More

    ಕೋವಿಡ್ ನಿಯಮ ಪಾಲಿಸಿ ಬಿತ್ತನೆ ಬೀಜ ಪಡೆಯಿರಿ

    ಹೂವಿನಹಿಪ್ಪರಗಿ: ರೈತರು ರೈತ ಸಂಪರ್ಕ ಕೇಂದ್ರದಲ್ಲಿ ಕೋವಿಡ್ ನಿಯಮ ಪಾಲಿಸಿ ಬಿತ್ತನೆ ಬೀಜ ಪಡೆಯಬೇಕೆಂದು ಶಾಸಕ ಸೋಮನಗೌಡ ಪಾಟೀಲ ಸಾಸನೂರ ಹೇಳಿದರು.

    ಸ್ಥಳೀಯ ರೈತ ಸಂಪರ್ಕ ಕೇಂದ್ರದಲ್ಲಿ ಸೋಮವಾರ ನಡೆದ ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನ ಬಿತ್ತನೆ ಬೀಜಗಳ ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.

    ರೈತ ಸಂಪರ್ಕ ಕೇಂದ್ರದಲ್ಲಿ ಮುಂಗಾರು ಹಂಗಾಮಿಗೆ ಬೇಕಾದ ಬೀಜದ ದಾಸ್ತಾನು ಸಾಕಷ್ಟಿದ್ದು, ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದರು.

    ಕ್ಷೇತ್ರದಲ್ಲಿಯೇ ಹೂವಿನಹಿಪ್ಪರಗಿ ಹೋಬಳಿ ಅತೀ ದೊಡ್ಡದಿದೆ. ಈ ಭಾಗದ ಜನರಿಗೆ ಸಾಕಾಗುವಷ್ಟು ಬಿತ್ತನೆ ಬೀಜ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

    ಕರೊನಾ ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಉಳಿದುಕೊಂಡಿದ್ದು, ರೈತರು ಮನೆಯಿಂದ ಹೊರಗೆ ಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಳ್ಳಿ, ಪರಸ್ಪರ ಅಂತರ ಕಾಪಾಡಿ ಕೈಗೆ ಆಗಾಗ ಸ್ಯಾನಿಟೈಸರ್ ಹಾಕಿ, ಸಾಬೂನಿಂದ ಕೈಗಳನ್ನು ತೊಳೆಯಿರಿ. ರೈತ ಸಂಪರ್ಕ ಕೇಂದ್ರಕ್ಕೆ ಬಂದಾಗ ಒಬ್ಬರಿಂದ ಒಬ್ಬರು ಅಂತರ ಕಾಯ್ದು ಬೀಜಗಳನ್ನು ಪಡೆಯುವಂತೆ ಹೇಳಿದರು.

    ಬಸವನಬಾಗೇವಾಡಿಯ ಸಹಾಯಕ ಕೃಷಿ ನಿರ್ದೇಶಕ ಎಂ. ಎಚ್. ಯರಝರಿ ಮಾತನಾಡಿ, ಸರ್ಕಾರ ನಿಗದಿ ಪಡಿಸಿದ ಈ ಹಂಗಾಮಿನ ಬಿತ್ತನೆ ಬೀಜಗಳಾದ ತೊಗರಿ, ಸಜ್ಜಿ, ಮೆಕ್ಕೆಜೋಳ, ಹೆಸರು ಸೇರಿ ಇತರೆ ಬಿತ್ತನೆ ಬೀಜಗಳು ಈಗಾಗಲೇ ನಮ್ಮ ಇಲಾಖೆಯಲ್ಲಿ ಲಭ್ಯವಿದ್ದು, ಸೂರ್ಯಕಾಂತಿ ಶೀಘ್ರದಲ್ಲಿ ಬರುವ ನಿರೀಕ್ಷೆ ಇದೆ ಎಂದರು.

    ಕೃಷಿ ಅಧಿಕಾರಿ ಸಂತೋಷ ರಾಠೋಡ, ಕೃಷಿ ಸಹಾಯಕ ಅಧಿಕಾರಿಗಳಾದ ಎಂ. ಬಿ. ಪಿರಾಪುರ, ಎ.ಬಿ. ಹೂಗಾರ, ಜಿ. ಬಿ. ಮೆಡಕಿನಾಳ, ಗ್ರಾಪಂ ಮಾಜಿ ಅಧ್ಯಕ್ಷ ಮಲ್ಲಣ್ಣ ಲಚ್ಯಾಣ, ಮುಖಂಡರಾದ ಮಲ್ಲನಗೌಡ ನಾಡಗೌಡ, ಜಿ. ಬಿ. ಬಾಗೇವಾಡಿ, ಹನುಮಂತರಾಯ ಗುಣಕಿ, ರಮೇಶ ಚೌದ್ರಿ, ನಿಂಗನಗೌಡ ಪಾಟೀಲ, ಲೋಕೇಶ ಚಿಕ್ಕಮಠ, ನಬಿಸಾಬ ನಡುವಿನಮನಿ, ಬಸನಗೌಡ ಬಿರಾದಾರ, ರಾಜಶೇಖರ ಬಿರಾದಾರ, ಶರಣಬಸು ಮಡಿಕೇಶ್ವರ, ರೇಹಮಾನ್ ನದಾಫ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts