಿ ಆಹ್ವಾನಿಸಿದ ಮೂರೇ ದಿನದಲ್ಲಿ ನಿರೀಕ್ಷೆಗೂ ಮೀರಿ ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಭಾನುವಾರ ವಾಯುಪಡೆ ತಿಳಿಸಿದೆ.

    ಯೋದರಾಗುವ ಕನಸು ಕಾಣುವ ಯುವಕರಿಗೆ ಇದೊಂದು ಸುವರ್ಣಾವಕಾಶವಾಗಿದ್ದು, ಯುವಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಾಯುಪಡೆಯಲ್ಲಿ ಯುವಕರಿಂದ ನಿರೀಕ್ಷೆಗೂ ಮೀರಿ ಅರ್ಜಿ ಸಲ್ಲಿಕೆಯಾಗುತ್ತಿದ್ದು,  3000 ಸ್ಲಾಟ್​ಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು, ಮೂರೇ ದಿನದಲ್ಲಿ ಬರೋಬ್ಬರಿ 56, 960 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ವಾಯುಪಡೆ ಅಧಿಕಾರಿಗಳು ತಿಳಿಸಿದ್ದಾರೆ.

    ಜುಲೈ 5ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶವಿದ್ದು, ಆದರೆ ಪ್ರಸಕ್ತ ವರ್ಷದಲ್ಲಿ 3000 ಅಗ್ನಿವೀರರ ಆಯ್ಕೆಗೆ ಮಾತ್ರ ಅವಕಾಶವಿದ್ದು, ಒಂದು ಪರೀಕ್ಷೆ ಹಾಗೂ ಆರೋಗ್ಯ ತಪಾಸಣೆ ಬಳಿಕ ಇದೇ ಡಿಸೆಂಬರ್​ ತಿಂಗಳಿನಿಂದ ತರಬೇತಿ ಪ್ರಾರಂಭಿಸಲಾಗುವುದು ಎಂದು ಹೇಳಿದ್ದಾರೆ.

    ಅಗ್ನಿಪಥ ಯೋಜನೆಗೆ ವಿರೋಧಿಸಿ ದೇಶಾದ್ಯಂತ ಹಲವೆಡೆ ಭಾರೀ ಪ್ರತಿಭಟನೆಗಳು ನಡೆಸಲಾಗಿತ್ತು. ಆದರೆ ದೇಶದ ಹಿತದೃಷ್ಟಿಯಿಂದಾಗಿ ಯಾವುದೇ ಕಾರಣಕ್ಕೂ ಇದನ್ನು ಹಿಂಪಡೆಯಲು ಸಾಧ್ಯವೇ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟ ಸಂದೇಶ ರವಾನೆ ಮಾಡಿತ್ತು. ಸದ್ಯ ನಿರೀಕ್ಷೆಗೂ ಮೀರಿ ಯುವಕರಿಂದ ಅರ್ಜಿ ಸಲ್ಲಿಕೆಯಾಗಿರುವುದು ಯೋಜನೆಗೆ ವ್ಯಕ್ತವಾದ ಬೆಂಬಲ ಆಗಿದೆ ಎಂಬುದು ಸ್ಪಷ್ಟವಾಗಿದೆ. (ಏಜೆನ್ಸೀಸ್)

    ಬೇಡಿಕೆಯಲ್ಲಿದ್ದರೂ ಬೆರಳಣಿಕಯಷ್ಟು ಸಿನಿಮಾ: ಕಂಗನಾ ಬಳಿಕ ಬಾಲಿವುಡ್​​ ಕರಾಳತೆ ಬಿಚ್ಚಿಟ್ಟ ನಟಿ ಸೋನಾಲಿ ಬೇಂದ್ರೆ

    ಮಹಾರಾಷ್ಟ್ರ ಸರ್ಕಾರ ಬಿಕ್ಕಟ್ಟು: ಸೇನೆಗೆ ಮತ್ತೊಂದು ಪೆಟ್ಟು, ಗುವಾಹಟಿಗೆ ಹಾರಿದ ಮತ್ತೊಬ್ಬ ಸಚಿವ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts