More

    ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 40 ಸ್ಥಾನ ಗೆಲ್ಲುವುದು ಅನುಮಾನ: ಮಮತಾ ಬ್ಯಾನರ್ಜಿ

    ಕೋಲ್ಕತ್ತಾ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 40 ಸ್ಥಾನಗಳನ್ನು ಗೆಲ್ಲುವುದು ಅನುಮಾನ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಾಂಗ್ರೆಸ್​ ವಿರುದ್ಧ ಟೀಕೆ ಮಾಡಿದ್ದಾರೆ.

    ಇದನ್ನೂ ಓದಿ:ಶಾಲಾವಽ ನಂತರ ಮಕ್ಕಳಿಗೆ ತರಬೇತಿ ನೀಡಿ: ಮಧು ಬಂಗಾರಪ್ಪ ಸಲಹೆ

    ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮಮತಾ, ಕಾಂಗ್ರೆಸ್​ ಪಕ್ಷ 40 ಸ್ಥಾನಗಳನ್ನು ಗೆಲ್ಲುತ್ತದೆ ಎಂಬುದು ನನಗೆ ಅನುಮಾನ ಮೂಡಿಸಿದೆ. ಪಶ್ಚಿಮ ಬಂಗಾಳದಲ್ಲಿ ನಾನು ಕೇವಲ ಎರಡು ಸ್ಥಾನಗಳನ್ನು ಮಾತ್ರ ಬಿಟ್ಟುಕೊಟ್ಟು ಅವರನ್ನು ಗೆಲ್ಲಲು ಪ್ರಯತ್ನಿಸುತ್ತೇನೆ. ಆದರೆ ಕಾಂಗ್ರೆಸ್​ಮ ಹೆಚ್ಚು ಸ್ಥಾನಕ್ಕೆ ಬೇಡಿಕೆ ಇಡುತ್ತಿದೆ. ಆದರೆ ಅದು ಸಾಧ್ಯವಿಲ್ಲ ನಾನು 42 ಸ್ಥಾನಗಳಲ್ಲಿ ಸ್ಪರ್ಧೆ ಮಾಡುತ್ತೇವೆ ಎಂದು ಹೇಳಿದರು.

    ಕಾಂಗ್ರೆಸ್​ಗೆ ಧೈರ್ಯವಿದ್ದರೆ ಉತ್ತರಪ್ರದೇಶ, ಬನಾರಸ್​, ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಬಿಜೆಪಿಯನ್ನು ಸೋಲಿಸಲಿ ಎಂದು ಸವಾಲು ಮುಖ್ಯಮಂತ್ರಿ ಮಮತಾ ಅವರು ಸವಾಲ್​ ಹಾಕಿದರು.

    ಪಶ್ಚಿಮ ಬಂಗಾಳದಲ್ಲಿ ‘ಇಂಡಿಯಾ’ ಮೈತ್ರಿಕೂಟದ ಸೀಟು ಹಂಚಿಕೆ ವಿಚಾರದ ಗೊಂದಲ ಮುಗಿಯುವಂತೆ ಕಾಣಿಸುತ್ತಿಲ್ಲ. ಲೋಕಸಭೆ ಚುನಾವಣೆಯಲ್ಲಿ ತಮ್ಮ ತೃಣಮೂಲ ಕಾಂಗ್ರೆಸ್ ಪಕ್ಷ ಎಲ್ಲಾ ಕ್ಷೇತ್ರಗಳಲ್ಲಿಯೂ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಕಾಂಗ್ರೆಸ್‌ಗೆ ಆಘಾತ ನೀಡಿದ್ದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು, ಮತ್ತೊಂದು ಇಕ್ಕಟ್ಟು ಸೃಷ್ಟಿಸಿದ್ದಾರೆ.

    ತಮ್ಮ ಪಕ್ಷದ ಜತೆ ಯಾವುದೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಬಯಸಿದ್ದರೆ, ಅವರು ಸಿಪಿಎಂ ಜತೆಗಿನ ಸಂಬಂಧ ಕಡಿದುಕೊಳ್ಳಬೇಕು ಎಂದು ಷರತ್ತು ಒಡ್ಡಿದ್ದಾರೆ.

    ವಿವಾದದ ನಡುವೆ ಮತ್ತೆರಡು ಫೋಟೊ ಹಂಚಿಕೊಂಡ ಪವಿತ್ರಾಗೌಡ! ನಟ ದರ್ಶನ್​ ಫ್ಯಾನ್ಸ್​ ಹೇಳಿದ್ದೇನು?  

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts