More

    ಕೇಂದ್ರ ಸರ್ಕಾರದ ನಿರ್ಣಯದಿಂದ ಫುಲ್​ ಖುಷಿಯಾದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​

    ನವದೆಹಲಿ: ಕೊವಿಡ್​-19 ಲಾಕ್​ಡೌನ್​ ಹಂತಗಳೆಲ್ಲ ಮುಗಿದು ಇದೀಗ ದೇಶದಲ್ಲಿ ಅನ್​ಲಾಕ್​ನ ಮೂರು ಹಂತಗಳು ಪೂರ್ಣಗೊಂಡಿವೆ. ಇಂದು ಕೇಂದ್ರ ಸರ್ಕಾರ ಅನ್​ಲಾಕ್​-4 ರ ಮಾರ್ಗಸೂಚಿಯನ್ನೂ ಬಿಡುಗಡೆ ಮಾಡಿದ್ದು, ಷರತ್ತುಗಳೊಂದಿಗೆ ಸಭೆ, ಸಮಾರಂಭ ನಡೆಸಲು ಅನುಮತಿ ನೀಡಿದೆ. ಮೆಟ್ರೋ ಪ್ರಾರಂಭಕ್ಕೂ ಅವಕಾಶ ಕೊಟ್ಟಿದೆ.

    ಕೊವಿಡ್​-19 ಕಾರಣದಿಂದ ಸ್ಥಗಿತಗೊಂಡಿದ್ದ ದೇಶದ ಪ್ರಮುಖ ನಗರಗಳ ಮೆಟ್ರೋವನ್ನು ಸೆ.7ರಿಂದ ಮರು ಆರಂಭಿಸಲು ಕೇಂದ್ರ ಸರ್ಕಾರ ಅನ್​ಲಾಕ್​ 4ನೇ ಹಂತದಲ್ಲಿ ಅನುಮತಿ ನೀಡಿದೆ. ಇದರಿಂದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಅವರು ಫುಲ್​ ಖುಷಿಯಾಗಿದ್ದಾರೆ. ಇದನ್ನೂ ಓದಿ:ಮಾಜಿ ಸಚಿವ ಜನಾರ್ದನ ರೆಡ್ಡಿಯವರಿಗೆ ಕರೊನಾ ಸೋಂಕು; ಸಚಿವ ಶ್ರೀರಾಮುಲು ಮನೆ ಭೇಟಿ ರದ್ದು

     ಸೆಪ್ಟೆಂಬರ್​ 7ರಿಂದ ದೆಹಲಿ ಮೆಟ್ರೋವನ್ನು ಹಂತಹಂತವಾಗಿ ಪ್ರಾರಂಭ ಮಾಡಲು ಕೇಂದ್ರ ಗೃಹ ಸಚಿವಾಲಯ ಅನುಮತಿ ನೀಡಿದ್ದರಿಂದ ತುಂಬ ಸಂತೋಷವಾಗಿದೆ ಎಂದು ಕೇಜ್ರಿವಾಲ್​ ಟ್ವೀಟ್​ ಮೂಲಕ ತಿಳಿಸಿದ್ದಾರೆ.

    ದೆಹಲಿ ಮೆಟ್ರೋ ಕೂಡ ಮಾರ್ಚ್​ 22ರಿಂದಲೇ ಬಂದ್​ ಆಗಿತ್ತು. ಅದರ ಪ್ರಾರಂಭಕ್ಕೆ ಆದಷ್ಟು ಶೀಘ್ರವೇ ಅನುಮತಿ ನೀಡಬೇಕು ಎಂದು ಅರವಿಂದ್ ಕೇಜ್ರಿವಾಲ್​ ಈ ಹಿಂದೆ ಕೂಡ ಕೇಂದ್ರಕ್ಕೆ ಮನವಿ ಮಾಡಿದ್ದರು. (ಏಜೆನ್ಸೀಸ್​)

    ‘ಕ್ಷೇಮವಾಗಿ ಬಂದರೆ ನಿಮ್ಮ ಸೇವೆ..ಇಲ್ಲದಿದ್ದರೆ ಕ್ಷಮಿಸಿಬಿಡಿ..’ : ಕೈಮುಗಿದ ಮುನಿರತ್ನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts