More

    ಟನ್ ಕಬ್ಬಿಗೆ ರೂ.3500 ಬೆಲೆ ಘೋಷಿಸಿ

    ಕಬ್ಬು ಬೆಳೆಗಾರರ ಸಂಘ ಮತ್ತು ಈರುಳ್ಳಿ ಬೆಳೆಗಾರರ ಸಂಘದ ಪದಾಧಿಕಾರಿಗಳ ಒತ್ತಾಯ

    ಹೂವಿನಹಡಗಲಿ: ಉತ್ತರಪ್ರದೇಶದ ಮಾದರಿಯಂತೆ ಒಂದು ಟನ್ ಕಬ್ಬಿಗೆ 3500 ರೂ.ಬೆಲೆ ಘೋಷಿಸಬೇಕು ಎಂಬುದೂ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಗ್ರೇಡ್2 ತಹಸೀಲ್ದಾರ್ ರವಿ ಕೊರವರಗೆ ಕಬ್ಬು ಬೆಳೆಗಾರರ ಸಂಘ ಮತ್ತು ಈರುಳ್ಳಿ ಬೆಳೆಗಾರರ ಸಂಘದ ಪದಾಧಿಕಾರಿಗಳು ಮಂಗಳವಾರ ಮನವಿ ಸಲ್ಲಿಸಿದರು.

    2021-22ನೇ ಸಾಲಿನಲ್ಲಿ ಸುಮಾರು 70 ಸಕ್ಕರೆ ಕಾರ್ಖಾನೆಗಳು 6.50 ಲಕ್ಷ ಟನ್ ಕಬ್ಬು ನುರಿಸಿವೆ. ಇದರ ಬಾಬತ್ತು 300 ಕೋಟಿ ರೂ ಬಾಕಿ ಉಳಿದಿದೆ. ಈ ಹಣಕ್ಕೆ ಬಡ್ಡಿ ಸೇರಿಸಿ ತಕ್ಷಣವೇ ಕೊಡಬೇಕು. ಕಬ್ಬು ಕಟಾವಿನ ಹಣವನ್ನು ಹೆಚ್ಚಿನ ಪ್ರಮಾಣದಲ್ಲಿ ರೈತರಿಂದಲೇ ವಸೂಲಿ ಮಾಡುತ್ತಿರುವುದನ್ನು ನಿಲ್ಲಿಸಬೇಕು. ಬೆಂಕಿ ಮತ್ತಿತರ ಅಪಘಾತ ಸಂಭವಿಸಿದ ವೇಳೆ ಕಬ್ಬು ಖರೀದಿಸಿದ ಹಣದಲ್ಲಿ ಶೇ.25 ಕಡಿತಗೊಳಿಸುತ್ತಿರುವುದನ್ನು ತಪ್ಪಿಸಬೇಕು ಎಂಬುದೂ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಮನವಿಯಲ್ಲಿ ಒತ್ತಾಯಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts