More

    ಅಗ್ನಿವೀರ ಸೈನಿಕ ತರಬೇತಿ ಕಾರ್ಯಕ್ರಮ

    • ಸತತ ಪರಿಶ್ರಮದಿಂದ ಸಾಧನೆ ಸಾಧ್ಯ
    • ಡಿಸಿ ನಲಿನ್ ಅತುಲ್ ಸಲಹೆ

    ಕೊಪ್ಪಳ: ನಿರಂತರ ಅಭ್ಯಾಸ ಹಾಗೂ ಕಠಿಣ ಪರಿಶ್ರಮದಿಂದ ಅಂದುಕೊಂಡ ಸಾಧನೆ ಮಾಡಬಹುದು. ಛಲ ಬಿಡದೆ ಪ್ರಯತ್ನ ಮುಂದುವರೆಸಿ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.

    ಅಗ್ನಿವೀರ ಸೈನಿಕ ಹುದ್ದೆ ಲಿಖಿತ ಪರೀಕ್ಷೆ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

    ಅಗ್ನಿ ವೀರ ಸೈನಿಕ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾದ ತರಬೇತಿ ನೀಡಲು ಸಿಇಒ ಮುಂದಾಗಿದ್ದಾರೆ. ನಿಮಗೆ ಬೇಕಾದ‌ ನೆರವು ನೀಡಲು ನಮ್ಮ‌ಅಧಿಕಾರಿಗಳು ಸಿದ್ಧ ಇದ್ದಾರೆ. ನಿಮ್ಮ‌ಆದ್ಯತೆ ತಿಳಿಸಿ. ನಿತ್ಯ ಅಭ್ಯಾಸ ಮಾಡಿ. ದಿನಪತ್ರಿಕೆ ಓದಿ. ಮೊಬೈಲ್ ನಲ್ಲಿ ಸಾಕಷ್ಟು ಸುದ್ದಿ ನೋಡುತ್ತೀರಿ. ಆದರೆ, ಪತ್ರಿಕೆಗಳನ್ನು ಓದುವುದರಿಂದ ವಿಷಯದ‌ ಅರಿವು ಬರಲಿದೆ. ನಾಲ್ಕೈದು ಪತ್ರಿಕೆ ಓದುವುದರಿಂದ ವಿಷಯದ ವಿಭಿನ್ನತೆ, ಪ್ರಸ್ತುತಪಡಿಸುವ ಶೈಲಿ ಮನವರಿಕೆ ಆಗಲಿದೆ ಎಂದರು.

    ಛಲ, ಏಕಾಗ್ರತೆ, ಅಲ್ಪ ನಿದ್ರೆ, ಅಲ್ಪ‌ ಆಹಾರ ಲಕ್ಷಣ ರೂಢಿಸಿಕೊಳ್ಳಿ.‌ ವಿವಿಧ ಮೂಲಗಳಿಂದ ಮಾಹಿತಿ ಪಡೆಯಿರಿ. ಮೊಬೈಲ್, ಸಾಮಾಜಿಕ ಜಾಲತಾಣದಿಂದ ಸಾಧ್ಯವಾದಷ್ಟು ದೂರವಿರಿ. ದೃಢ ನಿರ್ಧಾರ ಮಾಡಿ. ನಿಮ್ಮ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಮನಸ್ಸಿದ್ದರೆ ಮಾರ್ಗ ಇರಲಿದೆ ಎಂದು ತಿಳಿಸಿದರು. 

    ಜಿಪಂ‌ ಸಿಇಒ‌ ರಾಹುಲ್ ರತ್ನಂ ಪಾಂಡೆಯ ಮಾತನಾಡಿ, ಕಠಿಣ ಪರಿಶ್ರಮದಿಂದ ಅಂದುಕೊಂಡಿದ್ದನ್ನು ಸಾಧಿಸಬಹುದು. ಮೊದಲು ಕೀಳರಿಮೆ ಬಿಡಿ. ಇನ್ನೊಬ್ಬರಿಗೆ ಹೋಲಿಸಿಕೊಳ್ಳಬೇಡಿ. ನಿಮ್ಮ ಸಾಮರ್ಥ್ಯದ‌ ಬಗ್ಗೆ ನಂಬಿಕೆ ಇದೆ. ಕೇವಲ ತರಬೇತಿಯಿಂದ ಪರೀಕ್ಷೆ ಪಾಸ್ ಆಗುವುದಿಲ್ಲ. ತರಬೇತಿ ನಂತರ ನಿರಂತರ ಪುನರಾವರ್ತನೆ ಮಾಡಿ. ನಿತ್ಯ ಅಭ್ಯಾಸ ಮಾಡಿ. ವಿಷಯ ಮನನ ಮಾಡಿಕೊಳ್ಳಿ. ಸಿಕ್ಕ ಅವಕಾಶ ಸದ್ಬಳಕೆ ಮಾಡಿಕೊಳ್ಳಿ. ಪ್ರಶ್ನೆ ಮಾಡುವ ಗುಣ ಬೆಳೆಸಿಕೊಳ್ಳಿ. ಹಿಂಜರಿಕೆ ಬಿಡಿ. ಮೊಬೈಲ್ ಅಗತ್ಯಕ್ಕೆ ತಕ್ಕಂತೆ ಬಳಸಿ ಎಂದು ಸಲಹೆ ನೀಡಿದರು.

    ಐಎಫ್ಎಸ್ ಅಧಿಕಾರಿ ಕಾವ್ಯಾ ಚತುರ್ವೇದಿ ಮಾತನಾಡಿ, ಜಿಪಂನಿಂದ ನಿಮಗೆ ತರಬೇತಿ ನೀಡಲು ಮುಂದಾಗಿರುವುದು ಉತ್ತಮ ಕೆಲಸ. ಇದರ ಸದುಪಯೋಗ ಪಡೆದುಕೊಳ್ಳಿ. ಉತ್ತಮ ಹುದ್ದೆ ಪಡೆಯಿರಿ ಎಂದರು. 

     ಜಿಪಂ ಮುಖ್ಯ ಲೆಕ್ಕಾಧಿಕಾರಿ ಅಮೀನ್ ಅತ್ತಾರ, ತಾಪಂ ಇಒ ದುಂಡಪ್ಪ ತುರಾದಿ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ‌ ನಿರ್ದೇಶಕ ವಿಠ್ಠಲ ಜಾಬಗೌಡರ, ಸಂಪನ್ಮೂಲ ವ್ಯಕ್ತಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts