More

    VIDEO| ರವಿಶಾಸ್ತ್ರಿಗೆ ಭಾವನಾತ್ಮಕ ಬೀಳ್ಗೊಡುಗೆ; ವಿಶೇಷ ಉಡುಗೊರೆ ನೀಡಿದ ಕೊಹ್ಲಿ, ರೋಹಿತ್

    ದುಬೈ: ಟಿ20 ವಿಶ್ವಕಪ್‌ನೊಂದಿಗೆ ಮುಖ್ಯ ಕೋಚ್ ಹುದ್ದೆಯ ಅವಧಿ ಮುಗಿಸಿ ನಿರ್ಗಮಿಸಿರುವ ರವಿಶಾಸ್ತ್ರಿಗೆ ಸೋಮವಾರ ನಮೀಬಿಯ ವಿರುದ್ಧದ ಅಂತಿಮ ಲೀಗ್ ಪಂದ್ಯದ ಗೆಲುವಿನ ಬಳಿಕ ಟೀಮ್ ಇಂಡಿಯಾ ಆಟಗಾರರು ಭಾವನಾತ್ಮಕ ಬೀಳ್ಕೊಡುಗೆ ನೀಡಿದರು. ಟಿ20 ನಾಯಕತ್ವ ತ್ಯಜಿಸುತ್ತಿರುವ ವಿರಾಟ್ ಕೊಹ್ಲಿ ಕೂಡ ರವಿಶಾಸ್ತ್ರಿ ಜತೆಗೆ ಡ್ರೆಸ್ಸಿಂಗ್ ರೂಂನಲ್ಲಿ ಕಿರು ಭಾಷಣವೊಂದನ್ನು ಮಾಡಿದರು. ಬಳಿಕ ಪರಸ್ಪರ ಅಪ್ಪಿಕೊಂಡು ಭಾವುಕರಾದರು.

    ರವಿಶಾಸ್ತ್ರಿ 2017ರ ಜುಲೈನಿಂದ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿದ್ದರೆ, ವಿರಾಟ್ ಕೊಹ್ಲಿ ಕೂಡ 2017ರ ಜನವರಿಯಿಂದ ಟಿ20 ತಂಡಕ್ಕೂ ನಾಯಕರಾಗಿ 50 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದು, 30 ಜಯ, 16 ಸೋಲು, 2 ಟೈ, 2 ರದ್ದು ಕಂಡಿದ್ದಾರೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಅವರು ರವಿಶಾಸ್ತ್ರಿ ತಮ್ಮ ಬ್ಯಾಟ್‌ಅನ್ನು ವಿಶೇಷ ಉಡುಗೊರೆಯಾಗಿ ನೀಡಿದರು.

    ರವಿಶಾಸ್ತ್ರಿ ಮಾರ್ಗದರ್ಶನದಲ್ಲಿ ಭಾರತ 2 ಬಾರಿ ಆಸೀಸ್‌ನಲ್ಲಿ ಟೆಸ್ಟ್ ಸರಣಿ ಜಯಿಸಿತ್ತು, ತವರಿನಲ್ಲಿ ಆಡಿದ ಎಲ್ಲ ಟೆಸ್ಟ್ ಸರಣಿ ಜಯಿಸಿತ್ತು, 42 ತಿಂಗಳ ಕಾಲ ಐಸಿಸಿ ಟೆಸ್ಟ್ ರ‌್ಯಾಂಕಿಂಗ್‌ನಲ್ಲಿ ನಂ. 1 ಪಟ್ಟದಲ್ಲಿತ್ತು. ಇಂಗ್ಲೆಂಡ್‌ನಲ್ಲಿ ಈ ವರ್ಷ ಮೊಟಕುಗೊಂಡ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿತ್ತು. ಆದರೆ ರವಿಶಾಸ್ತ್ರಿ-ವಿರಾಟ್ ಕೊಹ್ಲಿ ಕಾಂಬಿನೇಷನ್​ನಲ್ಲಿ ಐಸಿಸಿ ಟ್ರೋಫಿ ಮಾತ್ರ ಮರೀಚಿಕೆಯಾಗಿಯೇ ಉಳಿಯಿತು.

    ಕೊಹ್ಲಿ-ರವಿಶಾಸ್ತ್ರಿ ಯುಗಾಂತ್ಯ
    ಟೀಮ್ ಇಂಡಿಯಾದಲ್ಲಿ ಈ ಮುನ್ನ ಮೋಡಿ ಮಾಡಿದ್ದ ಸೌರವ್ ಗಂಗೂಲಿ-ಜಾನ್ ರೈಟ್, ಎಂಎಸ್ ಧೋನಿ-ಗ್ಯಾರಿ ಕರ್ಸ್ಟನ್ ಜೋಡಿಯಂತೆ ವಿರಾಟ್ ಕೊಹ್ಲಿ-ರವಿಶಾಸ್ತ್ರಿ ಅವರ ನಾಯಕ-ಕೋಚ್ ಜೋಡಿಯೂ ಸಾಕಷ್ಟು ಯಶಸ್ಸು ಕಂಡಿತ್ತು. ಇದೀಗ ಕೊಹ್ಲಿ-ರವಿಶಾಸ್ತ್ರಿ ಜೋಡಿಯ ಅಧ್ಯಾಯಕ್ಕೆ ತೆರೆಬಿದ್ದಿದೆ.

    VIDEO| ರವಿಶಾಸ್ತ್ರಿಗೆ ಭಾವನಾತ್ಮಕ ಬೀಳ್ಗೊಡುಗೆ; ವಿಶೇಷ ಉಡುಗೊರೆ ನೀಡಿದ ಕೊಹ್ಲಿ, ರೋಹಿತ್VIDEO| ರವಿಶಾಸ್ತ್ರಿಗೆ ಭಾವನಾತ್ಮಕ ಬೀಳ್ಗೊಡುಗೆ; ವಿಶೇಷ ಉಡುಗೊರೆ ನೀಡಿದ ಕೊಹ್ಲಿ, ರೋಹಿತ್

    ಬಯೋಬಬಲ್‌ನಲ್ಲಿ ಬ್ರಾಡ್ಮನ್ ಸರಾಸರಿಯೂ ಕುಸಿಯುತ್ತಿತ್ತು!
    ಕರೊನಾ ಭೀತಿಯ ನಡುವೆ ಬಯೋಬಬಲ್‌ನಲ್ಲಿ ಹಲವಾರು ತಿಂಗಳ ಕಾಲ ಉಳಿದುಕೊಂಡು ಕ್ರಿಕೆಟ್ ಆಡುವುದು ಅತ್ಯಂತ ಕಠಿಣವಾದುದು ಎಂದಿರುವ ರವಿಶಾಸ್ತ್ರಿ, ದಿಗ್ಗಜ ಡಾನ್ ಬ್ರಾಡ್ಮನ್‌ಗೆ ಬಯೋಬಬಲ್‌ನಲ್ಲಿ ಆಡುವ ಒತ್ತಡವಿರುತ್ತಿದ್ದರೆ ಅವರ ರನ್ ಸರಾಸರಿಯೂ ಕುಸಿತ ಕಾಣುತ್ತಿತ್ತು ಎಂದಿದ್ದಾರೆ. ಬ್ರಾಡ್ಮನ್ ಟೆಸ್ಟ್‌ನಲ್ಲಿ ವಿಶ್ವದಾಖಲೆಯ 99.9ರ ಸರಾಸರಿಯಲ್ಲಿ ರನ್ ಗಳಿಸಿದ್ದರು.

    ಇನ್ನಷ್ಟು ಎತ್ತರಕ್ಕೇರಿಸಲಿದ್ದಾರೆ ದ್ರಾವಿಡ್
    ಟೀಮ್ ಇಂಡಿಯಾದ ಮುಂದಿನ ಕೋಚ್ ರಾಹುಲ್ ದ್ರಾವಿಡ್‌ಗೆ ಶುಭಹಾರೈಸಿರುವ ನಿರ್ಗಮನ ಕೋಚ್ ರವಿಶಾಸ್ತ್ರಿ, ‘ಆಟಗಾರ ಮತ್ತು ತರಬೇತುದಾರರಾಗಿ ಉತ್ತಮ ಅನುಭವ ಹೊಂದಿರುವ ದ್ರಾವಿಡ್ ಗರಡಿಯಲ್ಲಿ ತಂಡದ ಗುಣಮಟ್ಟ ಇನ್ನಷ್ಟು ಹೆಚ್ಚಲಿದೆ’ ಎಂದು ಹೇಳಿದ್ದಾರೆ.

    ಭಾರತ-ಇಂಗ್ಲೆಂಡ್ 5ನೇ ಟೆಸ್ಟ್‌ಗೆ ಕಾಮೆಂಟರಿ
    ಐಪಿಎಲ್ ತಂಡಗಳಿಗೆ ಕೋಚ್ ಆಗಲಿದ್ದಾರೆ ಎಂಬ ಸುದ್ದಿಯ ನಡುವೆ ರವಿಶಾಸ್ತ್ರಿ, ಕರೊನಾ ಭೀತಿಯಿಂದಾಗಿ ಈ ವರ್ಷ ರದ್ದುಗೊಂಡು ಮುಂದಿನ ವರ್ಷಕ್ಕೆ ಮರುನಿಗದಿಯಾಗಿರುವ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯ 5ನೇ ಹಾಗೂ ಅಂತಿಮ ಪಂದ್ಯದ ವೇಳೆ ವೀಕ್ಷಕ ವಿವರಣೆಕಾರರಾಗಿ ಕಾರ್ಯನಿರ್ವಹಿಸುವ ಸುಳಿವು ನೀಡಿದ್ದಾರೆ. ಭಾರತ ತಂಡದ ಕೋಚ್ ಆಗುವುದಕ್ಕೆ ಮುನ್ನ ಜನಪ್ರಿಯ ವೀಕ್ಷಕ ವಿವರಣೆಕಾರ ಆಗಿದ್ದ 59 ವರ್ಷದ ರವಿಶಾಸ್ತ್ರಿ ಮತ್ತೆ ಅದೇ ಕೆಲಸಕ್ಕೆ ಮರಳುವ ಉತ್ಸಾಹವನ್ನೂ ತೋರಿದ್ದಾರೆ.

    ಐಪಿಎಲ್‌ಗಿಂತ ದೇಶಕ್ಕೆ ಆದ್ಯತೆ ನೀಡಿ, ಭಾರತೀಯ ಕ್ರಿಕೆಟಿಗರಿಗೆ ಕಪಿಲ್ ದೇವ್ ಕಿವಿಮಾತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts