More

    ಬಿರುಗಾಳಿಗೆ ನೆಲಕ್ಕುರುಳಿದ ಬಾಳೆ ಬೆಳೆ

    ಹೂವಿನಹಡಗಲಿ: ತಾಲೂಕಿನ ದಾಸನಹಳ್ಳಿ ಗ್ರಾಮದಲ್ಲಿ ಬೀಸಿದ ಬಿರುಗಾಳಿ ಮತ್ತು ಸುರಿದ ಅಕಾಲಿಕ ಮಳೆಗೆ 50ಕ್ಕೂ ಅಧಿಕ ಎಕರೆ ಜಮೀನಿನಲ್ಲಿ ಕೊಯ್ಲಿಗೆ ಬಂದಿದ್ದ ಬಾಳೆ ತೋಟ ನೆಲಕಚ್ಚಿದೆ.

    ಕರಿಗಾರ ಲಕ್ಷ್ಮಪ್ಪ ಅವರ 3.82 ಎಕರೆ, ಕರಿಗಾರ ಕೋಟೆಪ್ಪ ಅವರ 2.50 ಎಕರೆ, ಡಿ.ಆರ್.ಲೀಲಾಹರ ಅವರ 2.50 ಎಕರೆ, ಡಂಬ್ರಳ್ಳಿ ಯಲ್ಲಪ್ಪ ಅವರ 5 ಎಕರೆ, ಹೊಸವಕ್ಕಲ ಮಂಜಪ್ಪ ಅವರ 5ಎಕರೆ, ಇಟಗಿ ನಾಗರಾಜ ಅವರ 4.ಎಕರೆ, ಗಾಣದ ಮಾಲತೇಶ ಅವರ 5 ಎಕರೆ, ಕಲಕೋಟಿ ದಿನೇಶ ಅವರ 3 ಎಕರೆ, ಬಸವರಾಜ ಕಲಕೋಟಿ ಅವರ 3ಎಕರೆ, ಬನ್ನಿಮಟ್ಟಿ ಸಣ್ಣತಾಮಪ್ಪ ಅವರ 4 ಎಕರೆ, ಮೇಡ್ಲೇರಿ ಪರಮೇಶಪ್ಪ ಅವರ 8 ಎಕರೆ ಹಾಗೂ ಕಿಲ್ಲೆ ಕೊಟ್ರಪ್ಪ ಅವರ 2.5 ಎಕರೆ ಜಮೀನಿನಲ್ಲಿನ ಬೆಳೆ ಹಾನಿಗೀಡಾಗಿದೆ. ಸ್ಥಳಕ್ಕೆ ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸೋಮವಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ.

    ಪ್ರತಿ ಎಕರೆಗೆ ಲಕ್ಷಾಂತರ ರೂ. ಖರ್ಚುಮಾಡಿ ಬೆಳೆದ ಬೆಳೆ ಪ್ರಕೃತಿ ವಿಕೋಪದಿಂದ ನಾಶವಾಗಿದೆ. ರೈತರು ಸಾಲವನ್ನು ತೀರಿಸಲಾಗದೆ ಆತ್ಮಹತ್ಯೆಯ ದಾರಿಯನ್ನು ಹಿಡಿಯುವುದು ಅನಿವಾರ್ಯವಾಗುತ್ತದೆ. ಕೂಡಲೇ ಸರ್ಕಾರ ರೈತರ ಸಂಕಷ್ಟವನ್ನು ಅರಿತು ಪ್ರತಿ ಎಕರೆಗೆ 50 ಸಾವಿರ ಪರಿಹಾರ ಧನ ನೀಡಬೇಕು ಎಂದು ರೈತ ಕೋಟೆಪ್ಪ ಕಲಕೋಟಿ ಹೇಳಿದರು. ತಾಲೂಕಿನ ದಾಸರಹಳ್ಳಿ ಗ್ರಾಮದ ರೈತರ ಬಾಳೆ ಬೆಳೆ ನಾಶವಾದ ಬಗ್ಗೆ ಪರಿಶೀಲನೆ ಮಾಡಿದ್ದೇವೆ. ಸರ್ಕಾರಕ್ಕೆ ವರದಿ ಕಳುಹಿಸಲಾಗುವುದು ಎಂದು ಹೂವಿನಹಡಗಲಿ ಹಿರಿಯ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಹನುಮಂತನಾಯ್ಕ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts