ಉದಾಸಿ ಅಣ್ಣನವರ ಕನಸು ನನಸು ಮಾಡುತ್ತೇನೆ: ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ

BJP candidate shivraj sajjan campain in hanagal

ವಿಜಯವಾಣಿ ಸುದ್ದಿಜಾಲ ಹಾವೇರಿ/ ಹಾನಗಲ್ಲ: ನಾನು ದಿ.ಸಿ.ಎಂ. ಉದಾಸಿ ಅಣ್ಣನವರ ಶಿಷ್ಯ. ಅವರು ರಾಜಕಾರಣಿಗಳಿಗೆ ರೋಲ್ ಮಾಡೆಲ್. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಈ ಬಾರಿ ನಾನು ಗೆದ್ದು ಅವರ ಕನಸುಗಳನ್ನು ನನಸು ಮಾಡುತ್ತೇನೆ ಎಂದು ಹಾನಗಲ್ಲ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಹೇಳಿದರು.

ನಗರದಲ್ಲಿ ಗುರುವಾರ ಚುನಾವಣಾ ಪ್ರಚಾರದ ವೇಳೆ ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಅವರು, 1983ರಿಂದ ಉದಾಸಿ ಅವರ ಜತೆಗಿದ್ದೇನೆ. ನಾನು ಈ ಮಟ್ಟಕ್ಕೆ ಬೆಳೆಯಲು ಅಣ್ಣನವರೇ ಕಾರಣ.

ಅನಿರೀಕ್ಷಿತವಾಗಿ ಉಪ ಚುನಾವಣೆಯಲ್ಲಿ ನನಗೆ ಟಿಕೆಟ್ ಸಿಕ್ಕಿತು. ಸಮಯದ ಅಭಾವದಿಂದ ಉಪ ಚುನಾವಣೆಯಲ್ಲಿ ಸೋತರೂ ಕ್ಷೇತ್ರದ ಜನರ ಜತೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ. ಪಕ್ಷ ಸಂಘಟನೆ ಮಾಡಿದ್ದೇನೆ. ಹಾಗಾಗಿ, ಜನರಲ್ಲಿ ವಿಶ್ವಾಸ ಮೂಡಿದೆ. ಹಳ್ಳಿಗಳಲ್ಲಿ ದೊಡ್ಡ ಪ್ರಮಾಣದ ಬೆಂಬಲ ದೊರೆಯುತ್ತಿದೆ ಎಂದರು.

ಉದಾಸಿ ಅಣ್ಣನವರ ಕನಸು ಅವರ ಕಾಲದಲ್ಲೇ ಮುಕ್ಕಾಲು ಭಾಗ ನನಸಾಗಿದೆ. ಅವರ ಅವಧಿಯಲ್ಲಿ 386 ಕೋಟಿ ರೂ. ವೆಚ್ಚದಲ್ಲಿ ಬಾಳಂಬೀಡ ಏತ ನೀರಾವರಿ ಯೋಜನೆ, 117 ಕೋಟಿ ರೂ. ವೆಚ್ಚದ ಹಿರೇಕಂಸಿ ಏತ ನೀರಾವರಿ ಯೋಜನೆ ಚಾಲ್ತಿಯಲ್ಲಿದೆ. ಅವರ ಇನ್ನೊಂದು ಕನಸು ಸಮ್ಮಸಗಿ ಏತ ನೀರಾವರಿ ಯೋಜನೆಯನ್ನು ಸಂಸದ ಶಿವಕುಮಾರ ಉದಾಸಿಯವರು ಮಂಜೂರು ಮಾಡಿಸಿದ್ದು, ಟೆಂಡರ್ ಆಗಬೇಕಿದೆ.

ಕುಸನೂರು ಏತ ನೀರಾವರಿ, ಇತರ ಕೆರೆ ತುಂಬಿಸುವ ಯೋಜನೆ ಸೇರಿ ಇನ್ನೂ ಅನೇಕ ಕನಸು ಕಂಡಿದ್ದರು. ನಾನು ಗೆದ್ದರೆ ನಿಶ್ಚಿತವಾಗಿಯೂ ಈ ಎಲ್ಲ ಯೋಜನೆಗಳನ್ನು ಜಾರಿಗೆ ತರುತ್ತೇನೆ ಎಂದರು.

ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಸುವ ಕಾರ್ಖಾನೆಗಳು, ಗಾರ್ವೆಂಟ್​ಗಳು ಸೇರಿ ಇತರ ಕೈಗಾರಿಕೆಗಳನ್ನು ಸ್ಥಾಪಿಸುವ ಗುರಿ ಇದೆ. ಮಾವಿನ ಉತ್ಪನ್ನಗಳಾದ ಸಿಹಿ, ಜ್ಯೂಸ್, ಡ್ರೖೆಫ್ರೂಟ್ಸ್ ಸೇರಿ ಇತರ ಉತ್ಪನ್ನ ತಯಾರಿಸುವ ಘಟಕ ಆರಂಭಿಸಲು ಕ್ರಮ ಕೈಗೊಳ್ಳುತ್ತೇನೆ. ಮಾವು ಸಂಸ್ಕರಣ ಘಟಕ ಕೆಲಸ ನನೆಗುದಿಗೆ ಬಿದ್ದಿದೆ.

ಮಾವಿನ ಜತೆಗೆ ಅಡಕೆ, ಬಾಳೆ, ಶುಂಠಿ ಸಂಸ್ಕರಣ ಘಟಕ ಆರಂಭಿಸುವ ಯೋಜನೆಯಿದೆ. ಎಲ್ಲ ಹಣ್ಣುಗಳ ರೈಫನಿಂಗ್ ಚೇಂಬರ್ (ನೈಸರ್ಗಿಕವಾಗಿ ಹಣ್ಣು ಮಾಡುವ ವಿಧಾನ) ಮಾಡುವ ಯೋಜನೆಯಿದೆ. ನಾನು ಅಧಿಕಾರಕ್ಕೆ ಬಂದರೆ ರೈತರಿಗೆ ಅನುಕೂಲ ಆಗುವ ಎಲ್ಲ ಕೆಲಸಗಳನ್ನು ಮಾಡಿಕೊಡುತ್ತೇನೆ ಎಂದು ಸಜ್ಜನರ ತಿಳಿಸಿದರು.

ಕಾಂಗ್ರೆಸ್​ನವರು ಬಜರಂಗದಳ ನಿಷೇಧಿಸುವ ಕುರಿತು ಮಾತನಾಡುತ್ತಾರೆ. ಹಿಂದುಗಳನ್ನು ತಿರಸ್ಕರಿಸಿ ಒಂದೇ ಕೋಮಿನವರಿಗೆ ಮಣೆ ಹಾಕುತ್ತಾರೆ. ಕ್ಷೇತ್ರದಲ್ಲಿ 18 ತಿಂಗಳು ಏನೂ ಕೆಲಸ ಆಗಿಲ್ಲ. ಕೇವಲ ಪೋಸು ಕೊಟ್ಟು ಓಡಾಡಿದರು ಎಂದು ಜನರೇ ಮಾತನಾಡುತ್ತಿದ್ದಾರೆ. ಅನುದಾನ ತರಲು ಯತ್ನಿಸಲಿಲ್ಲ. ಹೋರಾಟವನ್ನೂ ಮಾಡಲಿಲ್ಲ.

ಮುಖ್ಯಬೀದಿ ಹಾಳಾಗಿದೆ. ಹೋರಾಟ ಮಾಡಬಹುದಿತ್ತು. ಅವರಿಗೆ ಕೆಲಸ ಮಾಡುವ ಇಚ್ಛೆ ಇಲ್ಲ. ಹಾಗಾಗಿ, ಜನರಿಗೆ ಬಿಜೆಪಿ ಒಂದೇ ಭರವಸೆ ಎಂದು ನಂಬಿದ್ದಾರೆ. ಒಳ ಮೀಸಲಾತಿ, ಮೀಸಲಾತಿಯಿಂದ ಎಲ್ಲ ಸಮುದಾಯಗಳು ಬಿಜೆಪಿಗೆ ಬೆಂಬಲಿಸುತ್ತಿವೆ. 14 ಜನ ಟಿಕೆಟ್ ಆಕಾಂಕ್ಷಿಗಳು ಹಾಗೂ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಹಾವೇರಿ ಕೂಡ ನಮಗೆ ಬೆಂಬಲ ಸೂಚಿಸಿದ್ದಾರೆ ಎಂದರು.

Share This Article

ಐಸ್​​ಕ್ಯೂಬ್​​ನಿಂದ ಮುಖಕ್ಕೆ ಮಸಾಜ್ ಮಾಡಿದ್ರೆ ನಿಮ್ಮ ಸೌಂದರ್ಯ ಹೆಚ್ಚುತ್ತದೆ! ತಜ್ಞರು ಏನು ಹೇಳುತ್ತಾರೆ? Ice cube Remedy

Ice cube Remedy : ಮುಖ ಸುಂದರವಾಗಿ ಕಾಣಲು ಅನೇಕ ಜನರು ವಿವಿಧ ಸಲಹೆಗಳನ್ನು ಅನುಸರಿಸುತ್ತಾರೆ.…

ಈ ನಕ್ಷತ್ರದಲ್ಲಿ ಹುಟ್ಟಿದ ಗಂಡಸರು ತಮ್ಮ ಪತ್ನಿಯರನ್ನು ರಾಜಕುಮಾರಿಯಂತೆ ನೋಡಿಕೊಳ್ಳುತ್ತಾರೆ! Birth of Stars

Birth of Stars : ಹುಟ್ಟಿದ ತಕ್ಷಣ ಜನ್ಮ ದಿನಾಂಕ ಹಾಗೂ ಹುಟ್ಟಿದ ಗಳಿಗೆಯನ್ನು ಬರೆದಿಡಲಾಗುತ್ತದೆ.…

ಕಲ್ಲಂಗಡಿ ಹಣ್ಣು ತಿಂದು ಸಿಪ್ಪೆ ಬಿಸಾಡ್ತೀರಾ? ಹಣ್ಣಿನ ಸಿಪ್ಪೆ ತಿಂದ್ರೆ ಪುರುಷರಿಗೆ ಆ ಸಾಮರ್ಥ್ಯ ಹೆಚ್ಚಾಗುವುದು! watermelon

watermelon: ಬೇಸಿಗೆ ಎಂದ ತಕ್ಷಣ ನಮಗೆ ನೆನಪಿಗೆ ಬರುವುದು  ಕಲ್ಲಂಗಡಿ ಹಣ್ಣು. ನಾವು ಕಲ್ಲಂಗಡಿ ಹಣ್ಣುಗಳನ್ನು…